Rain Alert: ಮಳೆ.. ಮಳೆ.. ಭರ್ಜರಿ ಮಳೆ ಶುರು!
ಮಳೆ ಇಲ್ಲದೆ ಬೇಸಿಗೆ ಭಾರಿ ಬಿಸಿಲಿನಿಂದ ಕೂಡಿದ್ದು, ಹನಿ ಹನಿ ನೀರಿಗೂ ಜನರು ಇದೀಗ ಪರದಾಡುತ್ತಿದ್ದಾರೆ. ಹಳ್ಳಿಗಳ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಇದೇ ಸಮಯದಲ್ಲಿ ಭರ್ಜರಿ ಮಳೆ ಶುರುವಾಗಿದ್ದು, ರಾಷ್ಟ್ರ ರಾಜಧಾನಿ ತೊಯ್ದು ತೊಪ್ಪೆಯಾಗಿ ಹೋಗುವಷ್ಟು ಮಳೆ ಬೀಳುತ್ತಿದೆ. ಹಾಗೇ ಕನ್ನಡಿಗರಿಗೂ ಮಳೆಯ ವಿಚಾರದಲ್ಲಿ ಸಿಹಿಸುದ್ದಿ ಸಿಗುತ್ತಿದೆ!
ನೀರು ಇಲ್ಲ.. ಎಲ್ಲಾ ಕಡೆಯೂ ಒಣ ಭೂಮಿ ಕಾಣುತ್ತಿದೆ. ಮಳೆ ಇಲ್ಲದೆ ಭೂಮಿ ಸಂಪೂರ್ಣ ಒಣಗಿ ಹೋಗಿದ್ದು ಜನ ಪರದಾಡುತ್ತಿದ್ದಾರೆ. ಇದೆಲ್ಲವೂ ಮನುಷ್ಯ ಮಾಡುತ್ತಿರುವ ಎಡವಟ್ಟು & ಅಹಂಕಾರದ ಫಲಿತಾಂಶ ಎನ್ನಬಹುದು. ಭೂಮಿ ಮೇಲೆ ಹೇಗೆ ಬದುಕಬೇಕು ಅಂತಾ ನಮ್ಮ ಹಿರಿಯರು ಕಲಿಸಿಕೊಟ್ಟು ಹೋಗಿದ್ದಾರೆ. ಆದ್ರೂ ಮನುಷ್ಯ ಸಾಕಷ್ಟು ಎಡವಟ್ಟು ಮಾಡುತ್ತಾ, ಸಮಸ್ಯೆ ಸುಳಿಗೆ ಸಿಲುಕುತ್ತಿದ್ದಾನೆ. ಹೀಗಿದ್ದಾಗ ಪ್ರಕೃತಿ ಮಾತೆ ಒಂದಷ್ಟು ಕರುಣೆ ತೋರಿಸಿದ್ದು ಕರ್ನಾಟಕ ಸೇರಿದಂತೆ ಉತ್ತರ ಭಾರತದಲ್ಲಿ ಭರ್ಜರಿ ಮಳೆ ಆರಂಭ ಆಗಿದೆ.

ಮಳೆ ಬರಬೇಕು.. ನೀರು ಸಿಗಬೇಕು!
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಶುರು ಆಗಿದೆ. ಅಲ್ಲದೆ ಕರ್ನಾಟಕದ ಬಯಲು ಸೀಮೆ ಭಾಗದಲ್ಲೂ ಮಳೆ ಬೀದ್ದಿದೆ. ಹೀಗಿದ್ದಾಗ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿ ದೆಹಲಿ ನಲುಗಿ ಹೋಗಿತ್ತು. ಇದೀಗ ಇಂದು ಹಾಗೂ ನಾಳೆ ಭರ್ಜರಿ ಮಳೆ ಬೀಳುವ ಬಗ್ಗೆ ಮಾಹಿತಿ ನೀಡಲಾಗಿದೆ.
ಗುಡುಗು ಸಹಿತ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ, ಹವಾಮಾನ ಇಲಾಖೆ ಅಧಿಕಾರಿಗಳು. ಹಾಗೇ ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ಕೂಡ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಇದೆ. ಮತ್ತೊಂದು ಕಡೆ ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಬೀಳಲಿದೆ ಎಂಬ ಮುನ್ಸೂಚನೆ ಕೂಡ ಸಿಕ್ಕಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬಿಸಿಲಿನ ಅಬ್ಬರಕ್ಕೆ ಕರ್ನಾಟಕ ತತ್ತರ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಬೆಂ. ನಗರ, ಬೆಂ. ಗ್ರಾಮಾಂತರ, ರಾಮನಗರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಇದೀಗ ಬೀಳುತ್ತಿದೆ. ಹೀಗಿದ್ದಾಗಲೇ ಮೆಲ್ಲಗೆ ಕರ್ನಾಟದಲ್ಲಿ ಕುಡ ಮಳೆಯ ಅಬ್ಬರ ಶುರುವಾಗಿರುವುದು ಒಂದಷ್ಟು ನೆಮ್ಮದಿ ತರುತ್ತಿದೆ. ಹಾಗೇ ಉತ್ತರ ಭಾರತದಲ್ಲೂ ಭರ್ಜರಿ ಮಳೆ ಬೀಳುತ್ತಿದೆ.

ಒಟ್ನಲ್ಲಿ ಮನುಷ್ಯ ತಾನೇ ಮಾಡಿದ ತಪ್ಪಿಗೆ ತಾನೇ ಈಗ ಶಿಕ್ಷೆ ಅನುಭವಿಸುವ ಪರಿಸ್ಥಿತಿಯು ನಿರ್ಮಾಣ ಆಗಿದೆ. ಪ್ರಕೃತಿ ಮಾತೆ ಮೇಲೆ ನಡೆಸಿದ ದೌರ್ಜನ್ಯಕ್ಕೆ, ಪ್ರಕೃತಿ ಕೂಡ ತಕ್ಕಪಾಠ ಕಲಿಸುತ್ತಿದೆ. ಅದ್ರಲ್ಲೂ ಈ ಬಾರಿ ಪ್ರಾಕೃತಿಕ ವಿಕೋಪದ ಕಾರಣಕ್ಕೆ ಇಡೀ ದೇಶ ನರಳಿದ್ದು, ಮುಂದಿನ ದಿನಗಳಲ್ಲಾದರೂ ಮನುಷ್ಯ ಬದಲಾಗಿ ಪ್ರಕೃತಿ ಉಳಿಸಲು ಮುಂದಾಗಬೇಕಿದೆ.
ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ ಮಳೆ
ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯ ಅಬ್ಬರ ಶುರುವಾಗಿದ್ದು ಜನರು ಖುಷ್ ಆಗಿದ್ದಾರೆ. ಅದರಲ್ಲೂ ನೀರನ್ನೇ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ, ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ. ಇನ್ನೇನು ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿ ನರಳಿದ್ದ ಅನ್ನದಾತ ರೈತರು ಮಳೆ ಹಿನ್ನೆಲೆ ಒಂದಷ್ಟು ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಬರುವ ನಿರೀಕ್ಷೆ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಜನ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಸರಿ ಹೋಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.












Click it and Unblock the Notifications