Chandrayaan-3: ಚಂದ್ರಯಾನ ಸಾಧನೆ, ಪಾಕಿಸ್ತಾನದ ಮಾನ ತೆಗೆದ ಯುವಕರು!
ಪಾಕಿಸ್ತಾನದ ಬಗ್ಗೆ ಅದೆಷ್ಟು ಬೈದರು ಸಾಕಾಗಲ್ಲ. ಇತ್ತ ಭಾರತ ಚಂದ್ರಯಾನ ಯೋಜನೆ ಮೂಲಕ ಚಂದ್ರನ ನೆಲ ತಲುಪಿದೆ. ಆದರೆ ಪಾಕಿಸ್ತಾನ ಮಾತ್ರ ಇನ್ನೂ ತನ್ನ ಪ್ರಜೆಗಳಿಗೆ ನೀರು, ಸೂರು, ಕರೆಂಟ್ ಕೊಡೋದಕ್ಕೂ ಆಗ್ತಿಲ್ಲ. ಹೀಗಿದ್ದಾಗ ಭಾರತದ ಸಾಧನೆ ಕುರಿತು ಪಾಕಿಸ್ತಾನದ ಪ್ರಜೆಗಳು ಹೇಳ್ತಾ ಇರೋದು ಏನು ಗೊತ್ತಾ? ಅದನ್ನು ಒಮ್ಮೆ ನೀವೆ ಕೇಳಿ, ಆಗ ಗೊತ್ತಾಗುತ್ತೆ ಪಾಕಿಸ್ತಾನದ ಪರಿಸ್ಥಿತಿ.
ಆರ್ಥಿಕವಾಗಿ ದಿವಾಳಿತನ, ತಿನ್ನಲು ಅನ್ನವೂ ಇಲ್ಲ, ಗೋದಿ ಹಿಟ್ಟಿಗಾಗಿ ನಡೆಯುತ್ತಿರುವ ಕೊಲೆಗಳು. ಹೀಗೆ ಪಾಕಿಸ್ತಾನದ ಪರಿಸ್ಥಿತಿ ಬಿಡಿಸಿಟ್ಟರೆ ಒಂದು ದಿನವೇ ಬೇಕು ಅದರ ಪಟ್ಟಿ ಹೇಳಲು. ಉದ್ಯೋಗ ಸಿಗದೆ ಪಾಕಿಸ್ತಾನ ಯುವಕರು ದರೋಡೆ, ಕಳ್ಳತನಕ್ಕೆ ಇಳಿದಿದ್ದಾರೆ. ದಿನನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಗೊತ್ತಾಗುತ್ತಲೇ ಇರುತ್ತೆ. ಈಗ ಕೂಡ ಅಷ್ಟೇ ಭಾರತದ ಚಂದ್ರಯಾನ-3 ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ ಪಾಕ್‌ನ ಪ್ರಜೆಗಳು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ದೇಶದ ಮಾನ ಹರಾಜು ಹಾಕಿದ್ದಾರೆ ಪಾಕಿಸ್ತಾನದ ಜನ.

ನೋಡು ಬಾ ಈ ಪಾಕಿಸ್ತಾನವ!
ಹೌದು, ಭಾರತ ತನ್ನ ಚಂದ್ರಯಾನ-3 ಯೋಜನೆಯ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಈ ಸಾಧನೆ ಮಾಡಲು ಜಗತ್ತಿನ ಯಾವುದೇ ದೇಶಕ್ಕೂ ಈವರೆಗೆ ಸಾಧ್ಯವೇ ಆಗಿರಲಿಲ್ಲ. ಹೀಗಾಗಿ ಭಾರತದ ಸಾಧನೆ ಕುರಿತು ಜಗತ್ತಿನ ಮೂಲೆ ಮೂಲೆಯಿಂದ ಶುಭಾಶಯ ಹರಿದು ಬರುತ್ತಿದೆ. ಅದರಲ್ಲೂ ಪಾಕಿಸ್ತಾನದ ಜನರು ಕೂಡ ಭಾರತಕ್ಕೆ ಜೈ ಅಂತಿದ್ದಾರೆ. ಹೀಗೆ ಪಾಕಿಸ್ತಾನಿ ಯೂಟ್ಯೂಬರ್ ಸ್ಥಳೀಯರಲ್ಲಿ ಭಾರತದ ಸಾಧನೆ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ತಮ್ಮ ಪರಿಸ್ಥಿತಿ ಬಿಡಿಸಿಟ್ಟಿರುವ ಪಾಕಿಸ್ತಾನದ ಜನರು, ಅಲ್ಲಿನ ರಾಜಕಾರಣಿಗಳ ಬಗ್ಗೆ ಹಾಗೂ ಸರ್ಕಾರದ ಕುರಿತು ಬೈದಿದ್ದಾರೆ. ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಚಂದ್ರನ ಮೇಲೆ ವಾಸಿಸುತ್ತಿರುವ ಪಾಕಿಸ್ತಾನ ಜನ!
ಪಾಕಿಸ್ತಾನಿ ಯೂಟ್ಯೂಬರ್ ಜನರನ್ನ ಪ್ರಶ್ನೆ ಕೇಳುವಾಗ ಉತ್ತರ ನೀಡಿರುವ ಅಲ್ಲಿನ ಜನರು, ಭಾರತದ ಸಾಧನೆಗೆ ಜೈ ಎಂದಿದ್ದಾರೆ. ಅದೇ ಸಮಯದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಕುರಿತು ಆಕ್ರೋಶ ಹೊರಹಾಕಿದ್ದಾರೆ. ನಾವು ಈಗಾಗಲೇ ಚಂದ್ರನ ಮೇಲೆ ವಾಸ ಮಾಡುತ್ತಿದ್ದೇವೆ. ನಿಮಗೆ ಈ ವಿಚಾರ ಗೊತ್ತಿಲ್ಲವಾ? ಎಂದು ಯೂಟ್ಯೂಬರ್‌ಗೆ ಸ್ಥಳೀಯ ಮರು ಪ್ರಶ್ನೆಯನ್ನ ಹಾಕಿದ್ದಾನೆ. ಅದು ಹೇಗೆ? ಅಂತಾ ಯೂಟ್ಯೂಬರ್ ಮತ್ತೆ ಪ್ರಶ್ನೆ ಕೇಳಿದಾಗ. ಚಂದ್ರನಲ್ಲಿ ಉತ್ತಮವಾದ ನೀರು ಸಿಗುತ್ತಾ? ಇಲ್ಲ, ಚಂದ್ರನ ಮೇಲೆ ಕರೆಂಟ್ ಇದೆಯಾ? ಇಲ್ಲ, ಹಾಗೇ ಅಲ್ಲಿ ಗ್ಯಾಸ್ ಇದೆಯಾ? ಇಲ್ಲ. ಅದೇ ರೀತಿ ಪಾಕಿಸ್ತಾನದಲ್ಲೂ ಏನೂ ಇಲ್ಲ ಎಂದಿದ್ದಾರೆ.

ಈ ಮೂಲಕ ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ. ಚಂದ್ರ ಮತ್ತು ಪಾಕಿಸ್ತಾನ ನಡುವೆ ಸಾಮ್ಯತೆ ಇದೆ. ಎರಡರಲ್ಲೂ ನೀರು & ವಿದ್ಯುತ್ ಸೌಲಭ್ಯಗಳಿಲ್ಲ. ಪಾಕಿಸ್ತಾನದಲ್ಲಿ ಪ್ರಜೆಗಳಿಗೆ ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಚಂದ್ರನಲ್ಲಿರುವ ವಾತಾವರಣವನ್ನು ಪಾಕಿಸ್ತಾನದ ಪ್ರಜೆಗಳು ಇಲ್ಲೇ ಅನುಭವಿಸುತ್ತಿದ್ದಾರೆ ಎಂದು ಅಲ್ಲಿನ ಜನರು ಆಕ್ರೋಶವನ್ನು ಹೊರಹಾಕಿದ್ದಾರೆ. ಹೀಗೆ ಭಾರತದ ಸಾಧನೆಗೆ ಪಾಕಿಸ್ತಾನದ ಜನರು ಜೈ ಎನ್ನುವ ಮೂಲಕ ತಮ್ಮ ಪಾಕಿಸ್ತಾನದ ಭೀಕರ ಪರಿಸ್ಥಿತಿಯನ್ನೂ ಬಿಚ್ಚಿಟ್ಟಿದ್ದಾರೆ. ಆದರೆ ಅದರಲ್ಲಿ ಒಂದು ತುಣುಕು ಈಗ ವೈರಲ್ ಆಗಿದೆ.
Meanwhile, the Sense of Humor of Pakistani People are always top class. This on Chandrayaan pic.twitter.com/Y127YPeyIv
— Joy (@Joydas) August 23, 2023
ಇಸ್ರೋ ಗ್ರೇಟ್ ಎಂದ ಪಾಕ್ ಮಾಜಿ ಸಚಿವ
ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ದಿನವೇ ಪಾಕಿಸ್ತಾನಿ ರಾಜಕಾರಣಿಗಳು ಗ್ರೇಟ್ ಗ್ರೇಟ್ ಎಂದಿದ್ದರು. ಇನ್ನು ಟ್ವೀಟ್ ಮೂಲಕ ಪಾಕ್ ಮಾಜಿ ಸಚಿವರಾದ ಫಾವದ್ ಚೌಧರಿ ಭಾರತಕ್ಕೆ ಶುಭ ಕೋರಿದ್ದರು. ಇದು ಭಾರತಕ್ಕೆ ಅದ್ಭುತ ಸಮಯ. ಚಂದ್ರಯಾನ-3 ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಸ್ರೋ ಅಧ್ಯಕ್ಷ ಸೋಮನಾಥ್ ಅವರ ಜೊತೆ ಯುವ ವಿಜ್ಞಾನಿಗಳು ಸಂಭ್ರಮಿಸಿದ್ದನ್ನ ನೋಡಿದೆ. ಕೇವಲ ಕನಸು ಕಾಣುವ ಯುವಕರು ಜಗತನ್ನ ಬದಲಾಯಿಸಲು ಸಾಧ್ಯ.. ಶುಭವಾಗಲಿ ಎಂದು ಟ್ವೀಟ್ ಮಾಡಿದ್ದರು.
ಸೋತಾಗ ಬೈಗುಳ.. ಗೆದ್ದಾಗ ಬಕೆಟ್!
2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಸೋತು ಹೋಗಿದ್ದಾಗ ಶತಕೋಟಿ ಭಾರತೀಯರು ಕಣ್ಣೀರು ಹಾಕಿದ್ದರು. ಅದರಲ್ಲೂ ಅಂದಿನ ಇಸ್ರೋ ಅಧ್ಯಕ್ಷರೇ ಅತ್ತುಬಿಟ್ಟರು. ಪರಿಸ್ಥಿತಿ ಹೀಗಿದ್ದಾಗ ಇಡೀ ಜಗತ್ತೇ ಭಾರತದ ಪ್ರಯತ್ನಕ್ಕೆ ನಮಿಸಿತ್ತು. ಆದ್ರೆ ಇದೇ ಹೊತ್ತಲ್ಲಿ ಆಗ ಪಾಕಿಸ್ತಾನ ಐಟಿ ಸಚಿವನಾಗಿದ್ದ ಫಾವದ್ ಚೌಧರಿ, ಇಸ್ರೋ ಬಗ್ಗೆ ಆಡಿಕೊಂಡಿದ್ದರು. ಇದೀಗ ಸ್ವಲ್ಪ ಬುದ್ಧಿ ಬಂದಂತೆ ಕಾಣುತ್ತಿದ್ದು, ವಾಸ್ತವದ ಬಗ್ಗೆ ಮಾತನಾಡಿದ್ದಾರೆ. ಆದರೆ ಪಾಕಿಸ್ತಾನ ಪ್ರಜೆಗಳು ಅಲ್ಲಿನ ರಾಜಕಾರಣಿಗಳ ಬಂಡವಾಳ ಬಿಡಿಸಿಟ್ಟಿದ್ದಾರೆ.
ಬೀದಿಗೆ ಬಿದ್ದ ಪಾಕ್.. ಗೋದಿ ಹಿಟ್ಟಿಗೂ ಪರದಾಟ!
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿದೆ ಅಂದರೆ, ಅಲ್ಲಿನ ಜನ ಕೇವಲ ಗೋದಿ ಹಿಟ್ಟಿಗೂ ಬೀದಿಗೆ ಬಂದು ಹೋರಾಡುವ ಸ್ಥಿತಿ ಇದೆ. ಆದರೂ ಅಲ್ಲಿನ ರಾಜಕಾರಣಿಗಳು ಬುದ್ಧಿ ಕಲಿಯದೆ ಕಿತ್ತಾಡುತ್ತಾ, ಪಾಕಿಸ್ತಾನವನ್ನ ಇನ್ನಷ್ಟು ಮುಳುಗಿಸಿದ್ದಾರೆ. ಹೀಗಿದ್ದಾಗಲೇ ಭಾರತದ ಇಸ್ರೋ ಸಂಸ್ಥೆ ಬಾಹ್ಯಾಕಾಶ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಭಾರತದ ಸಾಧನೆಯ ಬಗ್ಗೆ ಪಾಕಿಸ್ತಾನದ ಜನರಿಗೂ ಖುಷಿಯಾಗಿದೆ. ಆದ್ರೆ ತಮ್ಮ ದೇಶದ ಪರಿಸ್ಥಿತಿ ಪಾಕಿಸ್ತಾನದ ನಾಗರಿಕರಿಗೆ ಬೇಸರ ತರಿಸಿದೆ.

ಅನ್ನ ಇಲ್ಲದಿದ್ದರೂ ಶಸ್ತ್ರಾಸ್ತ್ರ ಬೇಕಾ?
ಕೈಗೆ ಸಿಗದ ಹಣದುಬ್ಬರ & ಜೊತೆಯಲ್ಲೇ ಹಣಕಾಸಿನ ಅಸಮತೋಲನ. ಇದೆಲ್ಲವೂ ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನ ಕೂಡ ಪಾಕಿಸ್ತಾನ ಮಾರಾಟ ಮಾಡಿದೆ. ತುರ್ತು ನಿಧಿ ಸಂಗ್ರಹಿಸಲು ಹೊಸ ಕಾನೂನು ಜಾರಿ ತಂದಿರುವ ಪಾಕ್ ರಾಜಕಾರಣಿಗಳು ದೇಶವನ್ನ ಮಾರುತ್ತಿದ್ದಾರೆಂಬ ಆರೋಪ ಇದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ನೆರವಿನ ಹಸ್ತ ಚಾಚುತ್ತಿದೆ. ಆದರೂ ಸ್ಥಿತಿ ಸರಿ ಹೋಗುತ್ತಿಲ್ಲ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಕಿಸ್ತಾನ ಯುದ್ಧದಾಹ ಬಿಟ್ಟಿಲ್ಲ. ಸಾಲ ಮಾಡಿ ಶಸ್ತ್ರಾಸ್ತ್ರ ಖರೀದಿಸುತ್ತಾ ಭಾರತದ ವಿರುದ್ಧ ವಿಷ ಕಾರುತ್ತಿರುವ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹೀನಾಯವಾಗುತ್ತಿದೆ. ಆದರೆ ಭಾರತವು ಮಾತ್ರ ದಿನದಿಂದ ದಿನಕ್ಕೆ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಕಳೆದ 70 ವರ್ಷದಿಂದಲೂ ಭಾರತ ಹಂತ ಹಂತವಾಗಿ ಬೆಳೆದು ನಿಲ್ಲುತ್ತಿದೆ, ಇನ್ನೊಂದು ಕಡೆಯಲ್ಲಿ ಪಾಕಿಸ್ತಾನ ಕಳೆದ 70 ವರ್ಷದಿಂದ ಹಂತ ಹಂತವಾಗಿ ಉಗ್ರರ ಕೂಪವಾಗಿ ಬೆಳೆದಿದೆ. ಪರಿಸ್ಥಿತಿ ಹೀಗಿದ್ದಾಗಲೇ ಪಾಕಿಸ್ತಾನ ಜನ ಕೂಡ ಭಾರತಕ್ಕೆ ಜೈ ಅಂತಿದ್ದಾರೆ. ಹಾಗೇ ಪಾಕಿಸ್ತಾನಿ ರಾಜಕಾರಣಿಗಳಿಗೆ ಹಿಡಿಶಾಪ ಹಾಕಿ ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications