Film Operation Sindoor: ನಿರ್ದೇಶಕ 'ಆಪರೇಷನ್ ಸಿಂಧೂರ' ಸಿನಿಮಾ ಘೋಷಿಸಿ ಕ್ಷಮೆ ಕೇಳಿದ್ದೇಕೆ?

ನವದೆಹಲಿ, ಮೇ 10: ಪಾಕಿಸ್ತಾನದ ಮೇಲಿನ ಭಾರತದ ಪ್ರತಿದಾಳಿ 'ಆಪರೇಷನ್ ಸಿಂಧೂರ' (Operation Sindoor) ಎಂದು ಹೆಸರಿಡಲಾಗಿದೆ. ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಘೋಷಣೆ ಮಾಡಿದ ನಿರ್ದೇಶಕರು ಇದೀಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿದೆ. ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಅವರು ದೇಶದ ಜನರಿಗೆ ಕ್ಷಮೆಯಾಚನೆ ಮಾಡಿದ ಸಂಗತಿಯು ನಡೆದಿದೆ.

ಹೌದು, ಭಾರತ ಮತ್ತು ಪಾಕಿಸ್ತಾನದ ಯುದ್ಧ ಸಂದರ್ಭದಲ್ಲಿರುವಾಗ ಹೆಮ್ಮೆಯ ಭಾರತದ ಸೇನೆಯು ನಡೆಸಿದ 'ಆಪರೇಷನ್ ಸಿಂಧೂರ' ಹೆಸರನ್ನು ರಿಜಿಸ್ಟರ್ ಮಾಡಿದ್ದ ನಿರ್ದೇಶಕ ಉತ್ತಮ್ ಮಹೇಶ್ವರಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಆಪರೇಷನ್ ಸಿಂಧೂರ' ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದ ಅವರು ಜನರಲ್ಲಿ ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ್ದಾರೆ.

Director Uttam Maheshwari apologizes for announcing Operation Sindoor amid India-Pakistan war

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪಡೆ ಪಾಕ್ ಮೇಲೆ ದಾಳಿ ಮಾಡಿತು. ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ. ಈ ಮಧ್ಯೆ ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಅನೇಕ ಚಿತ್ರರಂಗಗಳು ಈ 'ಆಪರೇಷನ್ ಸಿಂಧೂರ' ಸಿನಿಮಾ ಮಾಡಲು ಹೆಸರಿನ ನೋಂದಣಿಗೆ ಮುಗಿಬಿದ್ದಿದ್ದವು. ಅದರ ಬೆನ್ನಲ್ಲೆ ನಿರ್ದೇಶಕ ಉತ್ತಮ್ ಮಹೇಶ್ವರಿ ಅವರು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು.

ಭಾರತ ಪಾಕಿಸ್ತಾನ ಯುದ್ಧ ಮುಗಿದಿಲ್ಲ. ದಿನದಿಂದ ದಿನಕ್ಕೆ ಸಂದಿಗ್ಧ ಪರಿಸ್ಥಿತಿ ಉಂಟಾಗುತ್ತಿದೆ. ಈದೇಶಗಳ ಮಧ್ಯೆ ಸೂಕ್ಷ್ಮ ಪರಿಸ್ಥಿತಿ ಇದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆದು ಬಿಡುವ ಸಾಧ್ಯತೆಗಳು ಇವೆ. ಇಂಥಹ ಸೂಕ್ಷ್ಮ ಸನ್ನಿವೇಶದಲ್ಲಿ ಸಿನಿಮಾ ಮಾಡುವ ಯೋಜನೆಗೆ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿವೆ.

ನಿರ್ದೇಶಕರು ಸ್ಪಷ್ಟನೆ ಏನಿದೆ?

ಈ ಸಿನಿಮಾ ಮೂಲಕ ಯಾರ ಭಾವನೆಗಳನ್ನು ನೋಯಿಸುವುದು ಇಲ್ಲವೇ ಪ್ರಚೋದಿಸುವುದು ನಮ್ಮ ಉದ್ದೇಶ ಅಲ್ಲ. "ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ರೋಚಕ ಪ್ರಯತ್ನ, ಧೈರ್ಯ ಸಾಹಸ ಪ್ರೇರಿತವಾದ 'ಆಪರೇಷನ್ ಸಿಂಧೂರ್ ಆಧಾರಿತ' ಚಲನಚಿತ್ರ ನಿರ್ಮಿಸಲು ಮನಸ್ಸು ಮಾಡಿದ್ದೇವೆ. ಅದಕ್ಕಾಗಿ ಹೊಸ ಸಿನಿಮಾ ಘೋಷಣೆ ಮಾಡಿದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಚಲನಚಿತ್ರ ನಿರ್ಮಾಪಕರಾಗಿ ನನಗೆ ಪ್ರೇರಣೆ ಸಿಕ್ಕಿತ್ತು. "ನಮ್ಮ ಸೈನಿಕರು ಮತ್ತು ನಾಯಕತ್ವದ ಧೈರ್ಯ, ತ್ಯಾಗ ಮತ್ತು ಶಕ್ತಿಯಿಂದ ನಾನು ಪ್ರಭಾವಿತನಾಗಿ ಈ ಹೆಸರು ಘೋಷಿಸಿದ್ದೆ. ಒಂದೊಳ್ಳೆಯ ಪ್ರಬಲವಾದ ಕಥೆ ತೆರೆಗೆ ತರಲು ಮುಂದಾಗಿದ್ದೇನೆ ಎಂದು ಅವರು ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+