• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯ ಸೇತು ಅಪ್ಲಿಕೇಷನ್ ಬಳಸಲು 1921 ಡಯಲ್ ಮಾಡಿ

|

ನವದೆಹಲಿ, ಮೇ 06: ಸ್ಮಾರ್ಟ್ ಫೋನ್ ಇಲ್ಲದವರು ಕೂಡಾ ಇನ್ಮುಂದೆ ಆರೋಗ್ಯ ಸೇತು ಆಪ್ಲಿಕೇಷನ್ ಬಳಸಬಹುದಾಗಿದೆ. ಕೇಂದ್ರ ಸರ್ಕಾರವು ಈಗ ಐವಿಆರ್ ಎಸ್ ಸರ್ವೀಸ್ ಮೂಲಕ ಆರೋಗ್ಯ ಸೇತು ಅಪ್ಲಿಕೇಷನ್ ಸೌಲಭ್ಯ ಪಡೆಯುವಂತೆ ಮಾಡಿದೆ.

ಹೀಗಾಗಿ, ಇನ್ಮುಂದೆ ಫೀಚರ್ ಫೋನ್ ಹಾಗೂ ಲ್ಯಾಂಡ್ ಲೈನ್ ಫೋನ್ ಹೊಂದಿರುವವರು ಕೂಡಾ ಆರೋಗ್ಯ ಸೇತು ಆಪ್ ಜೊತೆ ಸಂಪರ್ಕ ಹೊಂದಬಹುದು. ಆರೋಗ್ಯ ಸೇತು ಇಂಟರ್ ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ ಎಸ್) ಗೆ ಚಾಲನೆ ನೀಡಲಾಗಿದೆ. ಇದು ಉಚಿತ ಸೇವಾ ಸೌಲಭ್ಯವಾಗಿದೆ. 1921 ಸಂಖ್ಯೆಗೆ ಕರೆ ಮಾಡಿ ನಿಮಗೆ ಬೇಕಾದ ಆರೋಗ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.

ಕೊರೊನಾವೈರಸ್ ಸೋಂಕು ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ?

ಈ IVRS ಸೇವೆಯು ಭಾರತದ 11 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ನಾಗರಿಕರು ನೀಡುವ ಪ್ರತಿ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುವುದು ಹಾಗೂ ಸ್ಮಾರ್ಟ್ ಫೋನ್ ಇಲ್ಲದವರಿಗೆ ಎಸ್ಎಂಎಸ್ ಮೂಲಕ ಅಲರ್ಟ್ ನೀಡಲಾಗುವುದು.

ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಇಲಾಖೆಯಿಂದ ತಯಾರಾಗಿರುವ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ ಸೋಂಕಿತರ ಮೇಲೆ ನಿಗಾ ಇಡಬಹುದಾಗಿದ್ದು, ಆರೋಗ್ಯವಂತರ ಹತ್ತಿರ ಸುಳಿದರೆ ಅಲರ್ಟ್ ನೀಡಬಹುದಾಗಿದೆ.

ವೈದ್ಯಕೀಯ ನೆರವು ಪಡೆಯುವುದು ಎಲ್ಲಿ? ಕೈಗೆ ಕ್ವಾರಂಟೈನ್ ಸ್ಟ್ಯಾಂಪ್ ಇರುವವರು ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಯಾರಿಗೆ ಕರೆ ಮಾಡಿ ತಿಳಿಸಬೇಕು ಎಂಬೆಲ್ಲ ಮಾಹಿತಿ ಈ ಆಪ್ ನಲ್ಲಿದೆ. ಗೂಗಲ್ ಪ್ಲೇಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

ಆರೋಗ್ಯ ಸೇತು App ಡೌನ್ಲೋಡ್ ಮಾಡಿಕೊಳ್ಳಿ: ಮೋದಿ ಕೊಟ್ಟ ಟಾಸ್ಕ್

ಕೊರೊನಾ ಕುರಿತ ಸಹಾಯವಾಣಿ: ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್‌ ಚಾಟ್‌ಬಾಟ್‌ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075 .

English summary
Catering to those who do not have smartphones and cannot download the Aarogya Setu app, the government has now implemented IVRS services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X