Dhruv Rathee: ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಸಹಾಯಕ್ಕೆ ಬಂದ ಉತ್ತರ ಪ್ರದೇಶದ ನೋಯ್ಡಾ ಪೊಲೀಸ್, ವೈರಲ್ ಪೋಸ್ಟ್‌ ಇಲ್ಲಿದೆ

Dhruv Rathee: ಖ್ಯಾತ ಯೂಟ್ಯೂಬರ್ ಧ್ರುವ ರಾಠಿಗೆ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಸಹಾಯ ಮಾಡಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಧ್ರುವ ರಾಠಿ ಉತ್ತರ ಪ್ರದೇಶದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಅವರು, ಗುಡ್‌ಜ್ಯಾಬ್ ನೋಯ್ಡಾ ಪೊಲೀಸ್, ನಿಮ್ಮ ತ್ವರಿತ ಕ್ರಮಕ್ಕೆ ಧನ್ಯವಾದಗಳು ಅಲ್ಲದೆ, ಈ ಅಭಿ ಮತ್ತು ನಿಯು ದಂಪತಿಗಳು ಮತ್ತು ಟ್ವಿಟರ್‌ನಲ್ಲಿ ನಕಲಿ ಸುದ್ದಿಗಳನ್ನು ಹರಡುವ ಮೂಲಕ ನಾಗರಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಈ ರೀತಿ ಇನ್ನೂ ಹಲವರು ಇದ್ದಾರೆ. ದಯವಿಟ್ಟು ಈ ವಿಚಾರದ ಬಗ್ಗೆಯೂ ತನಿಖೆ ನಡೆಸಿ ಎಂದು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

Dhruv Rathee Uttar Pradesh s Noida Police Step In to Help YouTuber Viral Post Explained

Dhruv Rathee: ನೋಯ್ಡಾ ಪೊಲೀಸರಿಗೆ ಧನ್ಯವಾದ ಎಂದಿದ್ಯಾಕೆ; ಪ್ರಕರಣದ ಹಿನ್ನೆಲೆ ಏನು ?

ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ಎರಡು ಗುರುತಿಸಲಾದ ಮತ್ತು ಇತರ ಕೆಲವು ಗುರುತಿಸಲಾಗದ ಎಕ್ಸ್‌ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೋಸ್ಟ್‌ಗಳು ಈ ಪ್ರದೇಶದಲ್ಲಿ ಭೀತಿ ಹುಟ್ಟಿಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದವು ಎಂದು ನೋಯ್ಡಾದ ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 197 (ಆರೋಪ, ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಹೇಳಿಕೆಗಳು) ಮತ್ತು 352 (ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲಕರವಾದ ಹೇಳಿಕೆಗಳು) ಮತ್ತು ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಅಕ್ಟೋಬರ್ 16 ರಂದು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ತಮ್ಮ ಪೋಸ್ಟ್‌ಗಳ ಮೂಲಕ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ ಎಂದು ನೋಯ್ಡಾದ ಸಬ್-ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಎರಡು ಪೋಸ್ಟ್‌ಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳಲ್ಲಿ ಒಂದು, "ಧ್ರುವ್ ರಾಠಿಗೆ ಮುಂದೆ ಕಠಿಣ ದಿನಗಳು ಬರಲಿವೆ. ಹಿಂದೂ ದೇವರುಗಳನ್ನು ಅಗೌರವಿಸುವ ಮತ್ತು ಸೇನೆ ಮತ್ತು ಪೊಲೀಸರನ್ನು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರಚೋದನೆ ನೀಡಿದ ವೀಡಿಯೊಗಳಿಗಾಗಿ ಅವರನ್ನು ಇಂದು ಸಂಜೆಯಷ್ಟೇ ನೋಯ್ಡಾದ ಪೊಲೀಸರು ಬಂಧಿಸಿದ್ದಾರೆ. ಇದರ ಹಿಂದಿನ ರಾಜಕಾರಣಿ ಎಷ್ಟು ಶಕ್ತಿಶಾಲಿಯೆಂದರೆ, ಅರವಿಂದ್ ಕೇಜ್ರಿವಾಲ್ ಕೂಡ ಅವರನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಮುಂದಿನ 10-15 ದಿನಗಳಲ್ಲಿ, ಧ್ರುವ್ ಠಾಠಿ ಭಾರತಕ್ಕೆ ವಾಪಸ್ ಬಂದಿರುವುದಕ್ಕಾಗಿ ವಿಷಾದಿಸಲಿದ್ದಾರೆ' ಎಂದು ಪೋಸ್ಟ್‌ ಮಾಡಲಾಗಿತ್ತು.

ಇನ್ನೊಂದು ಪೋಸ್ಟ್‌ನಲ್ಲಿ, "ಧ್ರುವ್ ರಾಠಿ ಅವರನ್ನು ಬಂಧಿಸಲಾಗಿದೆ. ಧ್ರುವ್ ರಾಠಿ ಅವರನ್ನು ಈ ಬಾರಿ ದೆಹಲಿ ಪೊಲೀಸರಲ್ಲ, ನೋಯ್ಡಾ ಪೊಲೀಸರೇ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಬಾಬಾ ಅವರಿಂದ ಯಾವುದೇ ಕರುಣೆಯನ್ನು ನಿರೀಕ್ಷಿಸಬೇಡಿ ಬರೆಯಲಾಗಿತ್ತು.

ನೋಯ್ಡಾ ಪೊಲೀಸರು ಹೇಳಿದ್ದೇನು

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನೋಯ್ಡಾದ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ನೋಯ್ಡಾದ ಪೊಲೀಸರಿಂದ ಧ್ರುವ ರಾಠಿ ಅವರನ್ನು ಬಂಧಿಸಿಲ್ಲ ಮತ್ತು ಅಂತಹ ಯಾವುದೇ ಮಾಹಿತಿಯನ್ನು ನೋಯ್ಡಾ ಪೊಲೀಸರ ಯಾವುದೇ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಪ್ರಸಾರ ಮಾಡಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಾಹಿತಿಯು ಸಂಪೂರ್ಣವಾಗಿ ಸುಳ್ಳು, ದಾರಿತಪ್ಪಿಸುವ ಮತ್ತು ಆಧಾರರಹಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+