ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಓಡಾಟ ನಿರ್ಬಂಧ ಏಪ್ರಿಲ್ 30ರವರೆಗೆ ವಿಸ್ತರಣೆ

ನವದೆಹಲಿ, ಮಾರ್ಚ್ 23: ಕೋವಿಡ್-19 ಸನ್ನಿವೇಶ ಮತ್ತೆ ವಿಷಮಿಸುತ್ತಿರುವ ಸಂದರ್ಭದಲ್ಲಿ ವಿಮಾನಯಾನ ಸಂಚಾರದ ಮೇಲಿನ ನಿರ್ಬಂಧವನ್ನು ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ. ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಏಪ್ರಿಲ್ 30ರವರೆಗೂ ಡಿಜಿಸಿಎ ನಿರ್ಬಂಧಿಸಿದೆ.

ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಸರಕು ಸಾಗಣೆ ವಿಮಾನಗಳು ಹಾಗೂ ಡಿಜಿಸಿಎ ವಿಶೇಷವಾಗಿ ಅನುಮತಿ ನೀಡಿರುವ ವಿಮಾನಗಳ ಓಡಾಟಕ್ಕೆ ಅನ್ವಯವಾಗುವುದಿಲ್ಲ.

ಇದಲ್ಲದೆ, ಅಂತಾರಾಷ್ಟ್ರೀಯ ನಿಗದಿತ ಸಂಚಾರದ ವಿಮಾನಗಳನ್ನು ಪ್ರಕರಣದಿಂದ ಪ್ರಕರಣದ ಆಧಾರದಲ್ಲಿ ಸಂಬಂಧಿತ ಪ್ರಾಧಿಕಾರವು ಆಯ್ದ ಮಾರ್ಗಗಳಲ್ಲಿನ ಸಂಚಾರಕ್ಕೆ ಅನುಮತಿ ನೀಡಬಹುದಾಗಿದೆ ಎಂದು ಡಿಜಿಸಿಎ ಮಂಗಳವಾರ ತಿಳಿಸಿದೆ.

DGCA Extend Suspension Of International Commercial Flights Till April 30

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಭಾರತದಲ್ಲಿ ಏರಿಕೆಯ ಹಂತದಲ್ಲಿದ್ದಾಗ ಕಳೆದ ವರ್ಷ ಮಾರ್ಚ್ 23ರಂದು ವೇಳಾಪಟ್ಟಿಗೆ ಅನುಗುಣವಾದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಅಮಾನತುಗೊಳಿಸಲಾಗಿತ್ತು. ಅದನ್ನು ಬಳಿಕ ಹಲವು ಬಾರಿ ವಿಸ್ತರಿಸಲಾಗಿತ್ತು. ಅದಕ್ಕೀಗ ಒಂದು ವರ್ಷವಾಗಿದ್ದು, ನಿರ್ಬಂಧವನ್ನು ಮತ್ತೆ ವಿಸ್ತರಿಸಲಾಗಿದೆ.

2020ರ ಜುಲೈನಿಂದ ಆಯ್ದ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ದ್ವಿಪಕ್ಷೀಯ 'ಏರ್ ಬಬಲ್' ವ್ಯವಸ್ಥೆಯಡಿ ವಿಶೇಷ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+