Get Updates
Get notified of breaking news, exclusive insights, and must-see stories!

ರೈಲು ಅಪಘಾತ : ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಸಾವು

ಹೈದರಾಬಾದ್, ಆಗಸ್ಟ್ 24 : ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಸೋಮವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟ ದೇವದುರ್ಗದ ಶಾಸಕ ವೆಂಕಟೇಶ್ ನಾಯಕ್ ಅವರ ಅಂತ್ಯ ಸಂಸ್ಕಾರ ಅರಕೆರ ಗ್ರಾಮದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಹಲವಾರು ನಾಯಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಸಮಯ 4 ಗಂಟೆ : ದೇವದುರ್ಗ ತಾಲೂಕಿನ ಅರಕೆರ ಗ್ರಾಮಕ್ಕೆ ಆಗಮಿಸಿದ ವೆಂಕಟೇಶ್ ನಾಯಕ್ ಮೃತದೇಹ.

ಸಮಯ 11.30 : ರಾಯಚೂರು ಜಿಲ್ಲಾಡಳಿತ ಪೆನುಕೊಂಡಕ್ಕೆ ವಿಶೇಷ ಆಂಬ್ಯುಲೆನ್ಸ್ ರವಾನಿಸಿದ್ದು, ಶಾಸಕ ವೆಂಕಟೇಶ್ ನಾಯಕ್ ಅವರ ಮೃತದೇಹವನ್ನು ಅಲ್ಲಿಂದ ರಾಯಚೂರಿಗೆ ತರಲಾಗುತ್ತಿದೆ. [ವೆಂಕಟೇಶ್ ನಾಯಕ್ ಕಿರುಪರಿಚಯ]

 rail

ಸಮಯ 10.30 : ವೆಂಕಟೇಶ್ ನಾಯಕ್ ಅವರು ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಮದುವೆ ಸಮಾರಂಭ ಮುಗಿಸಿಕೊಂಡು ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು.

ಸಮಯ 9.30 : ರೈಲು ಅಪಘಾತದಲ್ಲಿ ಮೃತಪಟ್ಟವರ ವಿವರಗಳು ಲಭ್ಯವಾಗಿವೆ. ಶಾಸಕ ವೆಂಕಟೇಶ್ ನಾಯಕ್ (70),
ರಾಯಚೂರಿನ ಪುಲ್ಲರಾವ್ (48), ಟಿ.ಎಸ್.ಟಿ.ರಾಜು (53), ಎಸಿ ಕೋಚ್ ಮೆಕ್ಯಾನಿಕ್ ಸೈಯದ್ ಅಹಮದ್ ಅವರ ಶವವನ್ನು ಗುರುತಿಸಲಾಗಿದೆ.

ರೈಲು ಅಪಘಾತ ಶಾಸಕರ ದುರ್ಮರಣ : ಬೆಂಗಳೂರು-ನಾಂದೇಡ್ ರೈಲು ಅಪಘಾತದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ.

ಗ್ರಾನೈಟ್ ತುಂಬಿದ ಲಾರಿ ಸೋಮವಾರ ಮುಂಜಾನೆ 2.30ರ ಸುಮಾರಿಗೆ ಮಡಕಶಿರ ಬಳಿ ಬೆಂಗಳೂರು-ನಾಂದೇಡ್ ರೈಲಿನ ಎಸಿ ಕೋಚ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ರೈಲ್ವೆ ಸಿಬ್ಬಂದಿ ಸೇರಿ 5 ಪ್ರಯಾಣಿಕರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬೆಂಗಳೂರು-ನಾಂದೇಡ್ ರೈಲಿನ ಎಚ್ 1 ಎಸಿ ಬೋಗಿಗೆ ಡಿಕ್ಕಿ ಹೊಡೆದಿದಿ. ಇದರಿಂದ ಬೋಗಿಯಲ್ಲಿದ್ದ ವೆಂಕಟೇಶ್ ನಾಯಕ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದಾರೆ. ವೆಂಕಟೇಶ್ ನಾಯಕ್ ಅವರ ಮೃತದೇಹವನ್ನು ಪೆನುಕೊಂಡ ಆಸ್ಪತ್ರೆಗೆ ಸಾಗಿಸಲಾಗಿದ್ದು, ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಟುಂಬದವರು ಆಸ್ಪತ್ರೆಗೆ ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.

ರೈಲ್ವೆ ಅಪಘಾತ ನಡೆದ ಸ್ಥಳಕ್ಕೆ ಪೆನುಕೊಂಡ ಶಾಸಕ ಪಾರ್ಥಸಾರಥಿ, ಎಸ್‌ ಪಿ ರಾಜಶೇಖರ್ ಮುಂತಾದವರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದಿಂದಾಗಿ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ರೈಲ್ವೆ ಇಲಾಖೆ ಸಹಾಯವಾಣಿಯನ್ನು ಆರಂಭಿಸಿದೆ. ಪೆನುಕೊಂಡ ರೈಲ್ವೆ ನಿಲ್ದಾಣ 0855220244, ಧರ್ಮಾವರಂ ರೈಲ್ವೆ ನಿಲ್ದಾಣ 0855224422, ಘಟನಾ ಸ್ಥಳ 09701374062.

ನಾಲ್ಕು ಬಾರಿ ರಾಯಚೂರು ಸಂಸದರಾಗಿದ್ದ ಎ.ವೆಂಕಟೇಶ್ ನಾಯಕ್ ಅವರಿಗೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. 62,070 ಮತಗಳನ್ನು ಪಡೆದು ಶಿವನಗೌಡ ನಾಯಕ್ ಅವರ ವಿರುದ್ಧ ಜಯಗಳಿಸಿದ್ದ ವೆಂಕಟೇಶ್ ನಾಯಕ್ ಅವರು ವಿಧಾನಸಭೆ ಪ್ರವೇಶಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+