10 ಲಕ್ಷಕ್ಕಿಂತ ಜಾಸ್ತಿ ಡೆಪಾಸಿಟ್ ಮಾಡಿದ್ದೀರಾ? ಕಾದಿದೆ ಗ್ರಹಚಾರ!

Subscribe to Oneindia Kannada

ಮುಂಬೈ, ಜನವರಿ 19: ನವೆಂಬರ್ 8ರ ನಂತರ ಬ್ಯಾಂಕ್ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಡೆಪಾಸಿಟ್ ಮಾಡಿದ್ದರೆ ನಿಮ್ಮನ್ನು ತೆರಿಗೆ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ವಿಚಾರಣೆ ನಡೆಸಲಿದ್ದಾರೆ.

ಅಪನಗದೀಕರಣ ಘೋಷಣೆಯಾದ ನಂತರ ಒಟ್ಟು 1.5 ಲಕ್ಷ ಬ್ಯಾಂಕ್ ಅಕೌಂಟುಗಳಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಣ ಡೆಪಾಸಿಟ್ ಆಗಿದೆ. ಹೀಗಾಗಿ ಇವರಿಂದ ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲು ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ.[ಅಪನಗದೀಕರಣ 2016ರ ಜನವರಿಯಿಂದಲೇ ಆರಂಭ: ಊರ್ಜಿತ್]

Deposited Rs 10 lakh or more in bank a/c after Nov 8? Be ready to reveal source of money in next 15 days

ಖಾತೆದಾರರು ತಮ್ಮ ಹಣದ ಮೂಲವನ್ನು ಇಲಾಖೆಗೆ ಸಲ್ಲಿಸಲು ಹೊಸ ವ್ಯವಸ್ಥೆ ಮಾಡಲಾಗಿದೆ. ಆನ್ಲೈನ್ ಮೂಲಕ ಖಾತೆದಾರರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕು. ಒಂದೊಮ್ಮೆ ಅಧಿಕಾರಿಗಳಿಗೆ ಸಂಶಯ ಕಂಡುಬಂದಲ್ಲಿ ಹೆಚ್ಚಿನ ದಾಖಲೆಗಳನ್ನು ಕೇಳಲಿದ್ದಾರೆ. ಇದನ್ನೂ ಆನ್ಲೈನಿನಲ್ಲೇ ಅಪ್ಲೋಡ್ ಮಾಡಬೇಕು. ಇದರ ಜತೆಗೆ ಸಹಕಾರಿ ಬ್ಯಾಂಕುಗಳಲ್ಲಿ ಡೆಪಾಸಿಟ್ ಆಗಿರುವ ಹಣದ ಮೇಲೆಯೂ ತೆರಿಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಅಪನಗದೀಕರಣದ ನಂತರ ಇಲ್ಲೀವರೆಗೆ ಒಟ್ಟು 1100 ದಾಳಿಗಳನ್ನು ತೆರಿಗೆ ಅಧಿಕಾರಿಗಳು ನಡೆಸಿದ್ದಾರೆ. ಇದರಲ್ಲಿ 600 ಕೋಟಿ ಹಣ ಸಿಕ್ಕಿದ್ದರೆ, ಸುಮಾರು150 ಕೋಟಿ ಹಣವನ್ನು ಹೊಸ ನೋಟುಗಳಲ್ಲೇ ವಶ ಪಡಿಸಿಕೊಳ್ಳಲಾಗಿದೆ.[ಬ್ಯಾಂಕ್ ಗಳ ಡಿವಿಡೆಂಡ್ ಅನುಮಾನ, ಸರಕಾರ- ಹೂಡಿಕೆದಾರ ಇಬ್ಬರಿಗೂ ಲಾಸ್]

Deposited Rs 10 lakh or more in bank a/c after Nov 8? Be ready to reveal source of money in next 15 days

ಒಟ್ಟಾರೆ 1.5 ಲಕ್ಷ ಬ್ಯಾಂಕ್ ಖಾತೆಗಳಲ್ಲಿ10 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿಯಾಗಿದೆ. ಆದರೆ ಸುಮಾರು 75 ಲಕ್ಷ ಜನರಿಗೆ ಸೇರಿದ 1 ಕೋಟಿ ಅಕೌಂಟುಗಳ ಬಗ್ಗೆ ಅನುಮಾನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳ ಬಗ್ಗೆ ಸರಿಯಾದ ತನಿಖೆ ಮಾಡಿದರೆ ಸುಮಾರು 50,000 ಕೋಟಿ ತೆರಿಗೆ ಸಂಗ್ರಹವಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

'ಈಗಾಗಲೇ ಹೆಚ್ಚಿನ ಮೊತ್ತವನ್ನು ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡಿದವರಿಗೆ ನೊಟೀಸ್ ಜಾರಿಗೊಳಿಸಲಾಗುತ್ತಿದೆ. ಹಳೆಯ ನೋಟುಗಳಲ್ಲಿ ದೊಡ್ಡ ಮೊತ್ತದ ಖರೀದಿ ಮಾಡಿದವರನ್ನೂ ತೆರಿಗೆ ಇಲಾಖೆಗಳು ವಿಚಾರಣೆ ಮಾಡುವ ಸಾಧ್ಯತೆ ಇದೆ. ಜನವರಿ ಅಂತ್ಯಕ್ಕೆ ಬ್ಯಾಂಕ್ ಖಾತೆ ವಿವರಗಳನ್ನು ಬ್ಯಾಂಕುಗಳು ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಲಿದ್ದು, ಫೆಬ್ರವರಿ ಮಧ್ಯಭಾಗದಲ್ಲಿ ಖಾತೆದಾರರಿಗೆ ನೊಟೀಸ್ ಜಾರಿಯಾಗಬಹುದು. ಆಗ ಖಾತೆದಾರರು ತಮ್ಮ ಹಣದ ಮೂಲದ ಮಾಹಿತಿ ನೀಡಬೇಕಾಗುತ್ತದೆ,' ಎಂದು ಆದಾಯ ತೆರಿಗೆ ತಜ್ಞರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People have to reveal their source of money in next 15 days, if they Deposited Rs 10 lakh or more in bank a/c after Nov 8.
Please Wait while comments are loading...