ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಹೌರಾ ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ದಟ್ಟ ಹೊಗೆ

|
Google Oneindia Kannada News

ಅಮರಾವತಿ, ನವೆಂಬರ್‌ 28: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ನಿಲ್ದಾಣಕ್ಕೆ ತೆರಳುತ್ತಿದ್ದ ಬೆಂಗಳೂರು-ಹೌರಾ ದುರಂತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ಬೈಂಡಿಂಗ್ ಆಗಿ ದಟ್ಟ ಹೊಗೆ ಹಬ್ಬಿದೆ ಎಂದು ಭಾರತೀಯ ರೈಲ್ವೇಯ ತನ್ನ ಹೇಳಿಕೆ ತಿಳಿಸಿದೆ.

ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೌರಾಕ್ಕೆ ಚಲಿಸುವ ದುರಂತೋ ಎಕ್ಸ್‌ಪ್ರೆಸ್, ಚಿತ್ತೂರು ಜಿಲ್ಲೆ (ಬೆಂಗಳೂರು ವಿಭಾಗ/ನೈಋತ್ಯ ರೈಲ್ವೆ) ಕುಪ್ಪಂ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಕೋಚ್‌ನಲ್ಲಿನ ಬ್ರೇಕ್ ಬ್ಲಾಕ್‌ನ ಘರ್ಷಣೆಯಿಂದಾಗಿ ಬ್ರೇಕ್ ಬೈಂಡಿಂಗ್ ಮತ್ತು ಹೊಗೆಯನ್ನು ಅನುಭವಿಸಿತು ಎಂದು ರೈಲ್ವೆ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರುಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರು

ರೈಲಿನಲ್ಲಿ ಕಂಡು ಬಂದ ದಟ್ಟ ಹೊಗೆಯಿಂದ ಆರಂಭದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿತ್ತು. ಆದರೆ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗವು ನಂತರ ಪತ್ರಿಕಾ ಹೇಳಿಕೆಯನ್ನು ನೀಡಿ ಇಲ್ಲ ಇದು ಬೆಂಕಿ ಅಲ್ಲ ರೈಲಿನ ಬ್ರೇಕ್ ಬೈಂಡಿಂಗ್ ಆಗಿದೆ ಎಂದು ಸ್ಪಷ್ಟಪಡಿಸಿತು. ನೈಋತ್ಯ ರೈಲ್ವೆಯ ಟ್ವಿಟ್ಟರ್‌ನಲ್ಲಿ ವಿಷಯ ಖಚಿತಪಡಿಸಿ, ಇದು ಅಗ್ನಿ ಅವಘಡವಲ್ಲ, ಇದು ಬ್ರೇಕ್ ಬೈಂಡಿಂಗ್ ರೈಲಿನಲ್ಲಿ ಬ್ರೇಕ್‌ ಬೆಂಡಿಂಗ್‌ ಆದ್ದರಿಂದ ಹೊಗೆ ಕಂಡು ಬಂದಿದೆ. ರೈಲ್ವೆ ಇಲಾಖೆ ಸಿಬ್ಬಂದಿ ಸಿಬ್ಬಂದಿ ತಕ್ಷಣ ಹೊಗೆಯನ್ನು ನಿಯಂತ್ರಿಸಿದ್ದಾರೆ. ರೈಲು 1.36ಕ್ಕೆ ಮತ್ತೆ ಸೇವೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದರು.

Dense smoke on Bengaluru Howrah duranto Express

ತನ್ನ ಪತ್ರಿಕಾ ಹೇಳಿಕೆಯಲ್ಲಿ ರೈಲ್ ಸೌಧ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿ, ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಕುಪ್ಪಂ ಬಳಿ ನಮ್ಮ ರೈಲಿನ ಗಾರ್ಡ್ ಸುಮಾರು 12.50 ಗಂಟೆಗಳ ಸಮಯದಲ್ಲಿ ರೈಲಿನ ಒಂದು ಕೋಚ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಆದರೆ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಕೆಲವು ತಪ್ಪು ವರದಿಗಳು ಬಂದಿವೆ ಎಂದು ಅವರು ತಿಳಿಸಿದರು.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳುಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳು

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ದುರಂತೋ ರೈಲನ್ನು ನಿಲ್ಲಿಸಿ ರೈಲ್ವೆ ಸಿಬ್ಬಂದಿ ಪರಿಶೀಲನೆ ನಡೆಸಿದರು. "ಕೋಚ್ ನಂಬರ್‌ನಲ್ಲಿ ಬ್ರೇಕ್ ಬ್ಲಾಕ್‌ನ ಘರ್ಷಣೆಯಿಂದಾಗಿ ಬ್ರೇಕ್ ಬೈಂಡಿಂಗ್ ಸಂಭವಿಸಿದೆ ಮತ್ತು ಇದರಿಂದ ಹೊಗೆ ಹೊರಬಂದಿದೆ ಎಂದು ಹೇಳಿಕೆ ತಿಳಿಸಿದೆ ಸ್ಪಷ್ಟಪಡಿಸಿದರು. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

English summary
A statement from the Indian Railways said that the Bengaluru-Howrah Express train was traveling to Kuppam station in Chittoor district of Andhra Pradesh and there was heavy smoke due to brake binding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X