ಕಾಶ್ಮೀರದಲ್ಲಿ ಹಿಮಪಾತ: ಹೆದ್ದಾರಿ ಬಂದ್- ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಎಚ್ಚರಿಕೆ!
2ನೇ ದಿನಕ್ಕೂ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದ್ದು ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಎಚ್ಚರಿಕೆ ನೀಡಲಾಗಿದೆ.
ಜಮ್ಮು ಜನವರಿ 31: ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು 2ನೇ ದಿನವೂ ಬಂದ್ ಮಾಡಲಾಗಿದೆ. ಚಂದರ್‌ಕೋಟ್ ಮತ್ತು ಬನಿಹಾಲ್ ಪ್ರದೇಶಗಳ ನಡುವೆ ಹಿಮ ಕಲ್ಲುಗಳು ಮತ್ತು ಮಣ್ಣು ಕುಸಿದಿರುವ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಮಂಗಳವಾರ ಮತ್ತೆ ಮುಚ್ಚಲಾಗಿದೆ. ಕಣಿವೆಯಲ್ಲಿನ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಹೆದ್ದಾರಿಯು ಕಾಶ್ಮೀರ ಕಣಿವೆಯ ಜೀವನಾಡಿಯಾಗಿದ್ದು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪರ್ಕವಾಗಿದೆ. ಅಗತ್ಯ ಸಾಮಗ್ರಿಗಳನ್ನು ಹೊತ್ತ ಕಾಶ್ಮೀರಕ್ಕೆ ಹೋಗುವ ಟ್ರಕ್‌ಗಳು ಮತ್ತು ಇತರ ವಾಹನಗಳು ಈ ಹೆದ್ದಾರಿಯ ಮೂಲಕ ಹಾದು ಹೋಗುತ್ತವೆ. ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ಹಣ್ಣು ಸಾಗಿಸುವ ಟ್ರಕ್‌ಗಳು ಈ ರಸ್ತೆಯ ಮೂಲಕ ಹೋಗುತ್ತವೆ.
Low visibility at the Delhi-Gurugram border due to fog formation in the city
— ANI (@ANI) January 31, 2023
Delhi airport says all flight operations are presently normal. pic.twitter.com/A77A1nyBqq
"ಜಮ್ಮು ಶ್ರೀನಗರ ಎನ್‌ಹೆಚ್‌ಡಬ್ಲ್ಯೂ ಇನ್ನೂ ಮುಚ್ಚಲಾಗಿದೆ. ಪುನಃಸ್ಥಾಪನೆ ಕಾರ್ಯವು ಪೂರ್ಣಗೊಳ್ಳುವವರೆಗೆ ಜನರು ಎನ್‌ಹೆಚ್-44 ನಲ್ಲಿ ಯಾವುದೇ ಪ್ರಯಾಣವನ್ನು ಕೈಗೊಳ್ಳದಂತೆ ಸೂಚಿಸಲಾಗಿದೆ "ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಂಚಾರ ಪೊಲೀಸರು ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಎಚ್ಚರಿಕೆ-
ಇನ್ನೂ ರಾಷ್ಟ್ರ ರಾಜಧಾನಿಯಲ್ಲೂ ದಟ್ಟ ಮಂಜು ಆವರಿಸಿದ್ದು ಗೋಚರತೆ ಕಡಿಮೆಯಾಗಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಪ್ರಕಾರ, ದೆಹಲಿ ವಿಮಾನ ನಿಲ್ದಾಣದಲ್ಲಿ 180 ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕವು (AQI) 193 ರಷ್ಟಿದೆ ಎಂದು ವರದಿಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಹಗಲಿನಲ್ಲಿ ಬಲವಾದ ಗಾಳಿಯನ್ನು ಮುನ್ಸೂಚಿಸಿದೆ. ಸದ್ಯ ದೆಹಲಿ ತಾಪಮಾನ 9 ಡಿಗ್ರಿ ಮತ್ತು ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಒಂದು ದಿನದ ಹಿಂದೆ, ದೆಹಲಿಯಲ್ಲಿ ತಾಪಮಾನ 18.9 ಡಿಗ್ರಿ ಇತ್ತು.

ಇದಕ್ಕೂ ಮುನ್ನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ದಟ್ಟ ಮಂಜು ಇರುವ ಎಚ್ಚರಿಕೆ ನೀಡಿದ್ದರು. ಇತ್ತೀಚಿನ ಎಚ್ಚರಿಕೆಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟ ಮಾಡುತ್ತಿವೆ.

ಜೊತೆಗೆ ಅಪ್‌ಡೇಟ್ ಮಾಡಲಾದ ಫ್ಲೈಟ್ ಮಾಹಿತಿಗಾಗಿ ಪ್ರಯಾಣಿಕರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿಮಾನ ನಿಲ್ದಾಣ ವಿನಂತಿಸಿದೆ. ಆದಾಗ್ಯೂ ಮತ್ತೊಂದು ನವೀಕರಣದ ಪ್ರಕಾರ, ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ ಟರ್ಮಿನಲ್ ಪ್ರವೇಶ ಗೇಟ್‌ಗಳಲ್ಲಿ ಅಂದಾಜು ಒಂದರಿಂದ 10 ನಿಮಿಷಗಳವರೆಗೆ ಕಾಯಬೇಕಾಗಿದೆ ಎಂದು ವಿಮಾನ ನಿಲ್ದಾಣ ಹೇಳಿಕೊಂಡಿದೆ.












Click it and Unblock the Notifications