ಕೊರೊನಾ ಎಫೆಕ್ಟ್‌: ರಫೇಲ್ ಫೈಟರ್ ಜೆಟ್ ವಿತರಣೆ ಸದ್ಯಕ್ಕಿಲ್ಲ

ನವದೆಹಲಿ, ಏಪ್ರಿಲ್ 15: ಕೊರೊನಾ ವೈರಸ್ ಭೀತಿಯಿಂದಾಗಿ ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳ ವಿತರಣೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗಿದೆ.

ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ.

ಈ ಹಿಂದಿನ ಒಪ್ಪಂದದಂತೆ ವಿಮಾನವು ಮೇ ಅಂತ್ಯದ ವೇಳೆಗೆ ಭಾರತವನ್ನು ತಲುಪಬೇಕಿತ್ತು ಆದರೆ ಈಗ ಕೆಲವು ವಾರಗಳ ವಿಳಂಬವಾಗಲಿದೆ. ಲಾಕ್‌ಡೌನ್‌ಗಳು ಮುಗಿದ ನಂತರವೇ ಅಂತಿಮ ವಿತರಣಾ ವೇಳಾಪಟ್ಟಿ ನಿರ್ಧಾರವಾಗಲಿದೆ.

Delivery Of Rafale Fighters Delayed By Few Weeks

ಪ್ರಸ್ತುತ, ಲಾಕ್ ಡೌನ್ ಕಾರಣ ವಿತರಣಾ ವೇಳಾಪಟ್ಟಿಯನ್ನು ಕೆಲವು ವಾರಗಳ ಕಾಲ ಮುಂದಕ್ಕೆ ಹಾಕಲಾಗಿದೆ.ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಐಎಎಫ್ ಮೂಲಗಳು ಇಲ್ಲಿ ತಿಳಿಸಿವೆ.

ಫ್ರಾನ್ಸ್‌ನಿಂದ ವಿತರಣೆಯಲ್ಲಿನ ವಿಳಂಬದ ಹೊರತಾಗಿ, ಅಂಬಾಲಾ ವಾಯುನೆಲೆಯಲ್ಲಿ ಇನ್ನೂ ಕೆಲವು ಸಿದ್ಧತೆಗಳು ಪೂರ್ಣಗೊಂಡಿಲ್ಲ, ಇದು ಫ್ರೆಂಚ್ ಮೂಲದ ಫೈಟರ್ ಗಳಿಗಾಗಿ ಮೊದಲ ಸ್ಕ್ವಾಡ್ರನ್ ಅನ್ನು ನಿರ್ಮಿಸಲಿದೆ.

ಒಟ್ಟು 36 ರಫೇಲ್ ವಿಮಾನವನ್ನು 60 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿ ಮಾಡಲು ನಿರ್ಧರಿಸಲಾಗಿತ್ತು. ಫ್ರಾನ್ಸ್‌ನಿಂದ ವಿತರಣೆಯಲ್ಲಿನ ವಿಳಂಬದ ಹೊರತಾಗಿ, ಅಂಬಾಲಾ ವಾಯುನೆಲೆಯಲ್ಲಿ ಇನ್ನೂ ಕೆಲವು ಸಿದ್ಧತೆಗಳು ಪೂರ್ಣಗೊಂಡಿಲ್ಲ, ಇದು ಫ್ರೆಂಚ್ ಮೂಲದ ಫೈಟರ್ ಗಳಿಗಾಗಿ ಮೊದಲ ಸ್ಕ್ವಾಡ್ರನ್ ಅನ್ನು ನಿರ್ಮಿಸಲಿದೆ.

ಒಟ್ಟು 36 ರಫೇಲ್ ವಿಮಾನವನ್ನು 60 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿ ಮಾಡಲು ನಿರ್ಧರಿಸಲಾಗಿತ್ತು.ರಫೇಲ್ ಫೈಟರ್ ಜೆಟ್ ವಿಮಾನಗಳಿಗಾಗಿ ಭಾರತೀಯ ವಾಯು ಸೇನೆಯು ದಶಕಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದೆ. ಈ ಮಧ್ಯೆ ಭಾರತ ಮತ್ತು ಫ್ರಾನ್ಸ್ ನಲ್ಲಿ ಸರಕಾರಗಳು ಬದಲಾಗಿವೆ.

ಫ್ರೆಂಚ್ ನಿರ್ಮಿತ 36 ರಫೇಲ್ ಫೈಟರ್ ಜೆಟ್ ಗಳನ್ನು ಡಿಅಸಾಲ್ಟ್ ನಿಂದ ಭಾರತವು ಖರೀದಿಸುತ್ತದೆ ಎಂದು 2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. 2012ನೇ ಇಸವಿಯಲ್ಲೇ ರಫೇಲ್ ವಿಮಾನವನ್ನು ಖರೀದಿ ಮಾಡಬೇಕು ಎಂದು ಆಯ್ಕೆ ಮಾಡಲಾಗಿತ್ತು.

ಆ ವೇಳೆಗೆ ಯುಎಸ್ ಎ, ಯುರೋಪ್ ಹಾಗೂ ರಷ್ಯಾದ ಪ್ರಸ್ತಾವವಗಳನ್ನು ಪಕ್ಕಕ್ಕೆ ಸರಿಸಿ, ರಫೇಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಲಾಗಿತ್ತು. ಏಕೆಂದರೆ ಭಾರತದ ವಾಯುಸೇನೆಯಲ್ಲಿದ್ದ ಯುದ್ಧ ವಿಮಾನಗಳು ಹಳೆಯದಾಗಿದ್ದವು.

ಹಾಗೆ ನೋಡಿದರೆ ಫ್ರಾನ್ಸ್ ನ ಡಿಅಸಾಲ್ಟ್ ನಿಂದ ಭಾರತ ಖರೀದಿಸಬೇಕು ಅಂದುಕೊಂಡಿದ್ದು 18 ಜೆಟ್ ಮಾತ್ರ. ಉಳಿದ 108 ವಿಮಾನವನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್ ನಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+