ದೆಹಲಿ ಪಾಲಿಕೆ ಚುನಾವಣೆ: ಎಎಪಿ ಬಿಜೆಪಿ ನಡುವೆ ತೀವ್ರ ಹಣಾಹಣಿ
ದೆಹಲಿ ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಮತಗಳ ಎಣಿಕೆ ಇಂದು ಆರಂಭಗೊಂಡಿದ್ದು ಎಎಪಿ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಸಮೀಕ್ಷೆಗಳ ಪ್ರಕಾರ, ಎಎಪಿ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಎಎಪಿ(ಆಮ್ ಆದ್ಮಿ ಪಕ್ಷ)ಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ನಡುವೆ ಸ್ಪರ್ಧೆ ಬಿಗಿಯಾಗಿದೆ.
ಡಿಸೆಂಬರ್ 4 ರಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಇಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದ್ದು ಬೆಳಿಗ್ಗೆ 10.10 ಕ್ಕೆ ಎಲ್ಲಾ 250 ಸ್ಥಾನಗಳಲ್ಲಿ ಎಎಪಿ ಹಾಗೂ ಬಿಜೆಪಿ ಮುನ್ನಡೆ ಸಾಧಿಸಿದೆ. ಎಎಪಿ 122 ಮತ್ತು ಮತ್ತು ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ 11 ಸ್ಥಾನಕ್ಕೆ ತೃಪ್ತಿಯಾಗಿದೆ. ಸುಮಾರು ಎರಡು ಗಂಟೆಗಳ ಮತ ಎಣಿಕೆ ಬಳಿಕ ಅಂದರೆ ಬೆಳಿಗ್ಗೆ 10 ಗಂಟೆಯ ನಂತರ ಎಎಪಿ ದೆಹಲಿ ಮಹಾನಗರ ಪಾಲಿಕೆ ನಿಯಂತ್ರಣವನ್ನು ಕಸಿದುಕೊಳ್ಳಬಹುದು ಎಂದು ತೋರುತ್ತಿದೆ. ಆಡಳಿತಾರೂಢ ಬಿಜೆಪಿ ಕೂಡ ಹಿಡಿತ ಸಾಧಿಸಲು ಶತಪ್ರಯತ್ನ ಮಾಡುತ್ತಿದೆ.

ಎಎಪಿ ಬಿಜೆಪಿ ನಡುವೆ ತೀವ್ರ ಪೈಪೋಟಿ
ಒಟ್ಟು ನಾಲ್ಕು ಎಕ್ಸಿಟ್ ಪೋಲ್‌ಗಳು 155 ವಾರ್ಡ್‌ಗಳಲ್ಲಿ ಎಎಪಿ ಗೆಲುವನ್ನು ಊಹಿಸಿದ್ದವು. ಬಿಜೆಪಿಗೆ 84 ಮತ್ತು ಕಾಂಗ್ರೆಸ್‌ಗೆ 7 ಸ್ಥಾನಗಳು ಪಡೆಯಲಿವೆ ಎಂದು ಹೇಳಿದ್ದವು. ಆದರೆ ಈ ಬಾರಿ ಎಎಪಿ ಫಲಿತಾಂಶ, ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಂತಿಲ್ಲ ಎಂಬುದು ಸ್ಪಷ್ಟವಾಗಿದೆ. ಬೆಳಿಗ್ಗೆ 8.30ಕ್ಕೆ 100 ವಾರ್ಡ್‌ಗಳಲ್ಲಿ 60ರಲ್ಲಿ ಎಎಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಕೂಡ ಹೆಚ್ಚು ಸ್ಥಾನಗಳನ್ನು ಪಡೆದು ಎಎಪಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಆದರೂ ಈ ಬಾರಿ ಆಮ್ ಆದ್ಮಿ ಪಕ್ಷವೇ ಜಯ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಸಂಭ್ರಮಾಚರಣೆಗೆ ಸಿದ್ಧವಾದ ಎಎಪಿ
ಪ್ರಸ್ತುತ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಬಳಿ ಕಾರ್ಯಕರ್ತರ ನೂಕುನುಗ್ಗಲು ಶುರುವಾಗಿದೆ. ಮನೀಶ್ ಸಿಸೋಡಿಯಾ ಮತ್ತು ರಾಘವ್ ಚಡ್ಡಾ ಅವರೊಂದಿಗೆ ಇದ್ದಾರೆ. ಪಕ್ಷದ ಕಛೇರಿಯಲ್ಲಿ ಬಲೂನ್‌ಗಳು ಮತ್ತು ಸಂಭ್ರಮಾಚರಣೆಯ ಪೋಸ್ಟರ್‌ಗಳು ಸಿದ್ಧವಾಗಿವೆ. ಗೆಲುವಿನ ಆತ್ಮವಿಶ್ವಾಸದಲ್ಲಿ ಕಾರ್ಯಕರ್ತರು ಸಂಭ್ರಮಿಸಲು ಸಿದ್ಧರಾಗಿದ್ದಾರೆ.
ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ದೆಹಲಿಯ ಆಡಳಿತದ ಕೆಲವು ಭಾಗಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಗೆಲ್ಲಲು ಹೋರಾಡುತ್ತಿವೆ. ತಾಂತ್ರಿಕ ಕಾರಣಗಳಿಂದಾಗಿ ತನ್ನ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಕಾಂಗ್ರೆಸ್ 247 ಸ್ಥಾನಗಳಲ್ಲಿ ಹೋರಾಟ ನಡೆಸುತ್ತಿದೆ. ಎಲ್ಲಾ 250 ವಾರ್ಡ್‌ಗಳಲ್ಲಿ ಡಿಸೆಂಬರ್ 4 ರಂದು ಮತದಾನ ನಡೆದಿತ್ತು.

ಬೋಗಸ್ ಆರೋಪಗಳನ್ನು ಮೆಟ್ಟಿನಿಂತೆ- ಕೇಜ್ರಿವಾಲ್
ಚುನಾವಣೆಯಲ್ಲಿ ಒಟ್ಟು 1349 ಅಭ್ಯರ್ಥಿಗಳು ನಿಂತಿದ್ದರು. ಇವರಲ್ಲಿ 709 ಮಹಿಳೆಯರಿದ್ದಾರೆ. ದೆಹಲಿಯ ಹಿಂದಿನ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ಒಂದು ಸಂಸ್ಥೆಯಾಗಿ ಏಕೀಕರಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.
ಎಎಪಿ ಕಳೆದ ವರ್ಷದ ಆರಂಭದಿಂದಲೇ ಚುನಾವಣೆಗೆ ತಯಾರಿ ನಡೆಸಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೇಜ್ರಿವಾಲ್ ಅವರು, 'ಬಿಜೆಪಿಯು ಹಲವಾರು ಎಎಪಿ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದೆ. ಎಎಪಿಯನ್ನು ಕೆಣಕಲು ಕಾಂಗ್ರೆಸ್ ಕೂಡ ಇದನ್ನು ಬಳಸಿಕೊಂಡಿದೆ. ಆದರೆ ಮುಖ್ಯಮಂತ್ರಿಯಾಗಿ ನಾನು ಬೋಗಸ್ ಆರೋಪಗಳನ್ನು ಮೆಟ್ಟಿನಿಂತೆ. ಕೇಂದ್ರೀಯ ಸಂಸ್ಥೆಗಳ ದುರುಪಯೋಗದಿಂದ ನಮ್ಮನ್ನು ಸೋಲಿಸಲಾಗುವುದಿಲ್ಲ' ಎಂದು ಕೇಜ್ರಿವಾಲ್ ಹೇಳುತ್ತಾರೆ.

ದೆಹಲಿ ಪಾಲಿಕೆ ಯಾರಿಗೆ?
ಕಳೆದೆರಡು ತಿಂಗಳುಗಳಲ್ಲಿ ಸಮಾನಾಂತರವಾಗಿ ನಡೆದ ಮೂರು ಚುನಾವಣಾ ಕದನಗಳಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯೂ ಒಂದಾಗಿದೆ. ಇದೇ ತಿಂಗಳು ನಡೆದ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಸದ್ಯ ದೆಹಲಿ ಮಹಾನಗರ ಪಾಲಿಕೆ ಫಲಿತಾಂಶ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications