Delhi Assembly Election 2025: ದೆಹಲಿ ಚುನಾವಣೆ, ಅರವಿಂದ ಕೇಜ್ರಿವಾಲ್‌ ಗ್ಯಾರಂಟಿಗಳೇನು

ನವದೆಹಲಿ, ಜನವರಿ 14: ದೆಹಲಿ ವಿಧಾನಸಭೆ ಚುನಾವಣೆ-2025ರ ಫಲಿತಾಂಶ ಕುತೂಹಲ ಮೂಡಿಸಿದೆ. ಈ ಚುನಾವಣೆ ಆಮ್‌ ಆದ್ಮಿ ಪಕ್ಷಕ್ಕೆ ಬಹುದೊಡ್ಡ ಸವಾಲಾಗಿದೆ. 2015, 2020ರಲ್ಲಿ ಗೆಲುವು ಸಾಧಿಸಿರುವ ಎಎಪಿ ಈ ಚುನಾವಣೆಯಲ್ಲಿಯೂ ಗೆದ್ದು, ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಮಾಜಿ ಮುಖ್ಯಮಂತ್ರಿ, ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸುತ್ತಿದೆ.

ದೆಹಲಿಯ ಆಡಳಿತ ಪಕ್ಷ ಎಎಪಿ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು.

Delhi Assembly Elections 2025 Arvind Kejriwals Guarantee To Have 7 To 8 Promises

ಎಎಪಿ ಚುನಾವಣಾ ಪ್ರಣಾಳಿಕೆಯನ್ನು 'ಅರವಿಂದ ಕೇಜ್ರಿವಾಲ್ ಗ್ಯಾರಂಟಿ' ಎಂದು ಕರೆಯುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಪಕ್ಷ 'ಮೋದಿ ಗ್ಯಾರಂಟಿ' ಎಂದು ಕರೆದಿತ್ತು. ಇದೇ ಮಾದರಿಯಲ್ಲಿ ರಾಷ್ಟ್ರ ರಾಜಧಾನಿಯ ಜನರಿಗೆ ಅರವಿಂದ ಕೇಜ್ರಿವಾಲ್ ಹಲವು ಭರವಸೆಗಳನ್ನು ನೀಡಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.

ಕೇಜ್ರಿವಾಲ್ ಗ್ಯಾರಂಟಿಯಲ್ಲಿನ ಭರವಸೆಗಳು: 2025ರ ದೆಹಲಿ ವಿಧಾನಸಭೆ ಚುನಾವಣೆಗೆ ಎಎಪಿಯ ಪ್ರಣಾಳಿಕೆ 8-10 ಭರವಸೆಗಳನ್ನು ಹೊಂದಿರುವ ನಿರೀಕ್ಷೆ ಇದೆ. ಇವುಗಳು ಉಚಿತ ವಿದ್ಯುತ್, ನೀರು, ಆರೋಗ್ಯ ಸೇವೆ, ಶಿಕ್ಷಣ, ತೀರ್ಥಯಾತ್ರೆಗೆಯನ್ನು ಹೊರತಾಗಿರುವ ಭರವಸೆಗಳು ಎಂಬ ಮಾಹಿತಿ ಇದೆ. ಈ ಬಾರಿ ಎಎಪಿ ಪ್ರಣಾಳಿಕೆ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಿವೆ.

'ಮಹಿಳಾ ಸಮ್ಮಾನ್ ಯೋಜನೆ', 'ಸಂಜೀವಿನಿ ಯೋಜನೆ' ಮೂಲಕ ದೆಹಲಿಯ ಚುನಾವಣೆ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿ ಎಎಪಿ ಪಕ್ಷವಿದೆ. ಆದಾಯ ತೆರಿಗೆ ಪಾವತಿ ಮಾಡದ ಮಹಿಳೆಯರಿಗೆ ನೀಡುವ ಸಹಾಯಧವನ್ನು 1 ರಿಂದ 2,100ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಎಎಪಿ ಈಗಾಗಲೇ ಭರವಸೆ ಕೊಟ್ಟಿದೆ.

'ಸಂಜೀವಿನಿ ಯೋಜನೆ' ಮೂಲಕ ದೆಹಲಿಯಲ್ಲಿ 60 ವರ್ಷ ದಾಟಿದ ಎಲ್ಲರಿಗೂ ಉಚಿತ ಆರೋಗ್ಯ ಸೇವೆಯನ್ನು ನೀಡಲಾಗುತ್ತದೆ ಎಂದು ಎಎಪಿ ಹೇಳಿದೆ. ಅಲ್ಲದೇ ಪಕ್ಷ ಅರ್ಚಕರು, ಗುರುದ್ವಾರದ ಮುಖ್ಯಸ್ಥರಿಗೆ ಮಾಸಿಕ 18,000 ರೂ. ನೀಡುವ ಭರವಸೆಯನ್ನು ನೀಡಿದೆ.

2013ರಿಂದಲೂ ಆಟೋ ರಿಕ್ಷಾ ಚಾಲಕರು ಎಎಪಿ ಪಕ್ಷದ ಪ್ರಮುಖ ಬೆಂಬಲಿಗರು. ಇವರಿಗೆ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದೆ. ಅಪಘಾತ ವಿಮೆಯಾಗಿ 15 ಲಕ್ಷ, ಆಟೋ ಚಾಲಕರ ಪುತ್ರಿಯರ ವಿವಾಹಕ್ಕೆ 1 ಲಕ್ಷದ ತನಕ ಆರ್ಥಿಕ ಬೆಂಬಲ, ವರ್ಷಕ್ಕೆ ಎರಡು ಬಾರಿ ಚಾಲಕರಿಗೆ ಸಮವಸ್ತ್ರ ಖರೀದಿಗಾಗಿ 2500 ರೂ. ನೀಡುವುದಾಗಿ ಪಕ್ಷ ಭರವಸೆ ಕೊಟ್ಟಿದೆ.

ದೆಹಲಿ ಜಲ ನಿಗಮದಲ್ಲಿನ ಬಿಲ್ ಬಾಕಿ ಮನ್ನಾ ಮಾಡುವುದು, ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವುದು, ಅಲ್ಲದೇ ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಭರವಸೆಯನ್ನು ಎಎಪಿ ಪಕ್ಷ ನೀಡಿದೆ. ಅಲ್ಲದೇ ಖಾಸಗಿ ಅಪಾರ್ಟ್‌ಮೆಂಟ್‌ಗಳು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹಣಕಾಸಿನ ನೆರವು ನೀಡುವ ಭರವಸೆಯನ್ನು ಪಕ್ಷ ನೀಡಿದೆ.

ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಿಗೂ ಈಗಾಗಲೇ ಎಎಪಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅರವಿಂದ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದೆಹಲಿಯ ಸಿಎಂ ಅತಿಶಿ ಕಲ್ಕಜಿ ಕ್ಷೇತ್ರದಿಂದ ಅಭ್ಯರ್ಥಿ. 2025ರ ಚುನಾವಣೆಯಲ್ಲಿ ಎಎಪಿ ಪಕ್ಷ ಗೆಲುವು ಸಾಧಿಸಿದರೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷ ಈಗಾಗಲೇ ಘೋಷಣೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+