Delhi Assembly Elections 2025: ದೆಹಲಿಯಲ್ಲಿ ಎಎಪಿಯಿಂದ ಅಮೆರಿಕ ಮಾದರಿ, ಏನದು ?

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗಿದೆ. ದೆಹಲಿಯಲ್ಲಿ ಫೆಬ್ರವರಿ 5ಕ್ಕೆ ಮತದಾನ ನಡೆಯಲಿದೆ. ಮತದಾನ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಇಲ್ಲಿ ಭರ್ಜರಿಯಾಗಿ ಚುನಾವಣಾ ಪ್ರಚಾರವನ್ನು ನಡೆಸುತ್ತಿವೆ. ಇನ್ನು ದೆಹಲಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಅಮೆರಿಕ ಮಾದರಿ ಚುನಾವಣೆ ನೀತಿಯನ್ನು ಅನುಸರಿಸುತ್ತಿದೆ. ಇದು ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಹೌದು ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷದ ವತಿಯಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತದೆ. ಇದೀಗ ದೆಹಲಿಯಲ್ಲೂ ಇದೇ ಮಾದರಿಯ ಚುನಾವಣೆ ನಡೆದಿದೆ. ಹಾಗಂತ ಈ ಬದಲಾವಣೆಯನ್ನ ಭಾರತೀಯ ಚುನಾವಣಾ ಆಯೋಗ ಜಾರಿ ಮಾಡಿಲ್ಲ. ಆಮ್‌ ಆದ್ಮಿ ಪಾರ್ಟಿಯೇ ಈ ರೀತಿ ಮಾಡುತ್ತಿದೆ. ಹಾಗಾದರೆ ಏನಿದು ಚುನಾವಣೆಗೆ ದೇಣಿಗೆ ಸಂಗ್ರಹ, ಇದರ ಉದ್ದೇಶವೇನು ಎನ್ನುವ ಮಾಹಿತಿ ಇಲ್ಲಿದೆ.

Delhi Assembly Elections 2025 AAPs American Model in Delhi

ದೆಹಲಿ ಚುನಾವಣೆ ಇದೀಗ ಅಮೆರಿಕ ಚುನಾವಣೆಯಂತಾಗಿದೆ. ಆದರೆ ಇದು ಭಾರತೀಯ ಚುನಾವಣೆ ಆಯೋಗ ಅಥವಾ ಯಾವುದೇ ಪ್ರಮುಖ ಬದಲಾವಣೆಯಿಂದ ಅಲ್ಲ. ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್‌ ಆದ್ಮಿ ಪಾರ್ಟಿಯ ಕೆಲವು ಪ್ರಮುಖ ನಾಯಕರು ಈ ರೀತಿಯ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಇದೀಗ ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್‌ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಕ್ರೌಡ್ ಫಂಡಿಂಗ್ (ದೇಣಿಗೆ) ಸಂಗ್ರಹಿಸುವುದಕ್ಕೆ ಮುಂದಾಗಿದ್ದಾರೆ. ಭಾನುವಾರ (ಜನವರಿ 12)ರಂದು ಈ ಅಭಿಯಾನವನ್ನು ಪ್ರಾರಂಭಿಸಿದ್ದು. ಒಟ್ಟು 40 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Delhi Assembly Elections 2025 AAPs American Model in Delhi

ದೆಹಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ದೇಣಿಗೆ ಸಂಗ್ರಹ ಮಾಡುವುದಕ್ಕೆ ಮುಂದಾಗಿದ್ದೇನೆ ದೆಹಲಿ ಜನರು ಇದಕ್ಕೆ ಸಹಕಾರಿಸಬೇಕು. ನಾನು ಯಾವುದೇ ಕಾರಣಕ್ಕೂ ಉದ್ಯಮಿಗಳಿಂದ ದೇಣಿಗೆ ತೆಗೆದುಕೊಳ್ಳಲ್ಲ. ನನ್ನ ರಾಜಕೀಯ ಜೀವನದಲ್ಲಿ ದೊಡ್ಡ ಉದ್ಯಮಿಗಳಿಗಿಂತ ಸಾಮಾನ್ಯ ಜನರ ಬೆಂಬಲವೇ ನನಗೆ ಮುಖ್ಯ ಅಂತ ಅತಿಶಿ ಅವರು ಹೇಳಿದ್ದಾರೆ.

ವ್ಯಾಪಾರ ಹಾಗೂ ಹಿತಾಸಕ್ತಿ ಮುಕ್ತ: ಈ ರೀತಿ ದೇಣಿಗೆ ಸಂಗ್ರಹ ಮಾಡುತ್ತಿರುವುದು ವ್ಯಾಪಾರ ಹಾಗೂ ಉದ್ಯಮಿಗಳ ಹಿತಾಸಕ್ತಿ ಮುಕ್ತವಾಗಿದೆ. ರಾಜಕೀಯದಲ್ಲಿರುವವರು ಹಾಗೂ ಪಕ್ಷಗಳು ಜನರಿಂದಲೇ ದೇಣಿಗೆ ಸ್ವೀಕರಿಸುವುದರಿಂದ ಪ್ರಾಮಾಣಿಕವಾಗಿ ಉಳಿಯಲು ಸಹಾಯ ಮಾಡುತ್ತದೆ. ಕಾರ್ಪೋರೇಟ್‌ಗಳಿಂದ ಹಾಗೂ ದೊಡ್ಡ ಉದ್ದಿಮೆಗಳಿಂದ ದೇಣಿಗೆ ಪಡೆಯದೆ ಇರುವುದಕ್ಕೆ ಆಮ್‌ ಆದ್ಮಿ ಪಾರ್ಟಿಯಿಂದ ಪ್ರಾಮಾಣಿಕ ರಾಜಕೀಯ ಸಾಧ್ಯವಾಗಿದೆ ಅಂತಲೂ ಅತಿಶಿ ಅವರು ಹೇಳಿದ್ದಾರೆ.

40 ಲಕ್ಷ ರೂಪಾಯಿ ದೇಣಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜನ ಅವರ ಕೈಯಲ್ಲಿ ಆದಷ್ಟು ದೇಣಿಗೆ ನೀಡುವ ಮೂಲಕ ಸಹಕಾರ ನೀಡಬೇಕು ಅಂತ ಅವರು ಮನವಿ ಮಾಡಿದ್ದಾರೆ.

ಎಎಪಿಗೆ ಸಿಗಲಿದೆಯೇ ಹ್ಯಾಟ್ರಿಕ್ ಗೆಲುವು: ಇನ್ನು ದೆಹಲಿಯಲ್ಲಿ ಇದೇ ಮೊದಲ ಬಾರಿ ಎಎಪಿಗೆ ಸಂಕಷ್ಟ ಎದುರಾಗಿದೆ. ಎಎಪಿ ದೆಹಲಿಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. ಆದರೆ, ಈ ಬಾರಿ ಹಲವು ಕಾರಣಕ್ಕೆ ಎಎಪಿ ಅಧಿಕಾರಕ್ಕೆ ಬರೋದು ಕಷ್ಟ ಅಂತ ಹೇಳಲಾಗ್ತಿದೆ.

70 ಸೀಟುಗಳಿರುವ ದೆಹಲಿ ವಿಧಾನಸಭೆಯಲ್ಲಿ ಈ ಬಾರಿ ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ತ್ರಿಕೋನ ಸ್ಪರ್ಧೆ ಇದೆ. ಆದರೆ, ಬಿಜೆಪಿ ಹಾಗೂ ಎಎಪಿ ನಡುವೆ ನೇರ ಹಣಾಹಣಿ ಇದೆ. ಒಂದು ಕಾಲದಲ್ಲಿ ದೆಹಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತಾದರೂ. ಇದೀಗ ಕಾಂಗ್ರೆಸ್‌ ದೆಹಲಿಯಲ್ಲಿ ಹೇಳಿಕೊಳ್ಳುವಷ್ಟು ಬಲಿಷ್ಠವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+