Video Viral: ಮಾಸ್ಕ್ ಧರಿಸಿ ಸೈಕಲ್ ಮೇಲೆ ಸಂಸತ್‌ಗೆ ಸಂಸದ ಎಂಟ್ರಿ, ನೆಟ್ಟಿಗರ ಪ್ರಶಂಸೆ

ನವದೆಹಲಿ, ಡಿಸೆಂಬರ್ 16: ದೆಹಲಿಯಲ್ಲಿ ಉಸಿರಾಡಲು ಯೋಗ್ಯವಲ್ಲದ ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಬೀಸುತ್ತಿದೆ. ರಾಜಧಾನಿಯ ಪರಿಸ್ಥಿತಿ ಹದಗೆಡುತ್ತಿದೆ. ಸಂಸತ್ ಚಳಿಗಾಲ ಅಧಿವೇಶನ ಈಗಾಗಲೇ ಶುರುವಾಗಿದೆ. ಇಂದು ಸಂಸತ್‌ಗೆ ಟಿಡಿಪಿ ಸಂಸದ ಅಪ್ಪಲನಾಯ್ಡು ಕಾಳಿಶೆಟ್ಟಿ ಅವರು ವಿಶೇಷ ರೀತಿಯಲ್ಲಿ ಆಗಮಿಸಿದ್ದು, ವಾಯುಮಾಲಿನ್ಯದ ಸಂದರ್ಭದಲ್ಲಿ ನಮ್ಮಗಳ ವರ್ತನೆ ಹೇಗಿರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ದೆಹಲಿ ಪರಿಸ್ಥಿತಿ, ವಾಯು ಮಾಲಿನ್ಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸಿದ್ದು, ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

ಸಂಸದ ಅಪ್ಪಲನಾಯ್ಡು ಅವರು ಸಂಸತ್‌ಗೆ ಅಧಿವೇಶನಕ್ಕೆ ಹಾಜರಾಗಲು ಅವರು ಎಂದಿನಂತೆ ಸರ್ಕಾರಿ ಕಾರಿನಲ್ಲಿ ಬಾರದೇ ಸೈಕಲ್ ಮೇಲೆ ಆಗಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಎನ್‌ಐ ಸಹ ವಿಡಿಯೋ ಪೋಸ್ಟ್ ಮಾಡಿದೆ. ವಿಡಿಯೋ ನೋಡಿದ ಕೆಲವರು ಅರೇ ಹೀಗೆ ಸೈಕಲ್‌ನಲ್ಲಿ ಬರಲು ಇವರಿಗೇನಾಯ್ತು? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Delhi Air Pollution TDP MP Appalanaidu Kallisetti Wear Mask Rides a Bicycle to Parliament Video

ದೆಹಲಿಯಲ್ಲಿ ವಾತಾವರಣ ಕಲುಷಿತಗೊಂಡಿದೆ. ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ಆರೋಗ್ಯಕ್ಕೆ ಕುತ್ತುಂಟಾಗಲಿದೆ. ಇದರ ವಿರುದ್ಧ ಜನರನ್ನು ಜಾಗೃತಿಗೊಳಿಸಲು ಸ್ವತಃ ಸಚಿವರೇ ಪರಿಸರ ಸ್ನೇಹಿಯಾಗಿರುವ ಸೈಕಲ್ ಸವಾರಿ ಮಾಡಿಕೊಂಡು ಸಂಸತ್‌ ಪ್ರವೇಶಿಸಿದ್ದಾರೆ. ನಿಯಮ ರೂಪಿಸುವ, ವಾಹನ ಬಳಕೆ ಕಡಿಮೆ/ನಿಷೇಧಿಸುವ ನಾವುಗಳು ಮೊದಲು ಜಾಗೃತರಾಗಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂಬುದನ್ನು ತನ್ನ ನಡೆ ಮೂಲಕವು ತೋರಿಕೊಟ್ಟಿದ್ದಾರೆ. ದೆಹಲಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಸಂಸದರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ದೆಹಲಿಯಲ್ಲಿ ಇಂದು ಸಹ ಅತ್ಯಂತ ಕಳಪೆ ಗಾಳಿ ಬೀಸುತ್ತಿದೆ. ಕಳೆದ 24 ಗಂಟೆಗಳಲ್ಲಿ 461 ಗಾಳಿಯ ಗುಣಮಟ್ಟ ಸೂಚ್ಯಂಕ (AQI) ದಾಖಲಾಗಿದೆ. ಕ್ಷಣದಿಂದ ಕ್ಷಣಕ್ಕೆ ದೆಹಲಿ ವಾತಾವರಣ, ಅಲ್ಲಿನ ಜನರ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆ ಸಂಸದರು ಸೈಕಲ್ ಸವಾರಿ ಮೂಲಕ ವಾಯುಮಾಲಿನ್ಯ ಬಗ್ಗೆ ಅರಿವು ಮೂಡಿಸಿದ ರೀತಿ ಎಲ್ಲರ ಗಮನ ಸೆಳೆಯಿತು.

ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ದೆಹಲಿ ಕೋರ್ಟ್‌ ವಿಚಾರಣೆ

ದೆಹಲಿಯಲ್ಲಿ ವಿಷಕಾರಿ ಮತ್ತು ಗಂಭೀರ ಮಟ್ಟ ತಲುಪಿದ ಗಾಳಿಯ ಪರಿಣಾಮ ಐದನೇ ತರಗತಿವರೆಗೆ ಶಾಲಾ ಮಕ್ಕಳಿಗೆ ತರಗತಿಗೆ ಬಾರದಂತೆ, ಶಾಲೆಗಳಿಗೆ ರಜೆ ನೀಡಿ ಸರ್ಕಾರ ಆದೇಶಿಸಿದೆ. ಹೀಗಾಗಿ ಮಕ್ಕಳು ಆನ್‌ಲೈನ್‌ ತರಗತಿಗೆ ಹಾಜರಾಗಿ ಪಾಠ ಕೇಳುತ್ತಿದ್ದಾರೆ. ಇದೀಗ ದೆಹಲಿ ಕೋರ್ಟ್‌ಗಳೂ ಸಹ ಇದೇ ನಡೆ ಅನುಸರಿಸಿವೆ. ಕೋರ್ಟ್ ಕಲಾಪಗಳು ಆಪ್‌ಲೈನ್‌ನಿಂದ ಆನ್‌ಲೈನ್‌ಗೆ ಸ್ಥಳಾಂತರಗೊಂಡಿವೆ. ಅಂದರೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕವೇ ವಿಚಾರಣೆ, ಅರ್ಜಿ ವಿಲೇವಾರಿಗೆ ನಿರ್ಧರಿಸಿವೆ. ಅಷ್ಟರ ಮಟ್ಟಿಗೆ ದೆಹಲಿ ಜನರ ದೈನಂದಿನ ಜೀವನದ ಮೇಲೆ ವಾಯುಮಾಲಿನ್ಯ ಪ್ರಭಾವ ಬೀರಿದೆ. ರಾಜ್ಯ ಸರ್ಕಾರ ಇದರ ವಾಯುಮಾಲಿನ್ಯ ನಿಯಂತ್ರಣ, ತಡೆ ವಿರುದ್ಧದ ದೈನಂದಿನ ಕ್ರಮಗಳನ್ನು ಮುಂದುವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+