ಅರ್ನಬ್ ವಿರುದ್ಧದ ಎಫ್ಐಆರ್‌ಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಅಮೃತ್ ಸರ್, ಏಪ್ರಿಲ್ 24: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಅರ್ನಬ್ ವಿರುದ್ಧ ದೂರು ದಾಖಲಾಗಿ, ಎಫ್ ಐ ಆರ್ ದಾಖಲಾದ ಸುದ್ದಿ ಓದಿರಬಹುದು. ತಮ್ಮ ವಿರುದ್ಧ ದಾಖಲಾದ ಎರಡು ಎಫ್ಐಆರ್ ಗೆ ತಡೆ ನೀಡುವಂತೆ ಕೋರಿ ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ನಬ್ ವಿರುದ್ಧ ದಾಖಲಾದ ಎಫ್ಐಆರ್ ಗಳಿಗೆ ತಡೆಯಾಜ್ಞೆ ನೀಡಿ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ.
ಅರ್ನಬ್ ವಿರುದ್ಧ ನಾಗ್ಪುರದಿಂದ ಮುಂಬೈಗೆ ವರ್ಗಾಯಿಸಲ್ಪಟ್ಟ ಪ್ರಕರಣವೊಂದನ್ನು ಬಿಟ್ಟು ಮಿಕ್ಕ ಎಲ್ಲಾ ಎಫ್ಐಆರ್ ಗಳನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಹಾಗೂ ಎ. ಆರ್ ಶಾ ಅವರಿದ್ದ ನ್ಯಾಯಪೀಠ ಆದೇಶ ನೀಡಿದ್ದಾರೆ.
ಪಂಜಾಬ್ ನಲ್ಲಿ ಎರಡು ಎಫ್ಐಆರ್, ಮಹಾರಾಷ್ಟ್ರ, ಛತ್ತೀಸ್ ಗಢ,ತೆಲಂಗಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಎಫ್ಐಆರ್ ಹಾಕಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಅರ್ನಬ್ ವಿರುದ್ಧ ದೂರು ದಾಖಲಾಗಿತ್ತು. ಆದರೆ, ನಾಗ್ಪುರದಿಂದ ಮುಂಬೈಗೆ ವರ್ಗಾಯಿಸಲ್ಪಟ್ಟ ಪ್ರಕರಣದಲ್ಲಿ ಅರ್ನಬ್ ವಿರುದ್ಧ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು ಅರ್ನಬ್ ವಿರುದ್ಧ ಕೋಮುಗಲಭೆ ದೂರು ದಾಖಲಾಗಿದೆ ಎಂದು ವಾದಿಸಿದ್ದರಿಂದ ತಡೆಯಾಜ್ಞೆ ಸಿಕ್ಕಿಲ್ಲ. ಅರ್ನಬ್ ಅವರಿಗೆ ಮಧ್ಯಂತರ ನೆಮ್ಮದಿ ಸಿಕ್ಕಿದ್ದು, ಮೂರು ವಾರಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಬಹುದು.

ಪಂಜಾಬಿನ ಬಟಾಲಾ ಹಾಗೂ ಅಬೊಹಾರ್ (ಫಜಿಕಾ) ಪೊಲೀಸ್ ಠಾಣೆಗಳಲ್ಲಿ ಪ್ರಕರಣ, ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ರೋಷನ್ ಹಾಗೂ ಹರ್ ಮೊಹಿಂದರ್ ಎಂಬುವರು ಅರ್ನಬ್ ವಿರುದ್ಧ ದೂರು ನೀಡಿದ್ದರು. ಅರ್ನಬ್ ವಿರುದ್ಧ ಐಪಿಸಿ ಸೆಕ್ಷನ್ 153 ಅನ್ವಯ ಪ್ರಕರಣ ದಾಖಲಾಗಿದ್ದು, ಜಾಮೀನು ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿಯ ಧರ್ಮ, ಜಾತಿ, ಮತ, ಪಂಥದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು, ಜನ್ಮಸ್ಥಳ, ಈಗ ನೆಲೆಸಿರುವ ಸ್ಥಳ, ಭಾಷೆ ಮುಂತಾದವುಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದರೆ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಐಪಿಸಿ ಸೆಕ್ಷನ್ 505 (2), 505 ಕೂಡಾ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾಲ್ಗಾರ್ ಘಟನೆ ಕುರಿತಂತೆ ಟಿವಿಯಲ್ಲಿ ಚರ್ಚೆ ನಡೆಯುವಾಗ ಅರ್ನಬ್ ಅವರು, ಸೋನಿಯಾ ಗಾಂಧಿ ವಿರುದ್ಧ ನೇರವಾಗಿ ಟೀಕೆ ಮಾಡಿದ್ದರು. ಪಾಲ್ಗಾರ್ ನಲ್ಲಿ ಮಕ್ಕಳ ಕಳ್ಳರು ಎಂದು ಭಾವಿಸಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಸಾರ್ವಜನಿಕರು ಹೊಡೆದು ಹತ್ಯೆ ಮಾಡಿದ ಘಟನೆ ಬಗ್ಗೆ ಭಾರಿ ಚರ್ಚೆ ನಡೆದಿದೆ.












Click it and Unblock the Notifications