ಗುಡ್ ನ್ಯೂಸ್; ದೇಶದಲ್ಲಿ ಕೊರೊನಾ ದೈನಂದಿನ ಮರಣ ಪ್ರಮಾಣದಲ್ಲಿ ಭಾರೀ ಇಳಿಕೆ
ನವದೆಹಲಿ, ಜನವರಿ 06: ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಲಸಿಕೆಗೆ ಭಾರತದಲ್ಲಿ ದಿನಗಣನೆ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ದೊರೆಯುವ ಸಾಧ್ಯತೆಯಿರುವುದಾಗಿ ಆರೋಗ್ಯ ಸಚಿವಾಲಯ ಭರವಸೆ ನೀಡಿದೆ.
ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಕಡಿಮೆಯಾಗಿರುವುದು ಸಮಾಧಾನ ತಂದಿದೆ. ಕಳೆದ ಹನ್ನೆರಡು ದಿನಗಳಿಂದಲೂ ದೇಶದಲ್ಲಿ ಕೊರೊನಾ ದೈನಂದಿನ ಮರಣ ಪ್ರಕರಣಗಳಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಮುಂದೆ ಓದಿ...

ಕಳೆದ 12 ದಿನಗಳಿಂದ ಮರಣ ಪ್ರಮಾಣ ಇಳಿಕೆ
ದೇಶದಲ್ಲಿ ಕಳೆದ ಹನ್ನೆರಡು ದಿನಗಳಿಂದಲೂ ದೈನಂದಿನ ಮರಣ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, 300ರ ಒಳಗೆ ಮರಣ ಪ್ರಮಾಣ ದಾಖಲಾಗುತ್ತಿದೆ. ಪ್ರಮಾಣಿತ ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಗಳೊಂದಿಗೆ ಸೋಂಕಿತರ ಶೀಘ್ರ ಪತ್ತೆ ಕಾರ್ಯ, ಹಾಗೆಯೇ ವ್ಯಾಪಕ ಪರೀಕ್ಷೆ ಈ ಮರಣ ಪ್ರಮಾಣ ಇಳಿಮುಖವಾಗಲು ಕಾರಣ ಎನ್ನಲಾಗಿದೆ.
1.50 ಲಕ್ಷ ಕೋವಿಡ್ ಸಾವು ಕಂಡ ಮೂರನೇ ದೇಶ ಭಾರತ

ಒಂದು ದಶಲಕ್ಷ ಜನಸಂಖ್ಯೆಗೆ ಒಂದು ಮರಣ...
ಕೊರೊನಾ ಸೋಂಕಿನ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಸಮಯೋಚಿತ ವೈದ್ಯಕೀಯ ನಿರ್ವಹಣೆಯನ್ನು ರಾಜ್ಯ ಸರ್ಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದು ಕೂಡ ಮರಣ ಸಂಖ್ಯೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗಿದೆ. ಕಳೆದ ಏಳು ದಿನಗಳಿಂದ ಒಂದು ದಶಲಕ್ಷ ಜನಸಂಖ್ಯೆಗೆ ಒಂದು ಮರಣ ದಾಖಲಾಗಿದೆ.

ಸಕ್ರಿಯ ಪ್ರಕರಣಗಳಲ್ಲಿಯೂ ಇಳಿಕೆ
ಮತ್ತೊಂದೆಡೆ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿಯೂ ಇಳಿಕೆ ಕಂಡುಬಂದಿದೆ. ಸದ್ಯಕ್ಕೆ 2,27,546 ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 21,314 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ 3,490 ಪ್ರಕರಣಗಳು ಕಡಿಮೆಯಾಗಿರುವುದು ಸಮಾಧಾನಕರವಾಗಿದೆ.
ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?

71ಕ್ಕೆ ಏರಿಕೆಯಾದ ರೂಪಾಂತರ ಸೋಂಕಿನ ಪ್ರಕರಣ
ಈಚೆಗೆ ಭಾರತದಲ್ಲಿ ದೈನಂದಿನ ಕೊರೊನಾ ಪ್ರಕರಣಗಳು 20,000ಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 18,088 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಿಂದ ದಶಲಕ್ಷ ಜನಸಂಖ್ಯೆಗೆ 96 ಹೊಸ ಪ್ರಕರಣಗಳು ಕಂಡುಬರುತ್ತಿವೆ. ಬುಧವಾರ ಗುಣಮುಖರಾದವರ ಸಂಖ್ಯೆ ಒಂದು ಕೋಟಿ ಸಮೀಪಿಸಿದ್ದು, 99,97,272 ಆಗಿದೆ. ಹತ್ತು ರಾಜ್ಯಗಳಲ್ಲಿ 76.48% ಗುಣಮುಖ ಪ್ರಮಾಣ ದಾಖಲಾಗಿದೆ. ಕೇರಳದಲ್ಲಿ ಅತಿ ಹೆಚ್ಚಿನ ಮಂದಿ ಗುಣಮುಖರಾಗಿದ್ದು, ಬುಧವಾರ ದೇಶದಲ್ಲಿ ಬ್ರಿಟನ್ ನ ಕೊರೊನಾ ರೂಪಾಂತರ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.