ಇಂಟರ್‌ಪೋಲ್ ಭಯದಿಂದ ಊರೂರು ಸುತ್ತುತ್ತಿರುವ ದಾವೂದ್

ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹಿಂ ಚಟುವಟಿಕೆ ನಡೆಸುತ್ತಿದ್ದಾನೆಂದು ಸಂದೇಹಿಸುತ್ತಿರುವ ಬೆನ್ನಲ್ಲೇ, ಐಎಸ್ಐ ದಾವೂದ್‌ನನ್ನು ಐದು ತಿಂಗಳಲ್ಲಿ ನಾಲ್ಕು ಬಾರಿ ಸ್ಥಳಾಂತರಿಸಿದೆ ಎಂದು ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯೂರೋ ಹೇಳಿದೆ.

ಡ್ರಗ್ ಮಾಫಿಯಾ ಸ್ಥಗಿತ
ದಾವೂದ್ ಇಬ್ರಾಹಿಂ ನಡೆಸುತ್ತಿರುವ ಡ್ರಗ್ಸ್ ಮಾಫಿಯಾದಲ್ಲಿ ಸುಮಾರು 5,000 ಜನ ಕೆಲಸ ಮಾಡುತ್ತಿದ್ದಾರೆ. ಆದರೆ, ಮೂರು ದಿನಗಳಿಂದ ಅವರೆಲ್ಲರೂ ಕೆಲಸ ನಿಲ್ಲಿಸಿದ್ದಾರೆ. ಪ್ರಸಕ್ತ ಸನ್ನಿವೇಶದ ಗಾಂಭೀರ್ಯತೆ ಕಡಿಮೆಯಾಗುವವರೆಗೂ ಅವರು ಕೆಲಸ ನಿಲ್ಲಿಸಬಹುದು. ಛೋಟಾ ಶಕೀಲ್ ಕೂಡ ಐಎಸ್ಐ ಸೂಚನೆಯಂತೆ ತೆರೆ ಮರೆಗೆ ಸರಿದಿದ್ದಾನೆ. ಇವೆಲ್ಲವೂ ದಾವೂದ್ ಇಬ್ರಾಹಿಂನನ್ನು ರಕ್ಷಿಸಲು ಐಎಸ್ಐ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮ ಎಂದು ಹೇಳಲಾಗಿದೆ.

08-dawood

ಕರಾಚಿ-ಬಾಂಗ್ಲಾದೇಶ-ಕರಾಚಿ
ದಾವೂದ್ ಇಬ್ರಾಹಿಂನನ್ನು ಮೇ ತಿಂಗಳಲ್ಲಿ ಕರಾಚಿಯಿಂದ ಸ್ಥಳಾಂತರಿಸಿ ಉತ್ತರ ವಜಿರ್ಸ್ತಾನ್ ಪ್ರದೇಶದಲ್ಲಿ ಇಡಲಾಗಿತ್ತು. ಜೂನ್ ತಿಂಗಳಲ್ಲಿ ಬಾಂಗ್ಲಾದೇಶಕ್ಕೆ ರವಾನಿಸಲ್ಪಟ್ಟ. ಕೇವಲ 15 ದಿನಗಳ ಹಿಂದೆ ಕರಾಚಿಗೆ ಕರೆತರಲಾಗಿದೆ.

ಆತನನ್ನು ಮತ್ತೆ ಉತ್ತರ ವಜಿರ್ಸ್ತಾನ್ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಅಮೆರಿಕದ ಸೈನ್ಯ ಕಾಣಿಸಿಕೊಂಡಾಗ ಸ್ಥಳಾಂತರಿಸಲಾಯಿತು. ಅಲ್ಲಿಂದ ಅರಬ್ ದೇಶಗಳಿಗೆ ಕಳುಹಿಸುವ ಯತ್ನ ನಡೆದರೂ ಸುರಕ್ಷೆಯ ಹಿನ್ನೆಲೆಯಲ್ಲಿ ಯೋಚನೆ ಕೈಬಿಡಲಾಯಿತು. ಇಂದು ಐಎಸ್ಐ ದಾವೂದ್‌ನನ್ನು ಥೈಲ್ಯಾಂಡ್ ಅಥವಾ ನೈರೋಬಿಗೆ ಕಳುಹಿಸಲು ಯೋಚಿಸುತ್ತಿದ್ದರೂ ಇಂಟರ್‌ಪೋಲ್ ಭಯದಿಂದ ಇದುವರೆಗೆ ಕಳುಹಿಸಿಲ್ಲ.

ದಾವೂದ್ ಐಎಸ್ಐಗೊಂದು ಆಸ್ತಿ
ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ ದಾವೂದ್‌ನಿಗೆ ಕರಾಚಿ ಅಥವಾ ಇಸ್ಲಾಮಾಬಾದ್‌ನಲ್ಲಿ ಐಎಸ್ಐ ಮೂಗಿನಡಿ ಇದ್ದರೇ ಹೆಚ್ಚು ಸುರಕ್ಷೆ ಸಿಗುತ್ತದೆ. ತೈಲ ಭರಿತ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಐಎಸ್ಐಎಸ್ ಸಂಘಟನೆಗಿಂತ ಹೆಚ್ಚು ಶಕ್ತಿಯುತಗೊಳ್ಳಲು ಅಲ್ ಖೈದಾ ಯೋಚಿಸುತ್ತಿದೆ.

ಅಲ್ಲದೇ, ಅಫ್ಘಾನಿಸ್ತಾನದಲ್ಲಿ ಹೋರಾಟ ನಡೆಸಲು ಕೂಡ ಹಣ ಬೇಕು. ಇದಕ್ಕೆ ಸಾಕಷ್ಟು ಸಂಪತ್ತು ಪೂರೈಸಲು ದಾವೋದ್‌ಗೆ ಮಾತ್ರ ಸಾಧ್ಯ ಎಂಬುದು ಐಎಸ್ಐಗೂ ತಿಳಿದಿದೆ. ಅಲ್ಲದೆ ಅಲ್ ಖೈದಾ ಬೆಂಬಲಿಸಲು ದಾವೂದ್ ಕೂಡ ಸಿದ್ಧನಿದ್ದಾನೆ. ಆದ್ದರಿಂದ ಆತ ಐಎಸ್ಐಗೆ ಒಂದು ಆಸ್ತಿಯಾಗಿದ್ದಾನೆಂದು ವರದಿಯಲ್ಲಿ ಹೇಳಲಾಗಿದೆ.

ದಾವೂದ್ ಇಬ್ರಾಹಿಂನ ಆರ್ಥಿಕ ಆದಾಯಕ್ಕೆ ಹೊಡೆತ ನೀಡಿದರೆ ಮಾತ್ರ ಆತ ಹಾಗೂ ಐಎಸ್ಐ ಮಧ್ಯೆ ಇರುವ ಸಂಬಂಧ ಕಡಿಮೆಯಾಗಲು ಸಾಧ್ಯ ಎಂಬುದು ಈಗ ಭಾರತ ಸರ್ಕಾರಕ್ಕೆ ಮನವರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+