ಡಾನ್ ದಾವೂದ್ ಇಬ್ರಾಹಿಂ ಹೊಟ್ಟೆಯಲ್ಲಿ ವಿಷ- ಇದು ನವಭಾರತದ ಪ್ರತಿಕಾರವೇ?
ದಾವೂದ್ ಇಬ್ರಾಹಿಂ ಹೆಸರನ್ನು ಕೇಳಿದರೆ ಒಂದು ಕಾಲದಲ್ಲಿ ದೆಹಲಿ To ಮುಂಬೈ ಇಂಚಿಂಚು ಜಾಗ ನಡುಗುತ್ತಿತ್ತು. ಅದ್ರಲ್ಲೂ ಉದ್ಯಮಿಗಳಿಗೆ ದಾವೂದ್ ಕಾಲ್ ಬಂದಿದೆ ಅಂದ್ರೆ ಅಲ್ಲಿಗೆ ಅರ್ಧ ಕಥೆ ಮುಗಿದಿದೆ ಅಂತಾ ಅರ್ಥ. ಆದ್ರೆ ಕಾಲ ಬದಲಾಗಿದೆ ಹಾಗೇ ದಾವೂದ್‌ಗೆ ಈಗ ವಯಸ್ಸಾಗಿದೆ. ಈ ಪರಿಸ್ಥಿತಿಯಲ್ಲೇ, ಡಾನ್ ದಾವೂದ್ ಸಾವು & ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಾತು ಕೇಳಿಬಂದಿದೆ. ಹಾಗಾದರೆ ಈ ಕೃತ್ಯ ಎಸಗಿದ್ದು ಯಾರು?
ಭಾರತ ಈಗ ಬದಲಾಗಿದ್ದು, ಉಗ್ರರನ್ನು ಅವರದ್ದೇ ಕೋಟೆಗೆ ನುಗ್ಗಿ ಫಿನಿಷ್ ಮಾಡುವುದು ಟ್ರೆಂಡ್ ಆಗಿದೆ. ಅದರಲ್ಲೂ ಖಲಿಸ್ತಾನಿ ಉಗ್ರರು ಒಬ್ಬೊಬ್ಬರಾಗಿ ಹೆಣವಾದ ನಂತರ, ಭಾರತದ ಗೂಢಚಾರ ಸಂಸ್ಥೆ 'ರಾ' (RAW) ವಿರುದ್ಧವೇ ಗಂಭೀರ ಆರೋಪ ಮಾಡುತ್ತಿವೆ ಭಾರತದ ಶತ್ರು ದೇಶಗಳು. ಅದರಲ್ಲೂ ಪಾಕಿಸ್ತಾನದಲ್ಲಿ ಹಲವು ಖಲಿಸ್ತಾನಿ ಗ್ಯಾಂಗ್ ಲೀಡರ್ಸ್ ಹೆಣವಾಗಿ, ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ ಭಾರತದ ಪಾಲಿಗೆ ವಿಲನ್ & ಮೋಸ್ಟ್ ವಾಂಟೆಡ್ ಲಿಸ್ಟ್ ಸೇರಿದ್ದ ಡಾನ್ ದಾವೂದ್ ಇಬ್ರಾಹಿಂಗೆ ಈಗ ವಿಷ ಹಾಕಲಾಗಿದೆ ಅನ್ನೋ ಸುದ್ದಿ ಎಲ್ಲೆಡೆಯೂ ವೈರಲ್ ಆಗುತ್ತಿದೆ. ಹಾಗಾದ್ರೆ ಇಲ್ಲೂ 'ರಾ' (RAW) ರಿವೇಂಜ್ ತಗೊಂಡಿದೆಯಾ?

ದಾವೂದ್‌ಗೆ ನಿಜಕ್ಕೂ ಆಗಿದ್ದು ಏನು?
ಅಷ್ಟಕ್ಕೂ ಕುಖ್ಯಾತ ಭೂಗತ ಪಾತಕಿ, ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ದಾವೂದ್ ಇಬ್ರಾಹಿಂ ಪರಿಸ್ಥಿತಿ ಗಂಭೀರವಾದ ಹಿನ್ನೆಲೆ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ನಡುವೆ ದಾವೂದ್ ಇಬ್ರಾಹಿಂ ಹೊಟ್ಟೆಯಲ್ಲಿ ವಿಷ ಕಂಡು ಬಂದಿದೆ ಎಂಬ ವದಂತಿ ಕೂಡ ಹಬ್ಬಿದೆ. ಆದರೆ ಈ ಮಾತುಗಳಿಗೆ ಸಾಕ್ಷಿಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಹಾಗಾದರೆ ನಿಜಕ್ಕೂ ಆಗಿದ್ದು ಏನು?
ದಾವೂದ್ ಆಸ್ಪತ್ರೆ ಸುತ್ತ ಪೊಲೀಸ್!
ಕೇವಲ 2 ದಿನದ ಹಿಂದಷ್ಟೇ ದಾವೂದ್ ಇಬ್ರಾಹಿಂನ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇ ದಾವೂದ್ ಇರುವ ಆಸ್ಪತ್ರೆಗೆ ಭಾರಿ ಭದ್ರತೆ ಒದಗಿಸಲಾಗಿದೆ ಅಂತಾ ಹೇಳಲಾಗುತ್ತಿದೆ. ದಾವೂದ್ ಇಬ್ರಾಹಿಂ ಚಿಕಿತ್ಸೆ ಪಡೆಯುತ್ತಿರುವ ಕರಾಚಿ ಆಸ್ಪತ್ರೆಯ ಫ್ಲೋರ್‌ನಲ್ಲಿ ಬೇರೆ ಯಾವುದೇ ರೋಗಿಗಳನ್ನ ಇರಿಸಿಲ್ಲ. ಎಲ್ಲರನ್ನೂ ಖಾಲಿ ಮಾಡಿಸಿ ಅದೇ ಫ್ಲೋರ್‌ನಲ್ಲಿ ಭೂಗತ ಪಾತಕಿ ದಾವೂದ್‌ಗೆ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎನ್ನಲಾಗಿದೆ. ಹೀಗೆ ದಾವೂದ್ ಇಬ್ರಾಹಿಂ ಇರುವ ಆಸ್ಪತ್ರೆಯ ಫ್ಲೋರ್‌ಗೆ, ಆಸ್ಪತ್ರೆ ವೈದ್ಯರು & ಕುಟುಂಬ ವರ್ಗವನ್ನ ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿಲ್ಲ.
TIME MAGAZINE’s UNKNOWN MEN OF THE YEAR😉
— SUHEL SETH (@Suhelseth) December 17, 2023
ಸೋಷಿಯಲ್ ಮೀಡಿಯಾದಲ್ಲಿ ಸಂಚಲನ!
ವಾಣಿಜ್ಯ ನಗರಿ ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇನ್ನು ಈ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡು 750ಕ್ಕೂ ಹೆಚ್ಚು ಜನರು ಗಾಯಗೊಂಡರು. ಹೀಗೆ ಇಂತಹ ಭೀಕರ ಸ್ಫೋಟದ ಹಿಂದೆ, ದಾವೂದ್ ಇಬ್ರಾಹಿಂ ಮಾಸ್ಟರ್ ಮೈಂಡ್ ಆಗಿದ್ದ ಎನ್ನಲಾಗಿತ್ತು. ಅಲ್ಲಿಂದ ದಾವೂದ್ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಎನಿಸಿಕೊಂಡಿದ್ದು, ಇದೀಗ ದಾವೂದ್‌ಗೆ ವಿಷ ಹಾಕಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ದಾವೂದ್ ವಿರುದ್ಧ ಸೋಷಿಯಲ್ ಮೀಡಿಯಾ ಮಂದಿ ಪೋಸ್ಟ್ ಹಾಕುತ್ತಿದ್ದಾರೆ.
ಒಟ್ನಲ್ಲಿ ದಾವೂದ್ ಇಬ್ರಾಹಿಂಗೆ ಕೂಡ ಖಲಿಸ್ತಾನಿ ಉಗ್ರರ ರೀತಿ, ಭಾರತವೇ ಬುದ್ಧಿಯ ಕಲಿಸಿದೆ ಅನ್ನೋ ವದಂತಿ ಹಬ್ಬಿದೆ. ಆದರೆ ಈ ಮಾತುಗಳಿಗೆ ಸಾಕ್ಷಿ ಇಲ್ಲ. ಅದರಲ್ಲೂ ದಾವೂದ್‌ಗೆ ವಿಷ ಹಾಕಿದ್ದಾರೋ, ಇಲ್ಲವೋ ಅನ್ನೋದು ಕೂಡ ಇನ್ನೂ ಕನ್ಫರ್ಮ್ ಆಗಿಲ್ಲ. ಇದೆಲ್ಲದಕ್ಕೂ ಮೊದಲೇ ದಾವೂದ್ ಇಬ್ರಾಹಿಂ ವಿಚಾರ ವೈರಲ್ ಆಗುತ್ತಿದೆ. ಹಾಗೇ ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲೂ ಈ ಸುದ್ದಿ ಟ್ರೆಂಡ್ ಆಗುತ್ತಿದೆ. ಹೀಗಾಗಿ ದಾವೂದ್‌ಗೆ ಈಗ ಆಗಿರೋದು ಏನು? ಅನ್ನೋದನ್ನ ತಿಳಿಯೋದಕ್ಕೆ ಸ್ವಲ್ಪ ಸಮಯ ಕಾದು ನೋಡಬೇಕಿದೆ.












Click it and Unblock the Notifications