ಗೋರಖ್ ಲ್ಯಾಂಡ್ ಗಾಗಿ ಡಾರ್ಜಿಲಿಂಗ್ ನಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

Posted By:
Subscribe to Oneindia Kannada

ಡಾರ್ಜಿಲಿಂಗ್, ಸೆಪ್ಟೆಂಬರ್ 16: ಗೋರಖ್ ಲ್ಯಾಂಡ್ ಎಂಬ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಎರಡು ತಿಂಗಳುಗಳ ಹಿಂದೆ ಡಾರ್ಜಿಲಿಂಗ್ ನಲ್ಲಿ ನಡೆದಿದ್ದ ಹಿಂಸಾಚಾರ, ಪ್ರತಿಭಟನೆ ಶುಕ್ರವಾರ (ಸೆ. 16) ಮತ್ತೆ ಭುಗಿಲೆದ್ದಿದೆ.

ಪಶ್ಚಿಮ ಬಂಗಾಳ ಸರ್ಕಾರವು ಆ ರಾಜ್ಯದ ಉತ್ತರ ಭಾಗದ ಜನರನ್ನು 2ನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ ಎಂದು ಆಕ್ಷೇಪಿಸಿರುವ ಉದ್ರಿಕ್ತರ ದೊಡ್ಡ ಗುಂಪೊಂದು ಶುಕ್ರವಾರ ಇದ್ದಕ್ಕಿದ್ದಂತೆಯೇ ಪ್ರತಿಭಟನೆಗೆ ಮುಂದಾಯಿತು.

Darjeeling unrest: Gorkhaland supporters attack school vehicle in Kalimpong

ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಬಂದ್ ಮಾಡಲಾಯಿತು. ರಸ್ತೆಗಳಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಲಾಯಿತು. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನೋಡ ನೋಡುತ್ತಿದ್ದಂತೆ ಈ ಹಿಂಸಾಚಾರ ಡಾರ್ಜಿಲಿಂಗ್ ನ ಎಲ್ಲಾ ಕಡೆಗೆ ಹಬ್ಬಿತು. ಸುದ್ದಿ ತಿಳಿದ ಸ್ಥಳೀಯ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಪ್ರತಿಭಟನೆಯನ್ನು ಹತ್ತಿಕ್ಕಲು ಬೀದಿಗಿಳಿದವು.

ಏತನ್ಮಧ್ಯೆ, ಡಾರ್ಜಿಲಿಂಗ್ ನ ಸೇಂಟ್ ಅಗಸ್ಟಿನ್ ಶಾಲೆಗೆ ಸೇರಿದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಆ ಶಾಲೆಯಲ್ಲಿ ಓದುತ್ತಿರುವ ಥಾಯ್ಲೆಂಡ್ ನ ರಚಾಟಾ ಬುರಿವಾಂಗ್ ಎಂಬ ವಿದ್ಯಾರ್ಥಿಗೆ ಅನಾರೋಗ್ಯ ಕಾಡಿದ್ದರಿಂದ ಆಕೆಯನ್ನು ಎಸ್ ಯುವಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ದಂಬಾರ್ ಚೌಕ್ ಎಂಬಲ್ಲಿ ಆ ಕಾರನ್ನು ನಿಲ್ಲಿಸಿದ ದುಷ್ಕರ್ಮಿಗಳು ಕಾರಿನ ಗಾಜುಗಳನ್ನು ಒಡೆದು ಒಳಗಿದ್ದವರನ್ನು ಹೊರ ಹಾಕಿ, ಕಾರಿಗೆ ಭಾರೀ ಹಾನಿ ಮಾಡಿದರು.

ಹೀಗೆ, ಪ್ರತಿಭಟನಾಕಾರರ ಕಿಚ್ಚಿಗೆ ಸುಮಾರು ವಾಹನಗಳು, ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While Darjeeling has been witnessing violence and shutdown since June 15, 2017 as it demands a separate state of Gorkhaland, the situation remains grim. Despite allegedly treating the people of North Bengal as second-class citizens, and the people of the hill towns now seem to be losing patience.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ