ಗುಜರಾತ್‌ನಲ್ಲಿ ಜಮೀನು ವಿವಾದದಲ್ಲಿ ದಲಿತ ಸಹೋದರರ ಹತ್ಯೆ: ಆರು ಆರೋಪಿಗಳ ಪೈಕಿ ಐವರ ಬಂಧನ
ಅಹಮದಾಬಾದ್, ಜುಲೈ. 14: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ದಲಿತ ಸಹೋದರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸುರೇಂದ್ರನಗರ ಜಿಲ್ಲೆಯ ಚುಡಾ ತಾಲೂಕಿನ ಸಮಾಧಿಯಾಲ ಗ್ರಾಮದಲ್ಲಿ ಬುಧವಾರ ಸಂಜೆ ಗುಂಪೊಂದು ಅಲ್ಜಿ ಪರ್ಮಾರ್ (60) ಮತ್ತು ಅವರ ಸಹೋದರ ಮನೋಜ್ ಪರ್ಮಾರ್ (54) ಅವರನ್ನು ಥಳಿಸಿ ಕೊಂದಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರು ಆರೋಪಿಗಳ ಪೈಕಿ ಐವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ಸುರೇಂದ್ರನಗರ ಪೊಲೀಸ್ ವರಿಷ್ಠಾಧಿಕಾರಿ ಹರೇಶ್ ದುದತ್ ತಿಳಿಸಿದ್ದಾರೆ.

ಬಂಧಿತರನ್ನು ಪ್ರಮುಖ ಆರೋಪಿಗಳಾದ ಅಮರಭಾಯಿ ಖಚರ್, ಘುಘಾ ಖಚರ್, ಮಂಗ್ಲು ಖಚರ್, ಭಿಖು ಖಚರ್ ಮತ್ತು ಭಾನಭಾಯಿ ಖಚರ್ ಎಂದು ಗುರುತಿಸಿದ್ದಾರೆ. ಇನ್ನು, ಮೃತರ ಸಂಬಂಧಿಕರು ತಮ್ಮ ಬೇಡಿಕೆಗಳಿಗೆ ಪೊಲೀಸರಿಂದ ಲಿಖಿತವಾಗಿ ಭರವಸೆ ಸಿಕ್ಕಿದ ನಂತರ ಮೃತರ ಸಂಬಂಧಿಕರು ಅವರ ಮೃತದೇಹಗಳನ್ನು ಅಂತಿಮ ವಿಧಿಗಳಿಗೆ ಸ್ವೀಕರಿಸಿದ್ದಾರೆ.
ಅಹಮದಾಬಾದ್‌ನಲ್ಲಿರುವ ಅವರ ಮನೆ, ಸಮಧಾಲಾದಲ್ಲಿನ ಕ್ಷೇತ್ರ ಮತ್ತು ಸುರೇಂದ್ರನಗರದಲ್ಲಿನ ನ್ಯಾಯಾಲಯದ ವಿಚಾರಣೆಗಳಿಗೆ ತೆರಳಲು ರಕ್ಷಣೆಯನ್ನು ನೀಡಬೇಕು ಎಂಬ ಕರಾರು ಕೂಡ ಇದರಲ್ಲಿದೆ. ಸಂತ್ರಸ್ತರ ಕುಟುಂಬದ ವಯಸ್ಕ ಸದಸ್ಯರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗುವುದು ಮತ್ತು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದುಪೊಲೀಸ್ ವರಿಷ್ಠಾಧಿಕಾರಿ ಹರೇಶ್ ದುದತ್ ಲಿಖಿತ ಭರವಸೆ ನೀಡಿದ್ದಾರೆ.
ಬುಧವಾರ ಸಂಜೆ, ದೂರುದಾರರಾದ ಅಹಮದಾಬಾದ್‌ನ ವಿಧವೆ ಪರುಲ್ಬೆನ್ ಪರ್ಮಾರ್ (60) ಮತ್ತು ಅವರ ಸಂಬಂಧಿಕರು ತಮ್ಮ ಪೂರ್ವಜರ ಜಮೀನಿನಲ್ಲಿ ಬಿತ್ತನೆ ಮಾಡಲು ಚುಡಾದ ಸಮಾಧಿಯಾಲಕ್ಕೆ ತೆರಳಿದ್ದರು. ಹಿಂದಿರುಗುತ್ತಿದ್ದಾಗ, ಅವರ ಮೇಲೆ ಗುಂಪೊಂದು ದೊಣ್ಣೆಗಳು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿತು. ಇದರಲ್ಲಿ ಪ್ರಮುಖ ಆರೋಪಿ ಅಮರಭಾಯಿ ಖಚಾರ್, ಅವರ ಸಹೋದರ ಮತ್ತು ಪುತ್ರರು ಸೇರಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ಭೂಮಿ ತಮಗೆ ಸೇರಿದೆ ಎಂದು ಹೇಳಿಕೊಂಡಿದ್ದಾರೆ.
ಇಬ್ಬರು ಸಹೋದರರು ಬುಧವಾರ ರಾತ್ರಿ ಗಾಯಗೊಂಡು ಸಾವನ್ನಪ್ಪಿದ್ದು, ಮೂವರು ಮಹಿಳೆಯರು ಮತ್ತು ಟ್ರ್ಯಾಕ್ಟರ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಕೊಲೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1998 ರಿಂದ ಜಮೀನು ವಿವಾದದಲ್ಲಿದೆ ಮತ್ತು ಮೃತರು ಸೇರಿದ ದಲಿತ ಕುಟುಂಬವು ಕೆಳ ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆದ್ದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆದರೂ, ಆರೋಪಿಗಳು ಕತಿ ದರ್ಬಾರ್ ಜಾತಿ (ಇತರ ಹಿಂದುಳಿದ ವರ್ಗಗಳ ಭಾಗ) ಗೆ ಸೇರಿದವರು ಜಮೀನು ತಮಗೇ ಸೇರಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ. ಜಮೀನು ಬಿಡದಿದ್ದರೇ ದಲಿತ ಕುಟುಂಬಕ್ಕೆ ಹಾನಿ ಮಾಡುವುದಾಗಿ ಹಲವು ಬಾರಿ ಬೆದರಿಕೆ ಹಾಕುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications