ಉತ್ತರ ಪ್ರದೇಶದ ದಲಿತ ಯುವಕ ಊಟಕ್ಕಿಲ್ಲದೆ ಸಾವು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಅಲಹಾಬಾದ್, ಅಕ್ಟೋಬರ್ 24: ಉತ್ತರಪ್ರದೇಶದ ಅಲಹಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಪ್ಪತ್ತೆಂಟು ವರ್ಷದ ದಲಿತ ನಿರುದ್ಯೋಗಿ ಆಹಾರ ಇಲ್ಲದೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಧರ್ಮೇಂದ್ರ ಮೃತರು. ಆತನ ಪತ್ನಿ ಉಷಾದೇವಿ ಸ್ಥಿತಿ ಕೂಡ ಆಹಾರವಿಲ್ಲದೆ ಗಂಭೀರವಾಗಿದೆ.

ಬಡವರಿಗೆ ಸರಕಾರ ಸಬ್ಸಿಡಿ ದರದಲ್ಲಿ ನೀಡುವ ಆಹಾರ ಧಾನ್ಯಗಳನ್ನು ವಿತರಿಸಬೇಕಾದ ನ್ಯಾಯಬೆಲೆ ಅಂಗಡಿಯ ಮಾಲೀಕ, ಇತರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರ ಸೂಚಿಸಿದೆ. ತಹಶೀಲ್ದಾರ್ ರಾಮ್ ಕುಮಾರ್ ವರ್ಮಾ ಧರುತಾ ಹಳ್ಳಿಯಲ್ಲಿರುವ ಈ ದಂಪತಿಯ ಮನೆಗೆ ಭೇಟಿ ನೀಡಿದ್ದಾರೆ.[ಇನ್ಮುಂದೆ ಜನನ ಪ್ರಮಾಣ ಪತ್ರದಲ್ಲೇ 'ದಲಿತ' ಎಂಬ ಮುದ್ರೆ!]

Dalit Man Dies Of Hunger, Wife Fights For Life

ಆ ಮನೆಯಲ್ಲಿ ಯಾವುದೇ ಆಹಾರ ಇರಲಿಲ್ಲ. ಧರ್ಮಸಿಂಗ್ ಹಾಗೂ ಆತನ ಅಂಗವಿಕಲ ಪತ್ನಿ ವಾಸವಿದ್ದರು. ತಕ್ಷಣಕ್ಕೆ ಪರಿಹಾರವಾಗಿ ತಹಶೀಲ್ದಾರ್ ಒಂದು ಸಾವಿರ ರುಪಾಯಿ ನೀಡಿದ್ದಾರೆ. ಸ್ಥಳೀಯ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುತ್ತಿದ್ದ ಧರ್ಮೇಂದ್ರ ಬಳಿ ಆಧಾರ್ ಸಹ ಇರಲಿಲ್ಲ. ಅದಿದ್ದರೆ ಮಾತ್ರ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಬ್ಸಿಡಿ ಪಡಿತರವನ್ನು ನೀಡಲಾಗುತ್ತದೆ.[ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು: ಪರಮೇಶ್ವರ]

ಆ ಕಾರಣಕ್ಕೆ ನ್ಯಾಯಬೆಲೆ ಅಂಗಡಿಯಿಂದ ಧರ್ಮೇಂದ್ರ ಪಡಿತರ ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಈ ಕುಟುಂಬವು ಹಳ್ಳಿಯವರು ನೀಡುತ್ತಿದ್ದ ಆಹಾರದಿಂದಲೇ ಜೀವಿಸುತ್ತಿತ್ತು ಎಂದು ವರದಿಯಾಗಿದೆ. ಆ ನಂತರ ಆಹಾರ ನೀಡುವುದನ್ನು ನಿಲ್ಲಿಸಿದ ಕಾರಣಕ್ಕೆ ಈ ದಂಪತಿ ಹಸಿವಿನಿಂದ ಇರುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
28 year old jobless Dalit man allegedly died of hunger in a village of Uttar Pradesh's Allahabad district. Identified as Dharmendra, his wife, Usha Devi too was found fighting for life.
Please Wait while comments are loading...