ಮಧ್ಯಪ್ರದೇಶದಲ್ಲಿ ದಲಿತನ ಕೊಲೆ, ತಾಯಿಯನ್ನು ವಿವಸ್ತ್ರಗೊಳಿಸಿ ದೌರ್ಜನೆ: ಘಟನೆ ವಿವರಿಸಿದ ಸಂತ್ರಸ್ತೆ
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಇತ್ಯಾರ್ಥದಲ್ಲಿ ಉಂಟಾದ ಗಲಾಟೆಯಲ್ಲಿ ದಲಿತ ಸಹೋದರನನ್ನು ಕಳೆದುಕೊಂಡ ಸಂತ್ರಸ್ತೆ ಘಟನೆಯ ಬಗ್ಗೆ ವಿವರಿಸಿದ್ದಾರೆ.
2019 ರ ಲೈಂಗಿಕ ಕಿರುಕುಳ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿರಾಕರಿಸಿದ್ದಕ್ಕಾಗಿ 18 ವರ್ಷದ ಸಹೋದರನಿಗೆ ಥಳಿಸಲಾಗಿದೆ. ಮೊದಲು ಅವರು ನನಗೆ ಕಿರುಕುಳ ನೀಡಿದರು. ನಂತರ ನನ್ನ ಸಹೋದರನನ್ನು ಕೊಂದರು. ನನ್ನ ತಾಯಿಯ ಮೇಲೆ ದೌರ್ಜನ್ಯ ನಡೆಸಿದರು. ನನಗೆ ನ್ಯಾಯ ಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾಳೆ.

ಬರೋಡಿಯಾ ನೈನಾಗಿರ್ ಗ್ರಾಮದಲ್ಲಿ ಗುರುವಾರ ಆಗಸ್ಟ್ 24 ರಂದು ಹಾಡಹಗಲೇ ದಲಿತ ಯುವಕನ ಕೊಲೆಗೆ ಸಂಬಂಧಿಸಿದಂತೆ, ಗ್ರಾಮದ ನಿವಾಸಿಗಳಾದ ವಿಕ್ರಮ್ ಸಿಂಗ್ (28) ಮತ್ತು ಆಜಾದ್ ಸಿಂಗ್ ಸೇರಿದಂತೆ ಎಂಟು ಮಂದಿಯನ್ನು ಆಗಸ್ಟ್ 27 ರ ಭಾನುವಾರದಂದು ಬಂಧಿಸಲಾಗಿದೆ.
2019 ರ ಲೈಂಗಿಕ ಕಿರುಕುಳ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿರಾಕರಿಸಿದ್ದಕ್ಕಾಗಿ 18 ವರ್ಷದ ದಲಿತ ಹುಡುಗ ಮತ್ತು ಅವನ ಕುಟುಂಬವನ್ನು ಥಳಿಸಲಾಗಿದೆ. ಅವರ ಮನೆಯನ್ನು ಧ್ವಂಸಗೊಳಿ ಆರೋಪಿಗಳು ಕ್ರೂರತನ ಮೆರೆದಿದ್ದಾರೆ. ಇದನ್ನು ತಡೆಯಲು ಬಂದ ತಾಯಿಯನ್ನು ವಿವಸ್ತ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ವಿಕ್ರಮ್ ಮತ್ತು ಆಜಾದ್ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ.
ಹಿಂದಿನ ಪ್ರಕರಣ, ಇತ್ಯರ್ಥಕ್ಕೆ ಒತ್ತಡ ಮತ್ತು ಕೊಲೆ
ಆಗಸ್ಟ್ 24 ಗುರುವಾರ ವಿಕ್ರಮ್ ಸಿಂಗ್ ಮತ್ತು ಅವನ ತಂದೆ ಕೋಮಲ್ ಠಾಕೂರ್, ಆಜಾದ್ ಸಿಂಗ್ ಮತ್ತು ಇತರ ಗ್ರಾಮಸ್ಥರು ಸಂತ್ರಸ್ತೆಯ ಮನೆಗೆ ಹೋದರು. 2019 ರ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಕೆಯ ಕುಟುಂಬವನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪದೇ ಇದ್ದಾಗ ಮನೆಯನ್ನು ಧ್ವಂಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಸಂತ್ರೆಸ್ತೆಯ ಸಹೋದರ ಇರಲಿಲ್ಲ. ಆರೋಪಿಗಳು ಸಂತ್ರಸ್ತೆಯ ಸಹೋದರನನ್ನು ತರಕಾರಿಗಳನ್ನು ತರಲು ಹೋಗಿದ್ದಾಗ ಬಸ್ ನಿಲ್ದಾಣದ ಬಳಿ ಭೇಟಿಯಾದರು. ಏಕಾಏಕಿ ಅವನನ್ನು ಹೊಡೆಯಲು ಪ್ರಾರಂಭಿಸಿದ್ದಾರೆ. ಇದನ್ನು ತಡೆಯಲು ಬಂದ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
'ಆರೋಪಿ ತನ್ನ ಸಹೋದರನನ್ನು ದೊಣ್ಣೆಗಳಿಂದ ಹೊಡೆದಿದ್ದಾನೆ. ಅವನನ್ನು ಕೆಳಗೆ ಬೀಳಿಸಿ, ಪಾದಗಳನ್ನು ಅವನ ಗಂಟಲಿಗೆ ಒತ್ತಿ ಕೊಂದಿದ್ದಾನೆ. ತಾಯಿಗೂ ಗಾಯಗಳಾಗಿದ್ದು, ಇದೀಗ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಬದುಕುಳಿದವರ 50 ವರ್ಷದ ತಂದೆ ದಿನಗೂಲಿ ಕಾರ್ಮಿಕನಾಗಿದ್ದರೆ, ಅವರ ತಾಯಿ ಗೃಹಿಣಿ. ಮೃತ ಬಾಲಕ ನಾಲ್ವರು ಮಕ್ಕಳಲ್ಲಿ ಕಿರಿಯವನಾಗಿದ್ದು, ಆತನಿಗೆ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಮೃತನ ಇಬ್ಬರು ಅಣ್ಣಂದಿರು ಕೂಲಿ ಕೆಲಸ ಮಾಡುತ್ತಿದ್ದರೆ, ಸಹೋದರಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
'ಕಿರುಕುಳ' ಹೇಳಿಕೆಯನ್ನು ಹಿಂಪಡೆದ ಪೊಲೀಸರು
ಆರಂಭದಲ್ಲಿ 2019ರಲ್ಲಿ ತನ್ನ ಸಹೋದರಿ ಆರೋಪಿಯ ವಿರುದ್ಧ ಸಲ್ಲಿಸಿದ ಲೈಂಗಿಕ ಕಿರುಕುಳದ ದೂರನ್ನು ಹಿಂಪಡೆಯಲು ಮೃತನ ಇಷ್ಟವಿಲ್ಲದ ಕಾರಣ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆಗಸ್ಟ್ 27 ರಂದು ಅಧಿಕಾರಿಗಳು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. 2019ರ ಪ್ರಕರಣ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದೆ ಎಂದು ನಿರಾಕರಿಸಿದರು.
ಆರೋಪಿಗಳು ಮೇಲ್ಜಾತಿಗೆ ಸೇರಿದವರಾಗಿದ್ದು, ರಾಜಕೀಯ ಸಂಪರ್ಕ ಹೊಂದಿರುವುದರಿಂದ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಸಂತ್ರಸ್ತ ಕುಟುಂಬ ಹೇಳಿಕೊಂಡಿದೆ. ಪೊಲೀಸರು ನಮ್ಮತ್ತ ಗಮನ ಹರಿಸಲಿಲ್ಲ. ಯಾಕೆಂದರೆ ನಾವು ಬಡವರು ಮತ್ತು ಆರೋಪಿಗಳು ಶ್ರೀಮಂತರಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಪ್ತ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಭೂಪೇಂದ್ರ ಸಿಂಗ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕಿ ರಕ್ಷಾ ರಜಪೂತ್ ಆರೋಪಿಸಿದ್ದಾರೆ.
ಘಟನೆ ನಡೆದ ಕೇವಲ ಎರಡು ದಿನಗಳ ನಂತರ ಸಾಗರ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಜನಾಕ್ರೋಶ ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಸ್ಥಳೀಯ ಬಿಜೆಪಿ ಶಾಸಕ ಭೂಪೇಂದ್ರ ಸಿಂಗ್ ಆರೋಪಿಗಳೊಂದಿಗೆ ಯಾವುದೇ ಸಂಬಂಧ ಇರುವುದನ್ನು ನಿರಾಕರಿಸಿದ್ದಾರೆ. ಕಾಂಗ್ರೆಸ್ "ವಿಷಯವನ್ನು ರಾಜಕೀಯಗೊಳಿಸುತ್ತಿದೆ" ಎಂದು ಹೇಳಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications