India Rain Alert: ವಾಯುಭಾರ ಕುಸಿತ, ಈ ಭಾಗಗಳಲ್ಲಿ 3 ದಿನ ಭರ್ಜರಿ ಮಳೆ ಸಂಭವ

ದೆಹಲಿ, ಅಕ್ಟೋಬರ್ 30: 'ಮೊಂಥಾ' ಚಂಡಮಾರುತ ಅಬ್ಬರ ಶುರುವಾದ ಬೆನ್ನಲ್ಲೆ ಬೇರೆ ಬೇರೆ ಕಡೆಗಳಲ್ಲಿ ಸೃಷ್ಟಿಯಾಗಿದ್ ಹವಾಮಾನ ವೈಪರೀತ್ಯಗಳು ಮುಂದುವರಿಯುತ್ತಿವೆ. ಇದರಿಂದಾಗಿ ವಿದರ್ಭ ಮತ್ತು ಛತ್ತೀಸ್‌ಗಢದ ಮೇಲೆ ಚಂಡಮಾರುತದ ಪರಿಚಲನೆಯ ಲಕ್ಷಣಗಳು ಇವೆ. ಈ ಕಾರಣದಿಂದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ. ಉತ್ತರ ಭಾಗದ ಕಾಶ್ಮೀರ ಅಕ್ಕಪಕ್ಕದ ಒಂದೆರಡು ರಾಜ್ಯಗಳ ಹೊರುತಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿ ಭಾರೀ ಮಳೆ ಸಂಭವವಿದೆ.

ಛತ್ತೀಸ್‌ಗಢ ಭಾಗದಲ್ಲಿನ ವಾಯುಭಾರ ಕುಸಿತ ಇನ್ನೊಂದು ದಿನದಲ್ಲಿ ದುರ್ಬಲಗೊಳ್ಳಲಿದೆ. ಮೊಂಥಾ ಚಂಡಮಾರುತ ಈಗಾಗಲೇ ದುರ್ಬಲವಾಗಿದೆ. ಪೂರ್ವ ಮಧ್ಯ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ವಾಯುಭಾರ ಕುಸಿತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮದತ್ತ ಚಲಿಸಿದೆ. ಇದು ವೆರಾವಲ್‌ನಿಂದ 400 ಕಿಲೋ ಮೀಟರ್ ನೈಋತ್ಯಕ್ಕೆ ಮತ್ತು ಮುಂಬೈಯಿಂದ 510 ಕಿಲೋ ಮೀಟರ್ ದೂರದಲ್ಲಿದೆ. ಮುಂದಿನ 36 ಗಂಟೆಗಳಲ್ಲಿ ಇದು ಪೂರ್ವಮಧ್ಯ ಅರೇಬಿಯನ್ ಸಮುದ್ರದಾದ್ಯಂತ ಪಶ್ಚಿಮದತ್ತ ಚಲಿಸುವ ನಿರೀಕ್ಷೆ ಇದೆ.

Cyclone Remnants Weaken Over Vidarbha and Chhattisgarh Heavy Rain Likely in Many States

ದಕ್ಷಿಣ ಹರಿಯಾಣ ಮತ್ತು ಪಕ್ಕದ ರಾಜಸ್ಥಾನದ ಮೇಲಿನ 3.1 ಕಿ.ಮೀ ಎತ್ತರದ ಮೇಲ್ಮುಖ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಇದು ಆಗ್ನೇಯ ಅಸ್ಸಾಂ ಪ್ರದೇಶದಲ್ಲಿಯೂ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್‌ ಎತ್ತರದಲ್ಲಿದೆ. ಇದೆಲ್ಲದರ ಪ್ರಭಾವದಿಂದ ಗುಜರಾತ್ ಕಚ್ ಪ್ರದೇಶಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಸುರಿಯುವ ನಿರೀಕ್ಷೆ ಇದೆ. ಐಎಂಡಿ ಈ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಬಿಹಾರ, ಛತ್ತೀಸ್‌ಗಢ, ವಿದರ್ಭ, ತೆಲಂಗಾಣ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಆಗಲಿದೆ. ತೆಲಂಗಾಣ ಮತ್ತು ಗುಜರಾತ್ ರಾಜ್ಯದ ಕೆಲವು ಭಾಗಗಳಲ್ಲಿ ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕ, ಕೊಂಕಣ, ಗೋವಾ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 45 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯು ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಸಮುದ್ರ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಸದ್ಯ ತೆಲಂಗಾಣ, ಆಂಧ್ರ ದಲ್ಲಿ ಮೊಂಥಾ ಚಂಡಮಾರುತ ಅಬ್ಬರಕ್ಕೆ ಅಪಾರ ಬೆಳೆ ಹಾನಿ ಆಗಿದೆ. ಜನಜೀವನ ಅಸ್ತವ್ಯಸ್ಥವಾಗಿದೆ. ಕರಾವಳಿ ತೀರದ ಪ್ರದೇಶ ಜನರ ಬುದಕು ತಾತ್ಕಾಲಿಕವಾಗಿ ಮೂರಾಬಟ್ಟೆಯಾಗಿದೆ. ಸರ್ಕಾರ ಅಪಾಯದ ಪ್ರದೇಶಗಳ ನಿವಾಸಿಗಳನ್ನು ತೀರಕ್ಕೆ ಚಂಡಮಾರುತ ಅಪ್ಪಳಿಸುವ ಮೊದಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿತ್ತು. ಹೀಗಿದ್ದರೂ ಒಂದು ಜೀವ ಹಾನಿ ಆಗಿದೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+