Hamoon-Tej Cyclone update: ಮತ್ತಷ್ಟು ತೀವ್ರಗೊಳ್ಳಲಿರುವ ಚಂಡಮಾರುತಗಳು, ಈ ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ: ಐಎಂಡಿ
ಬೆಂಗಳೂರು, ಅಕ್ಟೋಬರ್ 24: ಬಂಗಾಳ ಕೊಲ್ಲಿ 'ಹ್ಯಾಮೂನ್' (Hamoon) ಮತ್ತು ಅರಬ್ಬಿ ಸಮುದ್ರದಲ್ಲಿ 'ತೇಜ್' (Tej) ಚಂಡಮಾರುತ ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ. ಸದ್ಯ ಇದರ ಪ್ರಭಾವದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಅಧಿಕ ಮಳೆ ಸುರಿಯಲಿದೆ.
ಈ ಎರಡು ಚಂಡಮಾರುತಗಳ ಪ್ರಭಾವದಿಂದ ನಾಳೆ ಅಕ್ಟೋಬರ್ 25 ರಂದು ಈ ಪ್ರದೇಶಗಳಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆಗಳು ಇವೆ. ದೇಶದ ಕೆಲವು ರಾಜ್ಯಗಳು ಈ ವಾರ ಭಾರಿ ಮಳೆ ಎದುರಿಸುವ ನಿರೀಕ್ಷೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಉಂಟು ಮಾಡುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ.

ಹ್ಯಾಮೂನ್ ಚಂಡಮಾರುತವು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡಿದೆ. ಮುಂದಿನ 6 ಗಂಟೆಗಳಲ್ಲಿ ಹಾಲಿ ಸ್ಥಳದಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ. ಇದು ಸುಮಾರು ಉತ್ತರ-ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ಬಾಂಗ್ಲಾದೇಶದ ಕರಾವಳಿ, ಖೆಪುಪಾರಾ ಮತ್ತು ಚಿತ್ತಗಾಂಗ್ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಹಾದು ಹೋಗಲಿದೆ.
ಸೋಮವಾರ ಸಂಜೆ ಈ ಹ್ಯಾಮೂನ್ ಚಂಡಮಾರುತವಾಗಿ ತೀವ್ರಗೊಂಡಿದೆ. ಸದ್ಯ ಕರಾವಳಿ ಭಾಗದಲ್ಲಿ ಇದರ ಪ್ರಭಾವ, ಪರಿಣಾಮ ಬೀರುವುದಿಲ್ಲ ಎಂದು ಐಎಂಡಿ ಹೇಳಿದೆ.

'ತೇಜ್' ಚಂಡಮಾರುತದ ಸ್ಥಿತಿ ಏನು?
ಹವಾಮಾನ ಇಲಾಖೆಯ ಪ್ರಕಾರ ವೆರಿ ಸಿವಿಯರ್ ಸೈಕ್ಲೋನಿಕ್ ಸ್ಟಾರ್ಮ್ ತೇಜ್‌ನ ಪ್ರಭಾವದಿಂದ ಕೆಲವೆಡೆ ಭೂಕುಸಿತ ಸಂಭವವಿದೆ. ಈ ತೇಜ್ ಗಂಟೆಗೆ 125-135 ಕಿಮೀ ಗಂಟೆಗೆ ವೇಗದಲ್ಲಿ ಬೀಸಲಿದೆ. ಕೆಲವೊಮ್ಮೆ 150 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳು ಇವೆ.
ಸೈಕ್ಲೋನಿಕ್ ಚಂಡಮಾರುತಕ್ಕೆ ಇರಾನ್ ದೇಶ 'ಹ್ಯಾಮೂನ್' ಎಂದು ನಾಮಕರಣ ಮಾಡಿದೆ. ಸಂಜೆ 5.30 ಕ್ಕೆ ಒಡಿಶಾ ಕರಾವಳಿಯಿಂದ ಸುಮಾರು 230 ಕಿಮೀ ದೂರದಲ್ಲಿ, ಪಶ್ಚಿಮ ಬಂಗಾಳದ ದಿಘಾದಿಂದ 360 ಕಿಮೀ ದಕ್ಷಿಣಕ್ಕೆ ಮತ್ತು ಬಾಂಗ್ಲಾದೇಶದ ಖೆಪುಪಾರಾದಿಂದ 510 ಕಿಮೀ ದೂರದ ದಕ್ಷಿಣ-ನೈಋತ್ಯದಲ್ಲಿ ಇದು ನೆಲೆಸಿದೆ. ಮುಂದಿನ 12 ಗಂಟೆಗಳಲ್ಲಿ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಈ ಹ್ಯಾಮೂನ್ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ವರದಿ ತಿಳಿಸಿದೆ.
ಈ ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ
ಹವಾಮಾನ ಇಲಾಖೆಯ ಪ್ರಕಾರ, ದೇಶದ ಈಶಾನ್ಯ ಭಾಗದ ರಾಜ್ಯಗಳಾದ ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಮಣಿಪುರ, ದಕ್ಷಿಣ ಅಸ್ಸಾಂ ಮತ್ತು ಮೇಘಾಲಯ ರಾಜ್ಯದಲ್ಲಿ ಅಕ್ಟೋಬರ್ 26 ರವರೆಗೆ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆ ಆಗಲಿದೆ.
ಎಂತದ್ದೆ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಒಡಿಶಾ ಸರ್ಕಾರವು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಭಾರೀ ಮಳೆಯ ಸಂದರ್ಭದಲ್ಲಿ ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಆಡಳಿತಕ್ಕೆ ನಿರ್ದೇಶನ ನೀಡಿದೆ. ಒಡಿಶಾ ಕರಾವಳಿಯಿಂದ ಸುಮಾರು 200 ಕಿಮೀ ಸಮುದ್ರದ ಮೇಲೆ ಚಂಡಮಾರುತ ಸಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಗಾಳಿಯ ವೇಗವು ಕ್ರಮೇಣವಾಗಿ ಅದರಲ್ಲೂ ಇಂದು ಮಂಗಳವಾರ ಬೆಳಗ್ಗೆ ಪ್ರತಿ ಗಂಟೆಗೆ 100 ಕಿಮೀ ವೇಗಕ್ಕೆ ಹೆಚ್ಚಾಗಲಿದೆ. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಮಂಗಳವಾರದಂದು ಪುರ್ಬಾ ಮೇದಿನಿಪುರ್, ಕೋಲ್ಕತ್ತಾ ಮತ್ತು ದಕ್ಷಿಣದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಸಾಧಾರಣ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.











Click it and Unblock the Notifications