Cyclone Mocha: ವರ್ಷದ ಮೊದಲ ಚಂಡಮಾರುತ 'ಮೋಚಾ'- ಈ ಹೆಸರು ಬಂದಿದ್ದು ಹೇಗೆ?

ಹವಾಮಾನ ವೈಪರೀತ್ಯದ ನಡುವೆಯೇ ಜನರನ್ನು ಆತಂಕಕ್ಕೆ ದೂಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಮೇ 6ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿಣಮಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಹಿಂದೆ ಹಲವಾರು ಇಂತಹ ಚಂಡಮಾರುತಗಳು ಸಂಭವಿಸಿವೆ. ಅವುಗಳನ್ನು ಪ್ರತ್ಯೇಕವಾದ ಹೆಸರಿನಿಂದ ಕರೆಯಲಾಗಿದೆ. ಹಾಗಾದರೆ ಈ ಬಾರಿ ಸಂಭವಿಸುವ ವರ್ಷದ ಮೊದಲ ಚಂಡಮಾರುತದ ಹೆಸರೇನು? ಇದಕ್ಕೆ ಇಡಲಾದ ಹೆಸರಿನ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಈ ವರ್ಷದ ಮೊದಲ ಚಂಡಮಾರುತವನ್ನು 'ಮೋಚಾ ಚಂಡಮಾರುತ' ಎಂದು ಹೆಸರಿಸಲಾಗಿದೆ. ಕೆಂಪು ಸಮುದ್ರದ ಕರಾವಳಿ ಬಂದರನ್ನು ಆಧರಿಸಿ ಯೆಮೆನ್ ಈ ಚಂಡಮಾರುತವನ್ನು ಹೆಸರಿಸಿದೆ. ಬಂಗಾಳ ಕೊಲ್ಲಿಯಲ್ಲಿ ರೂಪಗೊಳ್ಳುವ ಈ ಚಂಡಮಾರುತದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಒರಿಸ್ಸಾ ಮತ್ತು ಬಂಗಾಳದ ನಡುವೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಈ ಬಗ್ಗೆ ಹವಾಮಾನ ಇಲಾಖೆ ನಿಗಾ ಇಟ್ಟಿದೆ.

Cyclone Mocha: First cyclone of the year Mocha - how did it get its name?

ಇದು ಚಂಡಮಾರುತದ ರೂಪವನ್ನು ಪಡೆದರೆ, ಇದು ವರ್ಷದ ಮೊದಲ ಸೈಕ್ಲೋನ್ ಆಗಲಿದೆ. ಇದರ ಪರಿಣಾಮ ಮೇ ಎರಡನೇ ವಾರದಲ್ಲಿ ಹೆಚ್ಚು ಮಳೆ ಮತ್ತು ಗಾಳಿ ಕಂಡುಬರುವ ಸಾಧ್ಯತೆ ಇದ್ದು ಇದು ತುಂಬಾ ಶಕ್ತಿಯುತವಾಗಿರಲಿದೆ ಎಂದು ಐಎಂಡಿ ಹೇಳಿದೆ. ಈ ಚಂಡಮಾರುತದ ಪರಿಣಾಮವನ್ನು ಪೂರ್ವ ಭಾರತದಿಂದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನವರೆಗೂ ಕಾಣಬಹುದು ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಹವಾಮಾನ ಇಲಾಖೆಯ ಎಚ್ಚರಿಕೆಯಿಂದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಅಧಿಕಾರಿಗಳ ಸಭೆಯನ್ನು ನಡೆಸಿದರು. ಇದರಲ್ಲಿ ಅವರು ಚಂಡಮಾರುತದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಷ್ಟಕ್ಕೂ ಚಂಡಮಾರುಗಳ ಬಗ್ಗೆ ಯಾಕಿಷ್ಟು ಭಯ? ಇದರಿಂದಾಗುವ ಪರಿಣಾಮಗಳೇನು ಎನ್ನುವುದನ್ನು ನೋಡೋಣ.

ಪ್ರಬಲ ಚಂಡಮಾರುತಗಳು ಯಾವುವು?

ಸೈಕ್ಲೋನ್ ಅಥವಾ ಚಂಡಮಾರುತ ಹೆಸರು ಹೇಳಿದ ತಕ್ಷಣ, ಅಧಿಕ ಮಳೆ ಮತ್ತು ಬಲವಾದ ಗಾಳಿಯ ದೃಶ್ಯಗಳು ಕಣ್ಣೆದುರು ಬರುತ್ತವೆ. ಇದರ ತೀವ್ರತೆ ಹೆಚ್ಚಾಗಿದ್ದಾಗ ಅಪಾರ ಜೀವ ಹಾನಿ ಹಾಗೂ ಆಸ್ತಿ ಹಾನಿ ಸಂಭವಿಸುವುದರಿಂದ ಜನ ಚಂಡಮಾರುತದ ಬಗ್ಗೆ ಆತಂಕ ಪಡುತ್ತಾರೆ. ಅಂತಹ ಕೆಲ ಚಂಡಮಾರುತಗಳಲ್ಲಿ ನಿಶಾ - 2008, ನಿಲಂ ಚಂಡಮಾರುತ - 2012, 2014ರಲ್ಲಿ ಸಂಭವಿಸಿದ ಹುದುದ್ ಚಂಡಮಾರುತ (124 ಜನರು ಬಲಿ), ಓಖಿ ಚಂಡಮಾರುತ - 2017, ಫಾನಿ ಚಂಡಮಾರುತ - 2019, ಅಂಫಾನ್ ಚಂಡಮಾರುತ 2020- (ಅಂಫಾನ್ 9833 ಗ್ರಾಮಗಳು ಮತ್ತು 22 ನಗರಗಳಲ್ಲಿ 44.45 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ) ಜೊತೆಗೆ ಯಾಸ್ ಚಂಡಮಾರುತ (2021), ಜವಾದ್ (2021) ಚಂಡಮಾರುತಗಳು ಇದರಲ್ಲಿ ಸೇರಿವೆ.

Cyclone Mocha: First cyclone of the year Mocha - how did it get its name?

ತಾಂತ್ರಿಕ ಪದಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರವಾದ ಕಾರಣ ಜನರು ಅವುಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡಲು ಸೈಕ್ಲೋನ್‌ಗಳನ್ನು ಹೆಸರಿಸಲಾಗುತ್ತದೆ. ಆರಂಭದಲ್ಲಿ, ಚಂಡಮಾರುತಗಳನ್ನು ನಿರಂಕುಶವಾಗಿ ಹೆಸರಿಸಲಾಯಿತು. ಉದಾಹರಣೆಗೆ, "ಆಂಟ್ಜೆ" ಎಂಬ ಹೆಸರಿನ ದೋಣಿಯನ್ನು ಕಿತ್ತುಹಾಕಿದ ಅಟ್ಲಾಂಟಿಕ್ ಚಂಡಮಾರುತವು ಆಂಟ್ಜೆ ಚಂಡಮಾರುತ ಎಂದು ಕರೆಯಲ್ಪಟ್ಟಿತು.

ಚಂಡಮಾರುತಗಳು ಎರಡು ವಿಧಗಳಾಗಿವೆ. ಒಂದು ಉಷ್ಣವಲಯದ ಚಂಡಮಾರುತ, ಎರಡು ಸಮಶೀತೋಷ್ಣ ಚಂಡಮಾರುತಗಳು. ದಕ್ಷಿಣ ಗೋಳಾರ್ಧದಲ್ಲಿ ಚಂಡಮಾರುತ ಸಂಭವಿಸಿದಾಗ ಅದನ್ನು 'ಸೈಕ್ಲೋನ್' ಎಂದು ಕರೆಯಲಾಗುತ್ತದೆ ಮತ್ತು ಉತ್ತರ ಗೋಳಾರ್ಧದಲ್ಲಿ ಚಂಡಮಾರುತ ಸಂಭವಿಸಿದಾಗ ಅದನ್ನು 'ಹರಿಕೇನ್' ಅಥವಾ 'ಟೈಫೂನ್' ಎಂದು ಕರೆಯಲಾಗುತ್ತದೆ.

Cyclone Mocha: First cyclone of the year Mocha - how did it get its name?

ಚಂಡಮಾರುತಗಳಿಗೆ ಹೆಸರು ಇಡುವವರು ಯಾರು?

1953 ರಿಂದ ವಿಶ್ವ ಹವಾಮಾನ ಸಂಸ್ಥೆ ಚಂಡಮಾರುತಗಳನ್ನು ಹೆಸರಿಸುವ ಸಮಿತಿಯನ್ನು ರಚಿಸಿದೆ. 13 ದೇಶಗಳಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಗಿದೆ. ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಮಾಲ್ಡೀವ್ಸ್, ಓಮನ್, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನಲ್ಲಿ ಈ ಸಮಿತಿ ಕಾರ್ಯನಿರ್ವಹಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+