ಸುರಕ್ಷತೆ ಬಯಸುವ ಎಟಿಎಂ ಗ್ರಾಹಕರಿಗೆ ಬರೆ

Customer to pay for safety - Banks may raise ATM cost by R 6 per transaction
ನವದೆಹಲಿ, ಡಿ.7: ಬ್ಯಾಂಕ್ ಎಟಿಎಂಗಳನ್ನು ದೋಚುವ ಮತ್ತು ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರ ಮೇಲೆ ಭೀಕರ ಹಲ್ಲೆಗಳು ನಡೆಯುತ್ತಿರುವುದರಿಂದ ಎಚ್ಚೆತ್ತಿರುವ ಬ್ಯಾಂಕುಳು, ಎಲ್ಲ ಎಟಿಎಂ ಕೇಂದ್ರಗಳಲ್ಲೂ ಗರಿಷ್ಠ ಭದ್ರತೆ ಒದಗಿಸಲು ಮುಂದಾಗಿವೆ. ಆದರೆ ಇಂತಹ ಭದ್ರತೆ ಒದಗಿಸಲು ಬ್ಯಾಂಕುಗಳಿಗೆ ತಗಲುವ ವೆಚ್ಚವನ್ನು ಗ್ರಾಹಕರ ಮೇಲೆಯೇ ಮಾಸಿಕ 6 ರೂ. ಶುಲ್ಕ ವಿಧಿಸಲು ಮುಂದಾಗಿವೆ.

ಅದರಲ್ಲೂ ಬೆಂಗಳೂರಿನಲ್ಲಿ ಕಾರ್ಪೊರೇಶನ್ ATM ಕೇಂದ್ರದಲ್ಲಿ ನಡೆದ ಭೀಕರ ಹಲ್ಲೆಯ ಬಳಿಕ ಎಲ್ಲಾ ಬ್ಯಾಂಕುಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದ್ದ RBI, ಎಲ್ಲಾ ಎಟಿಎಂಗಳಲ್ಲೂ ಸಿಸಿಟಿವಿ ಅಳವಡಿಸಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿತ್ತು. ಅಲ್ಲದೆ ಭದ್ರತೆ ಕುರಿತು ಆಯಾ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿತ್ತು.

ಇದರಿಂದ ಬ್ಯಾಂಕುಗಳು ಎಲ್ಲಾ ಎಟಿಎಂಗಳಲ್ಲೂ ಸಿಸಿಟಿವಿ ಅಳವಡಿಕೆ ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆಗೆ ಮುಂದಾಗಿರುವೆ. ಆದರೆ ಅದಕ್ಕೆ ತಗಲುವ ಶುಲ್ಕವನ್ನು ಗ್ರಾಹಕರಿಗೇ ವರ್ಗಾಯಿಸುವ ಜಾಣ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮುಂದಿಟ್ಟಿವೆ. (ಹುಷಾರು! ಬ್ಯಾಂಕುಗಳು SMSಗೆ ದುಡ್ಡು ಪೀಕುತ್ತಿವೆ)

ಇದೇ ವೇಳೆ, ಆಯಾ ಬ್ಯಾಂಕುಗಳ ಗ್ರಾಹಕರು ತಮ್ಮದೇ ಬ್ಯಾಂಕ್ ATMಗಳಲ್ಲಿ ಪ್ರಸ್ತುತ ಇಷ್ಟಾನುಸಾರ ಹಣ ಡ್ರಾ ಮಾಡಬಹುದಾಗಿದೆ. ಇದೀಗ ಅದಕ್ಕೂ ಸಂಚಕಾರ ಬಂರುವ ಸಾಧ್ಯತೆಯಿದ್ದು, ತಿಂಗಳಿಗೆ 5 ಬಾರಿ ಮಾತ್ರವೇ ATM ವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.

ಹೊಸ ಸೇವೆ ಜಾರಿಗೆ ತರುವುದರಿಂದ ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕಾಚಾರ ಹಾಕಿರುವ ಬ್ಯಾಂಕುಗಳು, ಪ್ರತಿ ಕಾರ್ಡ್‌ ಬಳಕೆದಾರನಿಗೆ ಮಾಸಿಕ 6 ರೂ. ನಷ್ಟು ಶುಲ್ಕ ವಿಧಿಸುವ ಮೂಲಕ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು ಎಂಬುದನ್ನು ಕಂಡುಕೊಂಡಿವೆ. ಹೀಗಾಗಿ ಗ್ರಾಹಕರಿಗೆ ವಾರ್ಷಿಕ ಅಂದಾಜು 70 ರೂ. ವೆಚ್ಚ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿವೆ.

ಒಂದು ವೇಳೆ RBI ಈ ಪ್ರಸ್ತಾವನೆಗೆ ಅಸ್ತು ಅಂದರೆ ಗ್ರಾಹಕರು ಮಾಸಿಕ 6 ರೂ. ಹೆಚ್ಚುವರಿ ಶುಲ್ಕ ತೆರುವುದು ಅನಿವಾರ್ಯವಾಗಲಿದೆ ಎಂದು ಸಿಎನ್ಎನ್-ಐಬಿಎನ್ ವಾರ್ತಾವಾಹಿನಿ ವರದಿ ಮಾಡಿದೆ. ಈಗಾಗಲೇ ಗ್ರಾಹಕರು ಬೇರೆ ಬ್ಯಾಂಕುಗಳ ಎಟಿಎಂಗಳನ್ನು ತಿಂಗಳಿಗೆ 5ಕ್ಕಿಂತ ಹೆಚ್ಚಿನ ಬಾರಿ ಬಳಸಿದರೆ, ಪ್ರತಿ ವ್ಯವಹಾರಕ್ಕೆ 20 ರೂ. ವರೆಗೆ ಶುಲ್ಕ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+