ದೇಶದಲ್ಲಿ ಕೋವಿಡ್ ಅಲೆ ಫೆ.6ರ ವೇಳೆಗೆ ಉತ್ತುಂಗಕ್ಕೆ: ಐಐಟಿ ಮದ್ರಾಸ್ ಅಧ್ಯಯನ
ನವದೆಹಲಿ, ಜನವರಿ 23: ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಪ್ರಸ್ತುತ ಕೋವಿಡ್-19 ಸೋಂಕಿನ ಮೂರನೇ ಅಲೆಯು ಮುಂದಿನ 14 ದಿನಗಳಲ್ಲಿ ಅಂದರೆ ಫೆಬ್ರವರಿ 6 ರೊಳಗೆ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಕೋವಿಡ್ ಸೋಂಕು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಜನವರಿ 14 ರಿಂದ 21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಇಳಿಕೆ ಕಂಡಿದೆ ಎಂದು ಅಧ್ಯಯನವು ಉಲ್ಲೇಖ ಮಾಡಿದೆ.
ಆರ್-ಮೌಲ್ಯವು ಸೋಂಕಿತ ವ್ಯಕ್ತಿಯು ಕೊರೊನಾ ವೈರಸ್ ಸೋಂಕನ್ನು ಹರಡುವ ಜನರ ಸಂಖ್ಯೆಯನ್ನು ಸೂಚಿಸುತ್ತದೆ. ಆರ್-ಮೌಲ್ಯವು ಜನವರಿ 14 ಮತ್ತು ಜನವರಿ 21 ರ ನಡುವೆ 1.57 ದಾಖಲಾಗಿದೆ. ಜನವರಿ 7-13 ರ ವಾರದಲ್ಲಿ ಈ ಸಂಖ್ಯೆಯನ್ನು 2.2 ಆಗಿದೆ. ಜನವರಿ 1-6 ರಿಂದ 4 ಆಗಿದೆ. ಕಳೆದ ವರ್ಷ ಡಿಸೆಂಬರ್ 25-31 ರಿಂದ 2.9ರಷ್ಟಿದೆ ಎಂದು ಐಐಟಿ ಮದ್ರಾಸ್‌ನ ಅಧ್ಯಯನವು ಹೇಳುತ್ತದೆ.
ಚೆನ್ನೈನ ಆರ್-ಮೌಲ್ಯವು 1.2, ಮುಂಬೈ 0.67, ದೆಹಲಿ 0.98 ಮತ್ತು ಕೋಲ್ಕತ್ತಾ 0.56 ರಷ್ಟಿದೆ ಎಂದು ಡೇಟಾ ತೋರಿಸಿದೆ. ಈ ಮೌಲ್ಯವು 1 ಕ್ಕಿಂತ ಕಡಿಮೆಯಾದರೆ, ಸಾಂಕ್ರಾಮಿಕ ರೋಗವು ಕೊನೆಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಅಧ್ಯಯನವು ಉಲ್ಲೇಖ ಮಾಡಿದೆ.

ಫೆಬ್ರವರಿ 6 ರವರೆಗೆ ಕೋವಿಡ್ ಅಲೆ ತೀವ್ರ ಏರಿಕೆ
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ, "ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಹೆಚ್ಚಳವಾಗಿದೆ. ಆದರೆ ದೆಹಲಿ ಮತ್ತು ಚೆನ್ನೈನಲ್ಲಿ ಆರ್ ಮೌಲ್ಯ 1 ರ ಸಮೀಪದಲ್ಲಿದೆ," ಎಂದು ಮಾಹಿತಿ ನೀಡಿದ್ದಾರೆ. ಹಾಗೆಯೇ "ಮುಂದಿನ 14 ದಿನಗಳಲ್ಲಿ ಫೆಬ್ರವರಿ 6 ರವರೆಗೆ ಕೊರೊನಾ ವೈರಸ್ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆ ಇದೆ," ಎಂದು ತಿಳಿಸಿದ್ದಾರೆ.
ಇನ್ನು "ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಕೋವಿಡ್ ಅಲೆ ಈಗಾಗಲೇ ಉತ್ತುಂಗಕ್ಕೇರಿದೆ, ಅಂದರೆ ಎರಡು ನಗರಗಳಲ್ಲಿ ಸಾಂಕ್ರಾಮಿಕ ರೋಗವು ಸ್ಥಳೀಯವಾಗಿ ಹರಡುತ್ತಿದೆ. ಆದ್ದರಿಂದ, ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ಕೊರೊನಾ ವೈರಸ್ ಸೋಂಕಿನ ಮೂರನೇ ತರಂಗದ ಉತ್ತುಂಗವು ಮುಂದಿನ 14 ದಿನಗಳಲ್ಲಿ ಇದ್ದು ಫೆಬ್ರವರಿ 6 ರವರೆಗೆ ಇರುವ ಸಾಧ್ಯತೆಯಿದೆ. ನಮ್ಮ ಹಿಂದಿನ ಅಂದಾಜಿನ ಪ್ರಕಾರ ಫೆಬ್ರವರಿ 1 ಮತ್ತು 15 ರ ನಡುವೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ," ಎಂದು ಅಂಕಿಅಂಶಗಳನ್ನು ವಿವರಿಸುತ್ತಾ ಮಾತನಾಡಿದ ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಮಾಹಿತಿ ನೀಡಿದ್ದಾರೆ.
ಐಐಟಿ ಮದ್ರಾಸ್‌ನಿಂದ ಈ ಪ್ರಾಥಮಿಕ ಅಧ್ಯಯನವನ್ನು ನಡೆಸಲಾಗಿದೆ. ಗಣಿತಶಾಸ್ತ್ರ ವಿಭಾಗ ಮತ್ತು ಕಂಪ್ಯೂಟೇಶನಲ್ ಗಣಿತ ಮತ್ತು ಡೇಟಾ ವಿಜ್ಞಾನದ ಶ್ರೇಷ್ಠತೆಯ ಕೇಂದ್ರವು ಪ್ರೊ.ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ ಎಸ್ ಸುಂದರ್ ನೇತೃತ್ವದಲ್ಲಿ ಈ ಅಧ್ಯಯನವನ್ನು ನಡೆಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications