Breaking; ವಂದೇ ಭಾರತ್‌ನಲ್ಲಿ ಸಂಚರಿಸಿ ಫೋಟೋ ಹಂಚಿಕೊಂಡ ಸಿ. ಟಿ. ರವಿ
ಮುಂಬೈ, ಡಿಸೆಂಬರ್ 15; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸಂಚಾರ ನಡೆಸಿದರು. ಉತ್ತಮ ದರ್ಜೆಯ ರೈಲು ಸೇವೆ ನೀಡಿರುವುದಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗುರುವಾರ ಸಿ. ಟಿ. ರವಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ಗುಜರಾತ್‌ನ ವಾಪಿ ತನಕ ಸಿ. ಟಿ. ರವಿ ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸಿದರು. ಈ ಕುರಿತ ಫೋಟೋವನ್ನು ಅವರು ಟ್ವೀಟ್‌ನಲ್ಲಿ ಹಾಕಿದ್ದಾರೆ.
It was an amazing journey from Mumbai Central to Vapi in the Vande Bharat Express.
— C T Ravi 🇮🇳 ಸಿ ಟಿ ರವಿ (@CTRavi_BJP) December 15, 2022
Thank PM Shri @narendramodi and @RailMinIndia Shri @AshwiniVaishnaw for providing World Class trains.
The train journey will be as fast and comfortable as a plane journey in the coming years. pic.twitter.com/2uoFk3RfVA
'ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ವಿಮಾನದ ಪ್ರಯಾಣದಂತೆ ವೇಗ, ಆರಾಮದಾಯಕವಾಗಿರಲಿದೆ. ವಿಶ್ವ ದರ್ಜೆಯ ರೈಲು ಸೇವೆ ನೀಡಿರುವುದಕ್ಕೆ ಧನ್ಯವಾದಗಳು' ಎಂದು ಸಿ. ಟಿ. ರವಿ ರೈಲ್ವೆ ಸಚಿವಾಲಯ, ಕೇಂದ್ರ ರೈಲ್ವೆ ಸಚಿವರನ್ನು ಟ್ಯಾಗ್ ಮಾಡಿದ್ದಾರೆ.

ಗುಜರಾತ್‌ನ ಗಾಂಧಿನಗರ ಮತ್ತು ಮಹಾರಾಷ್ಟ್ರದ ರಾಜಧಾನಿ ಮುಂಬೈ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1ರಂದು ಚಾಲನೆ ನೀಡಿದ್ದರು.
ಮುಂಬೈ ಸೆಂಟ್ರಲ್-ವಾಪಿ-ಸೂರತ್-ಗಾಂಧಿನಗರ ನಡುವೆ ಸಂಚಾರ ನಡೆಸುವ ಈ ರೈಲು ದೇಶದ ವಂದೇ ಭಾರತ್ ಮಾದರಿಯ 3ನೇ ರೈಲು ಸೇವೆಯಾಗಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 6 ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
ವೇಳಾಪಟ್ಟಿ; ಪ್ರತಿದಿನ ಬೆಳಗ್ಗೆ 6.10ಕ್ಕೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 12.30ಕ್ಕೆ ಗಾಂಧಿ ನಗರ ತಲುಪಲಿದೆ. ಮಧ್ಯಾಹ್ನ 2.05ಕ್ಕೆ ಗಾಂಧಿ ನಗರದಿಂದ ವಾಪಸ್ ಹೊರಡುವ ರೈಲು ರಾತ್ರಿ 8.35ಕ್ಕೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ.
ವಂದೇ ಭಾರತ್ ರೈಲಿನ ಸಂಚಾರ ಆರಂಭವಾದ ಬಳಿಕ ಇದಕ್ಕೆ ಅನುಕೂಲ ಮಾಡಿಕೊಡುವಂತೆ ಮುಂಬೈ-ಅಹಮದಾಬಾದ್ ನಡುವಿನ ಶತಾಬ್ದಿ ರೈಲು ಸೇವೆಯ ವೇಳಾಪಟ್ಟಿಯನ್ನು ಸಹ ಬದಲಾವಣೆ ಮಾಡಲಾಗಿದೆ.
ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಸ್ಲಾಪುರ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಇದು ದೇಶದ 6ನೇ ವಂದೇ ಭಾರತ್ ಮಾದರಿಯ ರೈಲು.












Click it and Unblock the Notifications