ಬೈಕ್‌ನಲ್ಲಿ ಬಂದು ಸಿಪಿಐ ನಾಯಕನ್ನು ಹತ್ಯೆಗೈದ ದುಷ್ಕರ್ಮಿಗಳು
ರಾಂಚಿ, ಜುಲೈ 27: ಜಾರ್ಖಂಡ್‌ನ ರಾಂಚಿಯಲ್ಲಿ ಸಿಪಿಐ(ಎಂ) ನಾಯಕನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದು, ಸದ್ಯ ಈಗ ಪ್ರದೇಶದಲ್ಲಿ ಗುಂಪು ಹಿಂಸಾಚಾರ ಭುಗಿಲೆದ್ದಿದೆ.
ಬುಧವಾರ ಸಂಜೆ ದಲಾದಲಿ ಚೌಕ್‌ನಲ್ಲಿ ರಾತ್ರಿ 7 ರಿಂದ 8 ಗಂಟೆಯ ನಡುವೆ ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಅವರ ಕಚೇರಿಯಲ್ಲಿದ್ದಾಗ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಬಂದೂಕುಧಾರಿಗಳು ಸ್ಥಳಕ್ಕೆ ಬಂದು ಏಳು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪ್ರಕಾಶ್ ವಿಪ್ಲವ್ ಹೇಳಿದ್ದಾರೆ.

ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಪ್ರದೇಶದಲ್ಲಿನ ಅಂಗಡಿಗಳನ್ನು ಧ್ವಂಸಗೊಳಿಸಿದರು ಮತ್ತು ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಪಿಐ(ಎಂ) ನಾಯಕರಾದ ಸುಭಾಷ್ ಮುಂಡಾ ಎರಡು ಬಾರಿ ಹಟಿಯಾ ಕ್ಷೇತ್ರದಿಂದ ಮತ್ತು ಮಂದರ್ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಐಜಿ (ಕಾರ್ಯಾಚರಣೆ) ಅಮೋಲ್ ವಿ ಹೋಮ್ಕರ್ ಅವರು, ಸಿಪಿಐ (ಎಂ) ನಾಯಕನನ್ನು ಗುಂಡಿಕ್ಕಿ ಕೊಂದಿದ್ದಾರೆ, ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಯಿತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲ್ಪಟ್ಟಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಸುಭಾಷ್ ಮುಂಡಾ ಅವರ ಕೊಲೆಯಿಂದ ತಡರಾತ್ರಿವರೆಗೂ ಪ್ರತಿಭಟನೆ ಮುಂದುವರಿದಿತ್ತು. ಮುಂಡಾ ಅವರು ಸಿಪಿಐನ ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿದ್ದರು. ಯುವಕರಲ್ಲಿ ಬಹಳ ಜನಪ್ರಿಯರಾಗಿದ್ದರು ಪ್ರಕಾಶ್ ವಿಪ್ಲವ್ ಹೇಳಿದ್ದಾರೆ.
ಗುರುವಾರ ರಾಜ್ಯ ಸಮಿತಿ ಸಭೆ ನಿಗದಿಯಾಗಿದ್ದು, ಮುಂಡಾ ಅವರೂ ಪಾಲ್ಗೊಳ್ಳಬೇಕಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಂದು ನಾವು ಜನರಿಗೆ ಮನವಿ ಮಾಡಿದ್ದೇವೆ. ಅಪರಾಧಿಗಳನ್ನು ಬಂಧಿಸಲು ತಕ್ಷಣ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ನಾವು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒತ್ತಾಯಿಸಿದ್ದೇವೆ ಎಂದು ವಿಪ್ಲವ್ ಹೇಳಿದ್ದಾರೆ.












Click it and Unblock the Notifications