ಡೆಂಗ್ಯೂ ವಿರುದ್ಧ ಸೌರವ್ ಗಂಗೂಲಿ ಬ್ಯಾಟಿಂಗ್ ಮುಂದೆ ನಿಮ್ಮ ಸರದಿ

ಬೆಂಗಳೂರು, ಅಕ್ಟೋಬರ್. 15: ಡೆಂಗ್ಯೂ ಮಹಾಮಾರಿಗೆ ವಿರುದ್ಧವಾಗಿ ಹೋರಾಡಲು ಭಾರತ ಕಂಡ ಯಶಸ್ವಿ ನಾಯಕರೊಬ್ಬರು ಟೊಂಕ ಕಟ್ಟಿ ನಿಂತಿದ್ದಾರೆ. ಭಾರತ ಕ್ರಿಕಟ್ ತಂಡದ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಡೆಂಗ್ಯೂ ವಿರುದ್ಧ ಜಾಗೃತಿ ಮಾತುಗಳನ್ನಾಡುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

"ನಾನು ಇಲ್ಲಿ ನಿಮಗೆ ಬ್ಯಾಟಿಂಗ್ ಕೌಶಲ್ಯಗಳನ್ನು ಹೇಳಿಕೊಡುತ್ತಿಲ್ಲ. ಬದಲಾಗಿ ನಾಯಕತ್ವದ ಪಾಠ ಹೇಳುತ್ತೇನೆ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ" ಎಂದು ಸೌರವ್ ಗಂಗೂಲಿ ಮಾತು ಆರಂಭಿಸುತ್ತಾರೆ.

Cricketer Sourav Ganguly bats for dengue care

ಮಳೆ ಬರುವ ಮುನ್ನ ಮೈದಾನದಲ್ಲಿದ್ದರೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು, ಆದರೆ ಮಾನ್ಸೂನ್ ಬಂದರೆ ಏನು ಮಾಡೋದು? ನನ್ನ ಮಗಳಿಗೂ ಡೆಂಗ್ಯೂ ಮಹಾಮಾರಿ ಅಂಟಿಕೊಂಡಿತ್ತು. ಆದರೆ ಮುಂದೆ ಅದು ಮತ್ತೆ ಈ ಕಡೆ ಮುಖ ಹಾಕಲು ಸಾಧ್ಯವಿಲ್ಲ.[ಡೆಂಗ್ಯೂ ಮಹಾಮಾರಿ ಲಕ್ಷಣಗಳೇನು?]

ಜೋರಾದ ಮಳೆಯ ನಡುವೆಯೇ ಮುಂದೆ ಸಾಗುವ ನಾಯಕ ರಸ್ತೆ ಮಧ್ಯದಲ್ಲಿ ನೀರು ತುಂಬಿದ ಬಾಟಲಿಯನ್ನು ಒದೆಯುತ್ತಾರೆ. ಈ ರೀತಿಯಲ್ಲೇ ಕೊಳಚೆ ನೀರು ಎಲ್ಲಿಯೂ ನಿಲ್ಲೆದಂತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ. ಇಂಥ ಕೆಲಸವನ್ನು ಪ್ರತಿಯೊಬ್ಬರು ಮಾಡಿದರೆ ಡೆಂಗ್ಯೂ ಬರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಾರೆ.

ಕೇವಲ ಒಂದು ನಿಮಿಷದ ವಿಡಿಯೋ ನೂರಾರು ಚಿಂತನೆಗಳನ್ನು ನಮ್ಮ ಮುಂದೆ ಇರಿಸುತ್ತದೆ. ನಾನು ನಿಮ್ಮನ್ನು ನಾಮಿನೇಟ್ ಮಾಡುತ್ತಿದ್ದೇನೆ. ಇದೇ ಬಗೆಯ ವಿಡಿಯೋ ಒಂದನ್ನು ಮಾಡಿ #SplashthePuddle ಹೆಸರಲ್ಲಿ ಅಪ್ ಲೋಡ್ ಮಾಡಿ ಎಂದು ಸೌರವ್ ಕೇಳಿಕೊಳ್ಳುತ್ತಾರೆ.

Sourav Ganguly bats for Apollo munich Dengue Caree

Sourav Ganguly Official bats for Apollo munich #denguecare#SplashthePuddle - An initiative by Apollo Munich

Posted by Sourav Ganguly on Tuesday, October 13, 2015

ಅಪೊಲೋ ಮುನಿಚ್ ನ ರಾಯಭಾರಿಯಾಗಿರುವ ಗಂಗೂಲಿ ಇಂಥ ವಿಡಿಯೋದ ಮೂಲಕ ಡೆಂಗ್ಯೂ ನಿರ್ಮೂಲನೆ ಜಾಗೃತಿಗೆ ಕರೆ ನೀಡಿದ್ದಾರೆ. ನೀವು ಕೂಡಾ ನಿಮ್ಮ ಮನೆ ಸುತ್ತಲಿನ ಕೊಳಚೆ ಗುಂಡಿಯನ್ನು ಇಂದೇ ಸ್ವಚ್ಛ ಮಾಡ್ತೀರಿ ಅಲ್ಲವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+