'ಕೊರೊನಾಗೆ ಬೇರೆ ಔಷಧಿ ಯಾಕೆ? ಗೋಮೂತ್ರ, ಸಗಣಿ ಸಾಕು!'
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಚೀನಾದಲ್ಲಿ ಮರಣ ಮೃದಂಗ ಮುಂದುವರಿದಿದೆ. ಡೆಡ್ಲಿ ಕೊರೊನಾ ವೈರಸ್ ಗೆ ಯಾವುದೇ ಔಷಧಿ ಇಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟ ಪಡಿಸಿದೆ.
Recommended Video

ಅಂಥದ್ರಲ್ಲಿ, ಕೊರೊನಾ ವೈರಸ್ ಗೆ ಗೋಮೂತ್ರ ಮತ್ತು ಹಸುವಿನ ಸಗಣಿ ರಾಮಬಾಣ ಅಂತ ಬಿಜೆಪಿ ಶಾಸಕಿ ಹೇಳಿದ್ದಾರೆ. ಅದು ಅಸ್ಸಾಂನ ಬಜೆಟ್ ಅಧಿವೇಶನದಲ್ಲಿ.
''ಗೋಮೂತ್ರ ಮತ್ತು ಹಸುವಿನ ಸಗಣಿಯಿಂದ ಕೊರೊನಾ ವೈರಸ್ ನ ತಡೆಗಟ್ಟಬಹುದು'' ಎಂದು ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳುತ್ತಿದ್ದಂತೆಯೇ ಇಡೀ ಅಧಿವೇಶನವೇ ಮೂಕ ಸ್ತಬ್ಧವಾಯಿತು. ಮುಂದೆ ಓದಿರಿ...

ಹಸುವಿನ ಸಗಣಿ ಉಪಯುಕ್ತ
ಹಸುವಿನ ಸಗಣಿಯಿಂದ ಎಷ್ಟು ಉಪಯೋಗ ಇದೆ ಅಂತ ಎಲ್ಲರಿಗೂ ಗೊತ್ತು. ಹಾಗೇ, ಗೋಮೂತ್ರವನ್ನು ಸಿಂಪಡಿಸಿದ ಜಾಗ ಶುದ್ಧವಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಹೀಗಾಗಿ, ಮಹಾಮಾರಿ ಕೊರೊನಾ ವೈರಸ್ ನ ಗುಣಪಡಿಸುವ ಶಕ್ತಿ ಗೋಮೂತ್ರ ಮತ್ತು ಸಗಣಿಗೆ ಇದೆ ಎಂಬ ನಂಬಿಕೆ ನನಗಿದೆ'' ಎಂದು ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿದ್ದಾರೆ.

ಬೆರಣಿಗೆ ಕೊರೊನಾ ಕೊಲ್ಲುವ ಶಕ್ತಿ ಇದೆ
''ಹಿಂದಿನ ಕಾಲದಲ್ಲಿ ಬೆರಣಿಯ ಜೊತೆಗೆ ಕೆಲ ಗಿಡಮೂಲಿಕೆಗಳನ್ನು ಸೇರಿಸಿ, ಅದನ್ನ ಬೆಂಕಿಯಲ್ಲಿ ಸುಟ್ಟು ಗಾಳಿಯನ್ನು ಪರಿಶುದ್ಧ ಮಾಡಲಾಗುತ್ತಿತ್ತು. ಹೀಗಾಗಿ, ಸಗಣಿಗೆ ಕೊರೊನಾ ವೈರಸ್ ನ ಕೊಲ್ಲುವ ಶಕ್ತಿ ಇದೆ ಎಂದು ನಾನು ನಂಬಿದ್ದೇನೆ'' ಎಂದಿದ್ದಾರೆ ಸುಮನ್ ಹರಿಪ್ರಿಯಾ.

ಯಾರೀ ಸುಮನ್ ಹರಿಪ್ರಿಯಾ.?
ಅಸ್ಸಾಂ ಚಿತ್ರರಂಗದಲ್ಲಿ ಸುಮನ್ ಹರಿಪ್ರಿಯಾ ಚಿರಪರಿಚಿತ. ಅಸ್ಸಾಮಿ ಚಿತ್ರಗಳ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಸುಮನ್ ಹರಿಪ್ರಿಯಾ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದಿಂದ ರಾಜಕೀಯಕ್ಕೆ ಧುಮುಕಿರುವ ಸುಮನ್ ಹರಿಪ್ರಿಯಾ 2016 ರಲ್ಲಿ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಹಾಜೋ ದಿಂದ ಗೆದ್ದು ಶಾಸಕಿ ಆಗಿದ್ದಾರೆ.

3000 ಗಡಿ ದಾಟಿದ ಸಾವಿನ ಸಂಖ್ಯೆ
ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ 3000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇಲ್ಲಿಯವರೆಗೂ ಆರು ಕೊರೊನಾ ವೈರಸ್ ಕೇಸ್ ಗಳು ವರದಿ ಆಗಿವೆ. ಕೊರೊನಾದಿಂದ ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಮೃತಪಟ್ಟಿಲ್ಲ.












Click it and Unblock the Notifications