ಚೀನಾದ ಕೋವಿಡ್ ರೂಪಾಂತರ ದೆಹಲಿಯಲ್ಲಿಲ್ಲ, ಭಯಪಡುವ ಅಗತ್ಯವಿಲ್ಲ- ಕೇಜ್ರಿವಾಲ್
ನವದೆಹಲಿ ಡಿಸೆಂಬರ್ 22: ಚೀನಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ತಳಿ ಸದ್ಯ ಭಾರತಕ್ಕೂ ಕಾಲಿಟ್ಟಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ದೆಹಲಿ ಸಿಎಂ ಅಭಯ ನೀಡಿದ್ದಾರೆ. ಚೀನಾದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ರೂಪಾಂತರದ ಯಾವುದೇ ಪ್ರಕರಣ ದೆಹಲಿಯಲ್ಲಿ ಪತ್ತೆಯಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರಿಗೆ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಪ್ರತಿದಿನ 2,500 ಮಾದರಿಗಳ ಜೀನೋಮ್ ಪರೀಕ್ಷೆಯನ್ನು ನಡೆಸುತ್ತಿದೆ ಮತ್ತು ರಾಷ್ಟ್ರ ರಾಜಧಾನಿಯ 7 ಸ್ಥಳಗಳಿಂದ ಕೊಳಚೆನೀರನ್ನು ಪರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.
ಏಕಾಏಕಿ ಸಂಭವಿಸಿದಲ್ಲಿ ದೆಹಲಿಯು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಹೇಳಿದರು. ಆಸ್ಪತ್ರೆಯ ಹಾಸಿಗೆಗಳು, ಔಷಧಿಗಳು, ಆಮ್ಲಜನಕ ಮತ್ತು ಆಂಬ್ಯುಲೆನ್ಸ್‌ಗಳ ಲಭ್ಯತೆಯನ್ನು ವಿವರಿಸಿದರು.
ದೇಶದಲ್ಲಿ ಗುಜರಾತ್ ಹಾಗೂ ಒಡಿಶಾದಲ್ಲಿ ಒಮಿಕ್ರಾನ್ BF.7 ಪತ್ತೆಯಾಗಿದೆ. ಚೀನಾದಲ್ಲಿಕೊರೊನಾ ಸೋಂಕು ಉಲ್ಬಣಿಸಲು ಕಾರಣ ಒಮಿಕ್ರಾನ್‌ನ ಉಪತಳಿಗಳಾದ ಬಿಎ 5.2 ಮತ್ತು ಬಿಎಫ್ 7 ಇವೆರಡು ಕೂಡ ಅಪಾಯಕಾರಿ ಸಾಂಕ್ರಾಮಿಕಗಳು. ಬಿಎ 5.2 ಓಮಿಕ್ರಾನ್ ತಳಿಯು ಬಿಎ 5ರ ಉಪ ತಳಿ. ಬಿಎ 5.2ರ ಮೊದಲ ಪ್ರಕರಣವು ಈ ವರ್ಷ ಜುಲೈನಲ್ಲಿ ಶಾಂಘೈನಲ್ಲಿ ವರದಿಯಾಗಿತ್ತು.

ನಂತರ ಈ ರೂಪಾಂತರವು ಅಮೆರಿಕದಿಂದ ಹಿಂದಿರುಗಿದ 49 ವರ್ಷದ ವ್ಯಕ್ತಿಯಲ್ಲಿ ಕಂಡುಬಂದಿದೆ. ಆದರೆ, ಬಿಎ 5ರ ಉಪತಳಿಯಾದ ಬಿಎಫ್ 7 ಪ್ರಸ್ತುತ ಚೀನಾದ ಬಹುತೇಕ ನಗರಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಡಬ್ಲ್ಯುಎಚ್‌ಒ ಹೇಳುವ ಪ್ರಕಾರ, ಬಿಎಫ್ 7 ತಳಿಯು ಕೊರೊನಾದಲ್ಲೇ ಅತಿಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.












Click it and Unblock the Notifications