• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ವ್ಯಕ್ತಿಗೆ ಡೆಂಗ್ಯೂ, ಕೊರೊನಾ ಸೋಂಕು: ವೈದ್ಯಲೋಕಕ್ಕೆ ದೊಡ್ಡ ಸವಾಲು

|

ನವದೆಹಲಿ, ಫೆಬ್ರವರಿ 16: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿದೆ. ಇದೇ ಸಂದರ್ಭದಲ್ಲಿ ಹೊಸ ತಲೆನೋವು ಆರಂಭವಾಗಿದೆ.

ಒಂದೇ ವ್ಯಕ್ತಿಗೆ ಕೊರೊನಾ ಸೋಂಕು ಹಾಗೂ ಡೆಂಗ್ಯೂ ಎರಡೂ ಇರುವುದು ವೈದ್ಯರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಎರಡೂ ರೋಗಗಳಿಗೂ ಪ್ರತ್ಯೇಕ ಔಷಧ ಅಥವಾ ಲಸಿಕೆಗಳಿಲ್ಲ. ರೋಗದ ಲಕ್ಷಣ ಅಥವಾ ವ್ಯಕ್ತಿಯ ಆರೋಗ್ಯವನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ.

ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಒಂದೇ ವ್ಯಕ್ತಿಗೆ ಡೆಂಗ್ಯೂ ಮತ್ತು ಕೊರೊನಾ ಸೋಂಕು ತಗುಲಿರುವ ಕಾರಣ ಚಿಕಿತ್ಸೆ ನೀಡುವುದು ಕಷ್ಟವಾಗಿದೆ.

ಚೇತರಿಕೆ ಬಳಿಕವೂ ದೀರ್ಘಕಾಲ ಉಳಿಯುವ ಡೆಂಗ್ಯೂವಿನ 4 ಅಡ್ಡಪರಿಣಾಮಗಳು

ಹೆಚ್ಚಿನ ಆಸ್ಪತ್ರೆಗಳು ಕೊವಿಡ್ 19 ರೋಗವನ್ನು ನಿಭಾಯಿಸುವಲ್ಲಿ ನಿರತವಾಗಿವೆ. ಏಕಾಏಕಿ ಒಬ್ಬರಿಗೆ ಮತ್ತೊಂದು ಕಾಯಿಲೆ ಬಂದಾಗ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ.

ಮಹಾರಾಷ್ಟ್ರದಲ್ಲಿ 10 ವರ್ಷದ ಕೊರೊನಾ ಸೋಂಕಿತರಿಗೆ ಡೆಂಗ್ಯೂ ಹಾಗೂ ಕೊರೊನಾ ಎರಡಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ.

ರೋಗದ ತೀವ್ರತೆ ಹೆಚ್ಚಳ

ರೋಗದ ತೀವ್ರತೆ ಹೆಚ್ಚಳ

ಡೆಂಗ್ಯೂ ಮತ್ತೆ ಕೊರೊನಾ ಸೋಂಕು ಒಂದೇ ವ್ಯಕ್ತಿಗೆ ಬಂದರೆ ಅದು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಜತೆಗೆ ಪ್ರಾಣಹಾನಿಯುಂಟಾಗುವ ಸಾಧ್ಯತೆಯೂ ಕೂಡ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗುತ್ತಿವೆ. ಎರಡೂ ರಾಜ್ಯಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕೂಡ ಹೆಚ್ಚಿವೆ.

ಕೊವಿಡ್ ಹಾಗೂ ಡೆಂಗ್ಯೂ ಲಕ್ಷಣಗಳಿಲ್ಲ

ಕೊವಿಡ್ ಹಾಗೂ ಡೆಂಗ್ಯೂ ಲಕ್ಷಣಗಳಿಲ್ಲ

ಕೊವಿಡ್ 19 ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಲಕ್ಷಣಗಳಿದವಾಗಿವೆ. ಶೇ.80ರಷ್ಟು ಮಂದಿಗೆ ಲಕ್ಷಣಗಳಿರುವುದಿಲ್ಲ. ಡೆಂಗ್ಯೂ ಮತ್ತು ಕೊರೊನಾ ಸೋಂಕು ಒಂದೇ ವ್ಯಕ್ತಿಯನ್ನು ಬಾಧಿಸುತ್ತಿದ್ದರೆ ಒಂದು ರೋಗವು ಮತ್ತೊಂದು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಏಮ್ಸ್‌ನ ಆಶುತೋಷ್ ಬಿಸ್ವಾಸ್ ತಿಳಿಸಿದ್ದಾರೆ.

ಮೊದಲು ಕೊರೊನಾ ಆಮೇಲೆ ಡೆಂಗ್ಯೂ

ಮೊದಲು ಕೊರೊನಾ ಆಮೇಲೆ ಡೆಂಗ್ಯೂ

ಸಾಕಷ್ಟು ರೋಗಿಗಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಾರೆ, ಮೊದಲು ಕೊರೊನಾ ಸೋಂಕು ದೃಢಪಟ್ಟರೆ ಮುಂದಿನ ಪರೀಕ್ಷೆಯಲ್ಲಿ ಡೆಂಗ್ಯೂ ದೃಢಪಡುತ್ತಿದೆ. ಹೀಗಾದರೆ ರೋಗಿಯ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವೈದ್ಯರು.

ತಜ್ಞರು ಹೇಳುವುದೇನು?

ತಜ್ಞರು ಹೇಳುವುದೇನು?

ತಜ್ಞರು ಹೇಳುವಂತೆ, ಇದು ರೋಗಿಗಳಲ್ಲಿ ಅತ್ಯಂತ ನಿರ್ಣಾಯಕ ಸ್ಥಿತಿಯನ್ನು ಸೃಷ್ಟಿಸುತ್ತದೆ. ಏಕೆಂದರೆ ಕೊರೊನಾವೈರಸ್ ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಡೆಂಗ್ಯೂ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅದು ರಕ್ತ ಹೆಪ್ಪುಗಟ್ಟಲು ಅನುಮತಿ ನೀಡುವುದಿಲ್ಲ.ಹೀಗಾಗಿ ರೋಗಿಗಳಲ್ಲಿ ನಿರ್ಣಾಯಕ ಸ್ಥಿತಿಯನ್ನು ಸೃಷ್ಟಿಸುತ್ತದೆ.

English summary
As the country has crossed 50 lakh mark with COVID-19 cases, India's new concern is Covid and dengue 'co-infections'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X