ಲಸಿಕೆ ಪಡೆದು 6 ತಿಂಗಳ ಬಳಿಕ ಶೇ.30ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ
ಒಂದೆಡೆ ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನು ತಪ್ಪದೇ ಪಡೆಯಿರಿ ಎಂದು ಬಾರಿ ಬಾರಿ ಹೇಳುತ್ತಿದ್ದರೆ ಇನ್ನೊಂದೆಡೆ ಲಸಿಕೆ ಪಡೆದು ಆರು ತಿಂಗಳುಗಳ ಬಳಿಕ ಶೇ.30ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಆರು ತಿಂಗಳ ನಂತರ ಈ ದುರ್ಬಲ ಜನರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ ಎಂದು ಏಷ್ಯನ್ ಹೆಲ್ತ್‌ಕೇರ್ ಫೌಂಡೇಶನ್ ನಡೆಸಿದ ಅಧ್ಯಯನ ಹೇಳುತ್ತದೆ.
ಈ ಮಂದಿ ಪ್ರಮುಖವಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ ಹಾಗೂ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆಗಳನ್ನು ಹೊಂದಿದವರಾಗಿರುತ್ತಾರೆ.

ಈ ಮಂದಿ ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳ ಬಳಿಕ ಕಡಿಮೆ ಪ್ರತಿಕಾಯವನ್ನು ಹೊಂದುತ್ತಾರೆ. ಹೀಗಾಗಿ ಸಾರ್ಸ್ ಕೋವ್2 ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ವಯಸ್ಸಾದಂತೆ ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ, ಕಿರಿಯರು ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿದ್ದಾರೆ ಎಂಬುದನ್ನು ಫಲಿತಾಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಸದ್ಯ ಬೂಸ್ಟರ್ ಡೋಸ್ ಪಡೆಯಲು ಎರಡನೇ ಲಸಿಕೆ ಡೋಸ್ ಪಡೆದು 9 ತಿಂಗಳು ಕಳೆದಿರಬೇಕು. ಹೀಗಾಗಿ ಜನಸಂಖ್ಯೆಯ ಶೇ.70ರಷ್ಟು ಮಂದಿಗೆ ಇದು ಪ್ರಯೋಜನಕಾರಿಯಾಗಲಿದೆ, ಹೀಗಾಗಿ ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ಪ್ರತಿಕಾಯ ಮಟ್ಟವನ್ನು ಉಳಿಸಿಕೊಳ್ಳಬಹುದು.
ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಲಸಿಕೆಯ ಪರಿಣಾಮ , ರೂಪಾಂತರದ ದ್ವಾಭಾವಿಕ ಲಕ್ಷಣಗಳು ಮತ್ತು ಜನರಲ್ಲಿರುವ ನೈಸರ್ಗಿಕ ರೋಗನಿರೋಧಕ ಶಕ್ತಿ ಇಂದಾಗಿ ಅನೇಕ ಅಂಶಗಳಿಂದ ರೋಗದ ತೀವ್ರತೆಯು ಸೌಮ್ಯವಾಗಿದೆ.
ದೀರ್ಘಾವಧಿಯಲ್ಲಿ ಪ್ರಸ್ತುತ ಲಸಿಕೆಗಳ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳುವ ಮತ್ತು ಆರಂಭಿಕ ಹಂತದದಲ್ಲಿ ಯಾರಿಗೆಲ್ಲ ಬೂಸ್ಟರ್ ಡೋಸ್ ಅಗತ್ಯವಿದೆ ಎಂಬುದನ್ನು ತಿಳಿಯುವ ಗುರಿಯನ್ನು ಅಧ್ಯಯನ ಹೊಂದಿತ್ತು.
ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?
*ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
*ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
*ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
*ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಟ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
*ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
*ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
*ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
*ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
*ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.












Click it and Unblock the Notifications