• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳನ್ನು ತೆರೆಯುತ್ತಿದ್ದಂತೆ ಕೆಲವು ರಾಜ್ಯಗಳಲ್ಲಿ ಮಕ್ಕಳಲ್ಲಿ ಕೋವಿಡ್‌ ಪ್ರಕರಣ ಏರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 01: ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಭೀತಿಯ ನಡುವೆಯೂ ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಗಿದೆ. ಈಗಾಗಲೇ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಮಕ್ಕಳ ಮೇಲೆ ಅಧಿಕ ಪ್ರಮಾಣ ಬೀರುತ್ತದೆ ಎಂದು ಈಗಾಗಲೇ ಹಲವಾರು ತಜ್ಞರು ಹೇಳಿದ್ದರು. ಈ ನಡುವೆಯೂ ಶಾಲೆಗಳನ್ನು ತೆರೆಯಲಾಗಿದೆ. ಶಾಲೆಗಳನ್ನು ತೆರಯುತ್ತಿದ್ದಂತೆ ಹಲವಾರು ರಾಜ್ಯಗಳಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ.

ಮುಖ್ಯವಾಗಿ ಗುಜರಾತ್‌, ಪಂಜಾಬ್‌, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಉತ್ತರಾಖಂಡದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಆದರೆ ಜಾರ್ಖಂಡ್‌ ಹಾಗೂ ಛಂಡೀಗಢದಲ್ಲಿ ಪರಿಸ್ಥಿತಿಯು ವಿಭಿನ್ನವಾಗಿದೆ. ಪಂಜಾಬ್‌ನಲ್ಲಿ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಜುಲೈ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಳ್ಳುತ್ತಿರುವ ಅಂಕಿ ಅಂಶಗಳು ಶೇಕಡ 9.6 ಕ್ಕೆ ಏರಿಕೆಯಾಗಿದೆ. ಆಗಸ್ಟ್‌ 2 ರಿಂದ ಪಂಜಾಬ್‌ ರಾಜ್ಯದಲ್ಲಿ ಶಾಲೆಗಳನ್ನು ಮತ್ತೆ ಆರಂಭವಾಗಿದೆ.

ಶಾಲೆ ಆರಂಭಿಸಲು ಸರ್ಕಾರದ ಮಹತ್ವದ ತೀರ್ಮಾನದ ಹಿಂದಿನ ಕಾರಣಗಳಿವು! ಶಾಲೆ ಆರಂಭಿಸಲು ಸರ್ಕಾರದ ಮಹತ್ವದ ತೀರ್ಮಾನದ ಹಿಂದಿನ ಕಾರಣಗಳಿವು!

ಇನ್ನುಳಿದಂತೆ ಬಿಹಾರ, ಮಧ್ಯ ಪ್ರದೇಶ, ಗುಜರಾತ್‌, ಛತ್ತೀಸ್‌ಗಢ ಮಕ್ಕಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇಕಡ 2 ರಿಂದ 3 ರ ನಡುವೆ ಇದೆ. ಇನ್ನು ಗುಜರಾತ್‌ನಲ್ಲಿ ಜುಲೈ 26 ರಿಂದ ಶಾಲೆಗಳನ್ನು ತೆರಯಲಾಗಿದೆ. ಇನ್ನು ಛಂಡೀಗಢ ಹಾಗೂ ಮಧ್ಯಪ್ರದೇಶದಲ್ಲಿ ಆಗಸ್ಟ್‌ ಮೊದಲ ವಾರದಲ್ಲಿ ಶಾಲೆಗಳನ್ನು ಪುನರ್‌ ಆರಂಭ ಮಾಡಲಾಗಿದೆ. ಇನ್ನು ಬಿಹಾರದಲ್ಲಿ ಆಗಸ್ಟ್‌ 16 ರಿಂದ ಶಾಲೆಗಳನ್ನು ತೆರೆಯಲಾಗಿದೆ. ಉತ್ತರಾಖಂಡದಲ್ಲಿ ಆಗಸ್ಟ್‌ 2 ರಂದು ಶಾಲೆಗಳನ್ನು ತೆರೆಯಲಾಗಿದೆ. ಉತ್ತರಾಖಂಡದಲ್ಲಿ ಮಕ್ಕಳಲ್ಲಿ ಕೋವಿಡ್‌ ಪಾಸಿಟಿವಿಟಿ ಪ್ರಮಾಣವು ಶೇಕಡ 1.9 ರಷ್ಟು ಇದೆ. ಈ ಎಲ್ಲಾ ರಾಜ್ಯಗಳಲ್ಲೂ ಈಗ ಮಕ್ಕಳಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದೆ.

ಇನ್ನು ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆದ ಬಳಿಕವೂ ಪಾಸಿಟಿವಿಟಿ ಪ್ರಮಾಣವು ಕಡಿಮೆಯಾಗಿದೆ. ಜಾರ್ಖಾಂಡ್‌ನಲ್ಲಿ ಆಗಸ್ಟ್‌ 9 ರಂದು ಶಾಲೆಗಳನ್ನು ತೆರೆಯಲಾಗಿದ್ದು ಆದರೆ ಇಲ್ಲಿನ ಪಾಸಿಟಿವಿಟಿ ಪ್ರಮಾಣವು 0.9 ರಷ್ಟು ಇದೆ. ಈ ನಡುವೆ ದೆಹಲಿ, ತೆಲಂಗಾಣ, ಕರ್ನಾಟಕ ರಾಜ್ಯ ಸರ್ಕಾರಗಳು ಶಾಲೆಗಳನ್ನು ಆರಂಭ ಮಾಡುವ ದಿನಾಂಕವನ್ನು ಪ್ರಕಟ ಮಾಡಿದೆ. ತೆಲಂಗಾಣ, ಲಡಾಖ್‌ ಕೆಲವು ರಾಜ್ಯಗಳಲ್ಲಿ ಇಂದು ಶಾಲೆಗಳನ್ನು ಆರಂಭ ಮಾಡಲಿದೆ. ತೆಲಂಗಾಣದಲ್ಲಿ ಅಂಗನವಾಡಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಇಂದಿನಿಂದ ಶಾಲೆಗಳು ಆರಂಭವಾಗಲಿದೆ. ಆದರೆ ದೆಹಲಿ ಸರ್ಕಾರವು ಕೋವಿಡ್‌ ಕಾರಣದಿಂದಾಗಿ ಹಂತ ಹಂತವಾಗಿ ಶಾಲೆಗಳನ್ನು ಆರಂಭ ಮಾಡಲು ನಿರ್ಧರಿಸಿದೆ.

ದೆಹಲಿಯಲ್ಲಿ ಸೆಪ್ಟೆಂಬರ್‌ 1 ರಿಂದ 9-12 ನೇ ತರಗತಿಗಳು ಆರಂಭವಾಗಲಿದೆ. ಈ ದಿನದಿಂದಲ್ಲೇ ಕೋಚಿಂಗ್‌ ಸೆಂಟರ್‌ಗಳು, ಕಾಲೇಜುಗಳು ಹಾಗೂ ವಿಶ್ವ ವಿದ್ಯಾನಿಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್‍ 8 ರಿಂದ ಎರಡನೇ ಹಂತದಲ್ಲಿ 6-8 ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭ ಮಾಡಲಾಗುತ್ತದೆ.

ಭಾರತದಲ್ಲಿ ಒಂದೇ ದಿನ 1 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ ಒಂದೇ ದಿನ 1 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆ

ಇನ್ನು ಅಕ್ಟೋಬರ್‌ನಲ್ಲಿ ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ನೀಡಲು ಆರಂಭ ಮಾಡುವ ಸಾಧ್ಯತೆಯಿದೆ. ಈ ನಡುವೆ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ಅಪ್ಪಳಿಸುವ ಭೀತಿಯೂ ಇದೆ. ಈ ಅಲೆಯು ಮಕ್ಕಳನ್ನು ಗುರಿಯಾಗಿಸಲಿದೆ ಎಂಬುವುದು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರಯೋಗದ ವೇಗವನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲೇ ಹಲವಾರು ತಜ್ಞರು ಕೊರೊನಾ ವೈರಸ್‌ ಸೋಂಕು ಮಕ್ಕಳಲ್ಲಿ ಕಾಣಿಸಿಕೊಂಡರೂ ಮಕ್ಕಳಲ್ಲಿ ರೋಗ್ಯ ನಿರೋಧಕ ಶಕ್ತಿ ಅಧಿಕವಾಗಿ ಇರುವ ಕಾರಣ ಅವರನ್ನು ವೈರಸ್‌ನಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ, 20 ಮಂದಿಗೆ ಗಾಯಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ, 20 ಮಂದಿಗೆ ಗಾಯ

ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಳೆದ ವರ್ಷ ಕಾಣಿಸಿಕೊಂಡ ಬಳಿಕ ದೇಶದಲ್ಲಿ ಎಲ್ಲಾ ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಹಲವಾರು ಬಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆಯಾದರೂ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮುಂದೂಡಿಕೆ ಮಾಡಲಾಗಿದೆ. ಹಾಗೆಯೇ ಆನ್‌ಲೈನ್‌ ಶಿಕ್ಷಣವನ್ನು ನಡೆಸಲಾಗುತ್ತಿದೆ. ಆದರೆ ಆನ್‌ಲೈನ್‌ ಶಿಕ್ಷಣ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರದ ಕಾರಣ ಆಫ್‌ಲೈನ್‌ ಶಿಕ್ಷಣದ ಬೇಡಿಕೆ ಅಧಿಕವಾಗಿದೆ.

(ಒನ್‌ ಇಂಡಿಯಾ ಸುದ್ದಿ)

English summary
Some states where schools have opened amid concerns about a third wave of the Covid pandemic, are seeing a rise in infections among children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X