ದೇಶಿ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ ಮಾಡಿದ ಭಾರತ್ ಬಯೋಟೆಕ್

ಹೈದರಾಬಾದ್, ಏಪ್ರಿಲ್ 25: ದೇಶಿ ಕೊರೊನಾ ಲಸಿಕೆ ಭಾರತ್ ಬಯೋಟೆಕ್ ಹೊರ ತಂದಿರುವ ಕೋವ್ಯಾಕ್ಸಿನ್ ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 600 ರು ಪ್ರತಿ ಡೋಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರು ಪ್ರತಿ ಡೋಸ್ ಎಂದು ದರ ನಿಗದಿ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಪ್ರಕಟಿಸಿದೆ.

ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಜೊತೆಗೂಡಿ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೋವ್ಯಾಕ್ಸಿನ್ ದರ ಲಭ್ಯ ಲಸಿಕೆಗಳಲ್ಲೇ ಹೆಚ್ಚಿನ ದರ ಹೊಂದಿದೆ. ಈ ನಡುವೆ ರಫ್ತು ಮಾಡುವ ಲಸಿಕೆ ದರ 15 ರಿಂದ 20 ಡಾಲರ್ (ಅಂದಾಜು 1123 ರು ನಿಂದ 1,498ರು) ಎಂದು ನಿಗದಿ ಪಡಿಸಲಾಗಿದೆ.

ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ ಲಸಿಕೆಯ ಭಾರತೀಯ ಆವೃತ್ತಿ ಎನ್ನಬಹುದಾದ ಕೋವಿಶೀಲ್ಡ್ ಉತ್ಪಾದಿಸುತ್ತಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ ದರ ಪರಿಷ್ಕರಿಸಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ 400 ರು ದರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರು ದರದಲ್ಲಿ ನೀಡುತ್ತಿದೆ.

Covaxin will cost Rs 600 per dose for state govts, Rs 1,200 for private hospitals: Bharat Biotech

ಕೋವಿಡ್ 19 ಇಂಟಾನಾಸಲ್ ಅಲ್ಲದೆ, ಚಿಕುನ್ ಗುನ್ಯಾ, ಝಿಕಾ, ಕಾಲರಾ ಇನ್ನಿತರ ಕಾಯಿಲೆಗಳಿಗೂ ಭಾರತ್ ಬಯೋಟೆಕ್ ಲಸಿಕೆ ಕಂಡು ಹಿಡಿದ ಸಾಧನೆ ಮಾಡಿದೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ. ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ಆದರೆ, ಮೇ 1ರಿಂದ ಆರಂಭವಾಗುವ ಲಸಿಕೆ ಅಭಿಯಾನದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಉತ್ತರಪ್ರದೇಶ, ಮಧ್ಯಪ್ರದೇಶ, ಚತ್ತೀಸ್ ಗಢ, ಕೇರಳ, ಸಿಕ್ಕಿಂ, ಬಿಹಾರ ರಾಜ್ಯಗಳು ಘೋಷಿಸಿವೆ.

ಭಾರತಕ್ಕೆ 170 ರಿಂದ 180 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ಸದ್ಯ 13. 81 ಕೋಟಿ ಲಸಿಕೆ ನೀಡಲಾಗಿದೆ. 2.10 ಕೋಟಿ ಮಂದಿ ಮಾತ್ರ ಎರಡು ಬಾರಿ ಡೋಸ್ ಪಡೆದುಕೊಂಡಿದ್ದಾರೆ ಎಂದು ಕೋವಿನ್ ಅಂಕಿ ಅಂಶ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+