ಅಯ್ಯೋ ಶಿವನೇ.. ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಅಂದ್ರೆ ಹೀಗಾ ಮಾಡೋದು?!

ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಪ್ರಧಾನಿ ಮೋದಿ ನಿನ್ನೆ (ಮಾರ್ಚ್ 22) ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಜೊತೆಗೆ ಸಂಜೆ 5 ಗಂಟೆಗೆ ಮನೆಯಲ್ಲೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ನರೇಂದ್ರ ಮೋದಿ ಕೇಳಿಕೊಂಡಿದ್ದರು.

ಅದರಂತೆ, ನಿನ್ನೆ ಜನತಾ ಕರ್ಫ್ಯೂಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಯ್ತು. 5 ಗಂಟೆಗೆ ಸರಿಯಾಗಿ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ವೈದ್ಯಕೀಯ ಸಿಬ್ಬಂದಿಗೆ ಜನತೆ ಕೃತಜ್ಞತೆ ಅರ್ಪಿಸಿದರು.

ಈ ಮಧ್ಯೆ ಹೆಲ್ತ್ ವರ್ಕರ್ಸ್ ಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ, ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಏನೇನೆಲ್ಲಾ ಬಡಿದು ಹಾಕಿದ್ದಾರೆ ಗೊತ್ತಾ.? ನಿಮ್ಮನ್ನ ನಗೆಗಡಲಲ್ಲಿ ತೇಲಿಸುವ ಅಂತಹ ವಿಡಿಯೋಗಳ ಕಲೆಕ್ಷನ್ ಇಲ್ಲಿದೆ, ನೋಡಿ... ನಕ್ಕುಬಿಡಿ...

ಹಿಂಗೂ ಬಡಿ ಅಂತ ಹೇಳಿದ್ರಾ.?

ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಅಂದ್ರೆ.. ಇಲ್ಲೋರ್ವ ಯುವಕ ಬಾಲ್ಕನಿಯಲ್ಲಿ ನಿಂತು ತಟ್ಟೆ ಮತ್ತು ಸೌಟು ತಗೊಂಡು ಬ್ಯಾಂಡ್ ಬಾರಿಸುವ ರೀತಿಯಲ್ಲಿ ಬಾರಿಸಿದ್ದಾನೆ. ಆ ಸೌಂಡ್ ತಡೆಯಲಾರದೆ, ಮನೆಯವರು ಆ ಯುವಕನನ್ನು ಒಳಗೆ ಎಳೆದುಕೊಂಡು ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೊರೊನಾ ಜೊತೆಗೆ ಅದರ ಅಪ್ಪನೂ ಸಾಯುತ್ತೆ.!

ಹೀಗೆ ಬಡಿದರೆ, ಕೊರೊನಾ ಮಾತ್ರ ಅಲ್ಲ.. ಅದರ ಅಪ್ಪ ಕೂಡ ಶಬ್ಧಕ್ಕೆ ಸಾಯಲೇ ಬೇಕು!

ಖಂಡಿತ ಚಪ್ಪಾಳೆ ಹೊಡೆಯಬೇಕು.!

ಆರೋಗ್ಯ ಇಲಾಖೆಯವರಿಗೆ ಚಪ್ಪಾಳೆ ಹೊಡೆಯುವುದು ಹಾಗಿರಲಿ, ತಟ್ಟೆ ಮತ್ತು ಫ್ಯಾನ್ ಬಳಸಿ ಹೀಗೆ ಆಟೋಮ್ಯಾಟಿಕ್ ಆಗಿ ಸೌಂಡ್ ಬರುವ ಹಾಗೆ ಮಾಡಿದವನಿಗೆ ಮೊದಲು ಚಪ್ಪಾಳೆ ತಟ್ಟಿ.!

ತೂತಾದ ಕಂಚಿನ ತಟ್ಟೆ

5 ಗಂಟೆಗೆ 5 ನಿಮಿಷ ತಟ್ಟೆ ಬಾರಿಸಿದ್ದಕ್ಕೆ, ತಟ್ಟೆಯ ಸ್ಥಿತಿ ಏನಾಗಿದೆ ಅಂತ ನೀವೇ ನೋಡಿ.... ಅಂದ್ಹಾಗೆ, ಕಂಚಿನ ತಟ್ಟೆಯನ್ನ ಸುತ್ತಿಗೆಯಿಂದ ಬಡಿದ ಪುಣ್ಯಾತ್ಮ ಯಾರು ಅಂತ ನಮಗೂ ಗೊತ್ತಾಗಿಲ್ಲ.!

ಕೊರೊನಾ ಗ್ಯಾರೆಂಟಿ ಓಡಿ ಹೋಗುತ್ತೆ.!

ಬೃಹತ್ ಪಾತ್ರೆಗಳನ್ನ ಹಿಡಿದುಕೊಂಡು ಓರ್ವ ಅಜ್ಜಿ ಬಡಿದ ಶಬ್ದಕ್ಕೆ ಕೊರೊನಾ ಖಂಡಿತ ಹೆದರಿಕೊಂಡು ಓಡಿ ಹೋಗಿರುತ್ತೆ.!

5 ಗಂಟೆ ಮುಂಚೆ, 5 ಗಂಟೆ ಆದ್ಮೇಲೆ!

5 ಗಂಟೆಗೆ ಮುಂಚೆ ಇದ್ದ ತಟ್ಟೆ, 5 ಗಂಟೆ ಆದ್ಮೇಲೆ ಹೇಗೆ ಪರಿವರ್ತನೆ ಆಗಿದೆ ಅಂತ ನೀವೇ ನೋಡಿ..

ಮನಮಿಡಿಯುವ ವಿಡಿಯೋ

ಮೇಲಿನ ಎಲ್ಲಾ ಕಾಮಿಡಿ ವಿಡಿಯೋಗಳ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಮನಮಿಡಿಯುವ ವಿಡಿಯೋ ಅಂದ್ರೆ ಇದೇ ನೋಡಿ... ಸೀರಿಯಸ್ ವಿಚಾರದಲ್ಲೂ ಸಂಭ್ರಮ ಮೆರೆಯುವ ವಿದ್ಯಾವಂತ ನಾಗರೀಕರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾನೆ ಈ ನಿರ್ಗತಿಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+