Breaking: ಭಾರತದಲ್ಲಿ ಮತ್ತೆ 17,296 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಜೂನ್ 26: ಭಾರತದಲ್ಲಿ ಒಂದೇ ದಿನ 17,296 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 407 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು 4,90,401 ಕೊರೊನಾ ಸೋಂಕಿತ ಪ್ರಕರಣಗಳಿವೆ. ಅದರಲ್ಲಿ 1,89,463 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 2,85,637ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 15,301 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Coronavirus In India 407 Deaths And 17296 New Positive Cases Reported In 24 Hours

ಗುರುವಾರ ದೇಶದಲ್ಲಿ 16,922 ಪ್ರಕರಣಗಳು ಪತ್ತೆಯಾಗಿತ್ತು. 418 ಮಂದಿ ಸಾವನ್ನಪ್ಪಿದ್ದರು. ಕೊರೊನಾ ವೈರಸ್ ಕುರಿತು ಕೇಂದ್ರ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ಜನರನ್ನು ಮತ್ತಷ್ಟು ಆತಂಕ್ಕೀಡು ಮಾಡುತ್ತಿವೆ.

ದೇಶದಲ್ಲಿ ಕೊರೊನಾವೈರಸ್ ಸೋಂಕು ಪತ್ತೆಗಾಗಿ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಈ ಪ್ರಮಾಣದಲ್ಲೂ ಭಾರಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಐಸಿಎಂಆರ್ ನಲ್ಲಿ 2,07,871 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜೂನ್.24ರವರೆಗೂ ದೇಶದಲ್ಲಿ ಬರೋಬ್ಬರಿ 75,60,782 ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿ ತಪಾಸಣೆ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+