Video: ಕೊರೊನಾ ಲಸಿಕೆಗೆ ಪಟಾಕಿ ಸಿಡಿಸಿ, ಹೂವು ಚೆಲ್ಲಿ ಅದ್ಧೂರಿ ಸ್ವಾಗತ!
ರಾಯಪುರ್, ಜನವರಿ.16: ಜಗತ್ತು ಎದುರು ನೋಡುತ್ತಿದ್ದ ಕೊರೊನಾ ಲಸಿಕೆಯು ಬಿಡುಗಡೆಯಾಗಿದೆ. ದೇಶಾದ್ಯಂತ ಈಗಾಗಲೇ ಹಲವು ರಾಜ್ಯಗಳಲ್ಲಿ ಲಸಿಕೆ ವಿತರಣೆಯೂ ನಡೆದಿದೆ. ಇದರ ಮಧ್ಯೆ ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆಯನ್ನು ಸ್ವಾಗತಿಸಿರುವ ರೀತಿ ಸಖತ್ ಸದ್ದು ಮಾಡಿದೆ.
ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಿ ಆಗಿದೆ. ದೇಶಾದ್ಯಂತ ಶನಿವಾರ ಕೊರೊನಾ ಲಸಿಕೆ ವಿತರಣೆ ನಡೆಸಿದ ಹಿನ್ನಲೆ ಎರಡ್ಮೂರು ದಿನಗಳಿಗೂ ಮೊದಲೇ ಎಲ್ಲ ಜಿಲ್ಲಾಕೇಂದ್ರಗಳಿಗೆ ಲಸಿಕೆ ತಲುಪಿಸಲಾಗಿತ್ತು. ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆಯನ್ನು ವಿನೂತನ ರೀತಿಯಲ್ಲಿ ಸ್ವಾಗತಿಸಿಕೊಳ್ಳಲಾಯಿತು.

ಛತ್ತೀಸ್ ಗಢದ ಜೈ ಸ್ತಂಭ ಚೌಕ್ ರಸ್ತೆಯಲ್ಲಿ ಲಸಿಕೆಯನ್ನು ತರುವ ಹಾದಿಯಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಹೂವುಗಳನ್ನು ಚೆಲ್ಲಿ, ಪಟಾಕಿಯನ್ನು ಸಿಡಿಸುತ್ತಾ, ಬ್ಯಾಂಡ್ ಬಾರಿಸುತ್ತಾ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
#WATCH Chhattisgarh: #COVID19 vaccine was welcomed with flowers, band, firecrackers & 'puja' when it arrived in Jashpur y'day. Workers of Health Dept walked up to Jai Stambh Chowk to receive the vehicle that carried vaccine. #COVID19Vaccination is underway across India today. pic.twitter.com/v5G0M2kAPX
— ANI (@ANI) January 16, 2021
ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆ ಕೇಂದ್ರ:
ಛತ್ತೀಸ್ ಗಢ ರಾಜಧಾನಿ, ಬಲೋಡ್‌ನ ಜಿಲ್ಲಾ ಲಸಿಕೆ ಕೇಂದ್ರವು(ಡಿವಿಎಸ್) ಮಾದರಿ ಲಸಿಕೆ ಕೇಂದ್ರವಾಗಿ ಹೊರಹೊಮ್ಮಿದೆ. ಜಿಲ್ಲಾ ಮಟ್ಟದಲ್ಲಿ ನೆಲೆಗೊಂಡಿರುವ ಜಿಲ್ಲಾ ಲಸಿಕೆ ಕೇಂದ್ರವೊಂದು ಪ್ರಾದೇಶಿಕ ಮತ್ತು ರಾಜ್ಯದ ಲಸಿಕೆ ಕೇಂದ್ರಗಳಿಂದ ಈ ಲಸಿಕೆ ಪಡೆಯಲಾಗುತ್ತದೆ. ನಂತರ ಪ್ರತಿ ತಿಂಗಳು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಲಸಿಕೆ ಮತ್ತು ಸಿರಿಂಜಿನಂತಹ ಒಣ ದಾಸ್ತಾನುಗಳನ್ನು ರವಾನಿಸಲಾಗುತ್ತದೆ.
Recommended Video
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications