ಹೈದರಾಬಾದ್ ರೇವ್ ಪಾರ್ಟಿ: 26 ಜನರ ಬಂಧನ
ಹೈದರಾಬಾದ್, ಜು.14: ಹೈದರಾಬಾದ್ ತುರ್ಕಾಪಲ್ಲಿ ಪ್ರದೇಶದ ಕೋಳಿ ಫಾರಂ ಆವರಣದಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದವರ ಮೇಲೆ ಭಾನುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ರಾಯಚೂರಿನ ಉದ್ಯಮಿಗಳು ಸೇರಿದಂತೆ 26 ಜನರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಶಾಮೀರ್‌ಪೇಟೆ ಪೊಲೀಸರು ರೇವ್ ಪಾರ್ಟಿಯಲ್ಲಿದ್ದ 14 ಯುವಕ, 12ಯುವತಿಯರನ್ನು ಬಂಧಿಸಿದ್ದಾರೆ.[ರೇವ್ ಪಾರ್ಟಿ ಮಾಡಿ ಸಿಕ್ಕರೂ ಭಯವಿಲ್ಲ]

ಬಂಧಿತ 12 ಯುವತಿಯರಲ್ಲಿ ಕೋಲ್ಕತ್ತಾದ ಮೂವರೂ, ಮುಂಬೈಯ ಒಬ್ಬಳು, 8 ಮಂದಿ ತೆಲಂಗಾಣದ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸ್ಥಳದಲ್ಲಿ ಅಪಾರ ಪ್ರಮಾಣದ ಮದ್ಯ, 2 ಲಕ್ಷ ರೂ. ನಗದು, 19 ಮೊಬೈಲ್ ಫೋನ್‌ಗಳು ಹಾಗೂ ನಾಲ್ಕು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












Click it and Unblock the Notifications