ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮೋದ್ ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದು

By Mahesh
|
Google Oneindia Kannada News

ಬೆಂಗಳೂರು, ಮಾ.23: ಶ್ರೀರಾಮಸೇನೆ, ರಾಷ್ಟೀಯ ಹಿಂದೂ ಸೇನೆಯ ಮುಖ್ಯಸ್ಠರಾದ ಪ್ರಮೋದ ಮುತಾಲಿಕ್ ಅವರ ಬಿಜೆಪಿ ಸೇರ್ಪಡೆ ರದ್ದುಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಘಟಕಕ್ಕೆ ನೋಟಿಸ್ ಕಳಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಮೂಲಕ ಪ್ರಮೋದ್ ಮುತಾಲಿಕ್ ಅವರ ಕೆಲ ಗಂಟೆಗಳ ಬಿಜೆಪಿ ಸದಸ್ಯತ್ವ ಅವಧಿ ಸಮಾಪ್ತಿಯಾಗಿದೆ.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಸೇರ್ಪಡೆ ಸುದ್ದಿ ಭಾನುವಾರ ಮಧ್ಯಾಹ್ನ ಪ್ರಕಟಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕೋಲಾಹಲ ಉಂಟಾಯಿತು. ಮುತಾಲಿಕ್ ಪರ -ವಿರೋಧ ಟ್ವೀಟ್ ಗಳ ಸಮರದಲ್ಲಿ ಕೊನೆಗೆ ವಿರೋಧಿ ಬಣದ ಟ್ವೀಟ್ ಗಳು ಗೆಲುವು ಸಾಧಿಸಿ ನೇರವಾಗಿ ಬಿಜೆಪಿ ಕೇಂದ್ರ ಕಚೇರಿ ಬಾಗಿಲು ತಟ್ಟಿದವು.

ಹೀಗಾಗಿ ಒತ್ತಡಕ್ಕೆ ಬಿದ್ದ ಬಿಜೆಪಿ, ಪಕ್ಷದ ಹಿರಿಯ ನಾಯಕರ ಹಾಗೂ ಪ್ರಜೆಗಳ ತೀರ್ಮಾನಕ್ಕೆ ಜೈಕಾರ ಹಾಕಲೇ ಬೇಕಾಯಿತು.ಮಂಗಳೂರು ಪಬ್ ದಾಳಿ ಪ್ರಕರಣದ ಆರೋಪಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಸ್ಪಷ್ಟವಾಗುತ್ತಿದೆ. ಎಂದು ಪಬ್ ದಾಳಿ ಹಳೆಯ ಚಿತ್ರಗಳನ್ನು ಪೋಣಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಮಹಿಳೆಯರ ಬಗ್ಗೆ ಹೊಂದಿರುವ ಕಾಳಜಿ ಬಗ್ಗೆ ಪ್ರಶ್ನಿಸಲಾಗಿತ್ತು.

ಸ್ವಪಕ್ಷ, ವಿಪಕ್ಷ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ನೀಡಿರುವ ಅಭಿಪ್ರಾಯಗಳನ್ನು ಮನ್ನಿಸಿ ಪ್ರಮೋದ್ ಮುತಾಲಿಕ್ ಅವರ ಬಿಜೆಪಿ ಸದಸ್ಯತ್ವ ರದ್ದು ಮಾಡುವಂತೆ ರಾಜ್ಯ ಘಟಕಕ್ಕೆ ಸೂಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.

ವಿವಾದಿತ ಹಿಂದೂ ಪರ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯ ಬಿ.ಜೆ.ಪಿಯ ಚುನಾವಣಾ ಪ್ರಚಾರ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಅಧಿಕೃತವಾಗಿ ಬಿ.ಜೆ.ಪಿಗೆ ಸೇರ್ಪಡೆಗೊಂಡಿದ್ದರು. ಪ್ರಮೋದ್ ಮುತಾಲಿಕ್ ಬಗ್ಗೆ ಇತ್ತೀಚಿನ ಟ್ವೀಟ್ ಗಳತ್ತ ಕಣ್ಣು ಹಾಯಿಸಿ...

 ಪ್ರಮೋದ್ ಸಾಮಾಜಿಕ ಜಾಲ ತಾಣಗಳಲ್ಲಿ ವಿರೋಧ

ಪ್ರಮೋದ್ ಸಾಮಾಜಿಕ ಜಾಲ ತಾಣಗಳಲ್ಲಿ ವಿರೋಧ

2009ರಲ್ಲಿ ಮಂಗಳೂರಿನ ಪಬ್ ದಾಳಿ ಪ್ರಕರಣದಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಆರೋಪ ಹೊತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿ ಹೇಗೆ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಪ್ರಶ್ನಿಸಿತ್ತು. ಹಲವಾರು ಸಾರ್ವಜನಿಕರು ಕೂಡಾ ಇದಕ್ಕೆ ದನಿಗೂಡಿಸಿದ್ದರು.

ಇದರ ಜತೆಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಮೋದ್ ಅವರನ್ನು ಬಲವಂತವಾಗಿ ಬಿಜೆಪಿ ತೊರೆಯುವಂತೆ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ. ರಾಜ್ಯ ಬಿಜೆಪಿ ಪ್ರಕ್ರಿಯೆ ಆರಂಭಿಸಬೇಕಿದೆ.

ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದು: ನಿರ್ಮಲಾ

ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದುಗೊಳಿಸಲಾಗಿದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು ಎಎನ್ ಐಗೆ ನೀಡಿದ ಹೇಳಿಕೆ

ರಾಜ್ಯ ಬಿಜೆಪಿ ವಕ್ತಾರೆ ಮಾಳವಿಕಾ ಹೇಳಿಕೆ

ಪ್ರಮೋದ್ ಮುತಾಲಿಕ್ ಸೇರ್ಪಡೆ ವಿಷಯ ಚರ್ಚೆಯಲ್ಲಿದೆ. ಸದ್ಯಕ್ಕೆ ಸೇರ್ಪಡೆಯನ್ನು ತಡೆಹಿಡಿಯಲಾಗಿದೆ ಎಂದು ಟ್ವೀಟಿಸಿರುವ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್

ಬಿಜೆಪಿಯಿಂದ ಕೇಜ್ರಿ ಟರ್ನ್ ಆಟ

ಬಿಜೆಪಿಯಿಂದ ಪ್ರಮೋದ್ ಮುತಾಲಿಕ್ ಹೊರ ಹಾಕಿದರೂ ಭೂಗತವಾಗಿ ಬಿಜೆಪಿ ಪರ ಕಾರ್ಯನಿರ್ವಹಿಸಲು ಸೂಚಿಸಲಾಗುತ್ತದೆ.

ಪ್ರಮೋದ್ ಬಗ್ಗೆ ಕಾಂಗ್ರೆಸ್ ನಿಂದ ಪ್ರಶ್ನೆ

ಪ್ರಮೋದ್ ಮುತಾಲಿಕ್ ಸೇರ್ಪಡೆ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಶ್ನೆ

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್

ಪ್ರಮೋದ್ ಮುತಾಲಿಕ್ ಸೇರ್ಪಡೆ ವಿರೋಧಿಸಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್ ಹೇಳಿಕೆ

ಕರ್ನಾಟಕ ಬಿಜೆಪಿಯಿಂದ ಇತ್ತೀಚಿನ ಟ್ವೀಟ್

ಪ್ರಮೋದ್ ಮುತಾಲಿಕ್ ಸೇರ್ಪಡೆ ವಿರೋಧ ಗುರುತಂತೆ ಕರ್ನಾಟಕ ಬಿಜೆಪಿಯಿಂದ ಇತ್ತೀಚಿನ ಟ್ವೀಟ್

English summary
Barely a few hours after controversial chief of the Sri Ram Sene Pramod Muthalik joined the BJP, his admission to the party has been stopped, according to sources(@ANI_news). Senior BJP leaders like Sushma Swaraj, Manohar Parikkar were unhappy with the state units move to take Mr Muthalik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X