ಅಧಿಕಾರಶಾಹಿಗಳ ಮೇಲಿನ ನಿಯಂತ್ರಣ ಕೇಸ್: ಕೇಂದ್ರದ ವಿರುದ್ಧ ಸುಪ್ರೀಂಗೆ ಮತ್ತೆ ಕೇಜ್ರಿವಾಲ್ ಅರ್ಜಿ
ನವದೆಹಲಿ ಮೇ 12: ಅಧಿಕಾರಶಾಹಿಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಸಾಂವಿಧಾನಿಕ ಪೀಠದ ಆದೇಶವನ್ನು ಕೇಂದ್ರ ಸರ್ಕಾರ ಧಿಕ್ಕರಿಸುತ್ತಿದೆ ಎಂದು ಆರೋಪಿಸಿ ದೆಹಲಿ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಆದೇಶಿಸಿದ ಅಧಿಕಾರಿಯ ವರ್ಗಾವಣೆಗೆ ಕೇಂದ್ರವು ಅಡ್ಡಿಪಡಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ಅಧಿಕಾರಿಗಳ ಮೇಲಿನ ನಿಯಂತ್ರಣ ಮತ್ತು ನಿಯೋಜನೆಯ ಅಧಿಕಾರ ದಿಲ್ಲಿ ಸರ್ಕಾರದ ಅಧೀನಕ್ಕೆ ಒಳಪಡುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಕೇಜ್ರಿವಾಲ್ ಸರ್ಕಾರ ಕೆಲ ಅಧಿಕಾರಿಗಳನ್ನು ತೆಗೆಯಲು ಮುಂದಾಗಿದ್ದು ಅದಕ್ಕೆ ಕೇಂದ್ರ ಸಮ್ಮತಿಸಿಲ್ಲ ಎನ್ನಲಾಗುತ್ತಿದೆ.

ದಿಲ್ಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶೀಶ್ ಮೋರೆ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಕೇಜ್ರಿವಾಲ್ ಮುಂದಾಗಿದ್ದರು. ಇದರೊಂದಿಗೆ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆ ನಡೆಯಲಿದೆ ಎಂಬ ಎಚ್ಚರಿಕೆ ನೀಡಲು ಕೇಜ್ರಿವಾಲ್ ಮುಂದಾಗಿದ್ದರು. ಆದರೆ ಕೇಜ್ರಿವಾಲ್ ಅಂದುಕೊಂಡಂತೆ ಏನೂ ಆಗಿಲ್ಲ.
ದೆಹಲಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ ಪ್ರಕಾರ ಕೇಜ್ರಿವಾಲ್ ಸರ್ಕಾರ ಈಗ ಅಧಿಕಾರಿಗಳ ವರ್ಗಾವಣೆ-ಪೋಸ್ಟಿಂಗ್ಗೆ ಅರ್ಹವಾಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ಸಿಎಂ ನಡುವಿನ ವಿವಾದ ಇಲ್ಲಿಗೇ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.

ಕೇಜ್ರಿವಾಲ್ ಸರ್ಕಾರ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸ್ಥಾನದಿಂದ ತೆಗೆದುಹಾಕಿತ್ತು. ಆದರೆ ಕೇಂದ್ರ ಸರ್ಕಾರ ಆದೇಶವನ್ನು ಜಾರಿಗೆ ತರಲು ಅವಕಾಶ ನೀಡುತ್ತಿಲ್ಲ. ಸುಪ್ರೀ ಆದೇಶದ ನಂತರವೂ ರಾಜ್ಯ ಸರ್ಕಾರ ಆದೇಶಿಸಿದ ಅಧಿಕಾರಿಯ ವರ್ಗಾವಣೆಗೆ ಕೇಂದ್ರವು ಅಡ್ಡಿಪಡಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಹೀಗಾಗಿ ಮತ್ತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಖ್ಯ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಲು ಸಿದ್ಧರಾಗಿದ್ದಾರೆ. ಈ ವಿಷಯವನ್ನು ಶೀಘ್ರದಲ್ಲೇ ಪಟ್ಟಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಸರ್ಕಾರಕ್ಕೆ ಅಧಿಕಾರಿಗಳ ವರ್ಗಾವಣೆ-ಪೋಸ್ಟ್ ಮಾಡುವ ಹಕ್ಕಿನ್ನು ನೀಡಿದ್ದು, ಅದರ ಪ್ರಕಾರ ರಾಜ್ಯ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ, ಸೇವಾ ಇಲಾಖೆ ಕಾರ್ಯದರ್ಶಿ, ಎಂಸಿಡಿ ಆಯುಕ್ತರು ಮತ್ತು ಡಿಡಿಎ ಉಪಾಧ್ಯಕ್ಷರ ಸ್ಥಾನವನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ.
ದೆಹಲಿ ಸರ್ಕಾರಕ್ಕೆ ಯಾರ ಪೋಸ್ಟಿಂಗ್ ಬೇಕು?
ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ತಕ್ಷಣ ದೆಹಲಿ ಸರ್ಕಾರವು ಕಾರ್ಯಪ್ರವೃತ್ತವಾಯಿತು. ಅವರು ತಕ್ಷಣವೇ ಹಲವಾರು ಸಭೆಗಳನ್ನು ನಡೆಸಿದರು. ಅದರಲ್ಲಿ ಸೇವೆಗಳ ಕಾರ್ಯದರ್ಶಿ ಆಶಿಶ್ ಮೋರ್ ಅವರನ್ನು ತೆಗೆದುಹಾಕಲು ನಿರ್ಧರಿಸಲಾಯಿತು. ಅವರ ಜಾಗಕ್ಕೆ ಅನಿಲ್ ಕುಮಾರ್ ಸಿಂಗ್ ಅವರನ್ನು ನೇಮಿಸಬೇಕಿದ್ದರೂ ಕೇಂದ್ರ ಒಪ್ಪಿಗೆ ನೀಡಿಲ್ಲ.












Click it and Unblock the Notifications