ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೋ ಬ್ಯಾಕ್ ' ರಾಹುಲ್ ಎಂದ ಮಾಜಿ ಸೈನಿಕರು

|
Google Oneindia Kannada News

ನವದೆಹಲಿ, ಆಗಸ್ಟ್. 14: ಚೀಟಿ ಇಟ್ಟುಕೊಂಡು ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಶುಕ್ರವಾರ ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸೈನಿಕರ ಪರ ಧ್ವನಿ ಎತ್ತಲು ತೆರಳಿದ್ದರು. ಆದರೆ ಸೈನಿಕರಿಂದ ಆಕ್ರೋಶದ ಮಾತುಗಳನ್ನು ಎದುರಿಸಬೇಕಾಯಿತು.

ಇಷ್ಟು ದಿನ ನಿಮಗೆ ನಮ್ಮ ನೆನಪಿರಲಿಲ್ಲವೇ? ಈಗ ಸಮಸ್ಯೆ ಗೊತ್ತಾಯಿತೇ? ನಮ್ಮ ಜತೆ ನೀವು ಪ್ರತಿಭಟನೆಗೆ ಬರುವುದು ಬೇಡ ಎಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸೈನಿಕರು ರಾಹುಲ್ ಗಾಂಧಿ ಮೇಲೆ ಆಕ್ರೋಶ ಹೊರಹಾಕಿದರು.[ರಾಹುಲ್ ಗಾಂಧಿ ಭಾಷಣದ ಹಿಂದಿನ ಶಕ್ತಿ ಗೊತ್ತಾಯ್ತು]

ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳ ಪ್ರತಿಭಟನೆಗೂ ರಾಹುಲ್ ಬೆಂಬಲ ಸೂಚಿಸಿ ಅದರಲ್ಲಿ ಪಾಲ್ಗೊಂಡಿದ್ದರು. ನಂತರ ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದರು. ಆದರೆ ಇದೀಗ ಸೈನಿಕರ ಪರ ಧ್ವನಿ ಎತ್ತಲು ತೆರಳಿ ವಾಪಸಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಜಂತರ್ ಮಂತರ್ ಗೆ ತೆರಳಿದ ರಾಹುಲ್

ಜಂತರ್ ಮಂತರ್ ಗೆ ತೆರಳಿದ ರಾಹುಲ್

ಮಾಜಿ ಸೈನಿಕರ ಸಮಸ್ಯೆ ಆಲಿಸಲು ದೆಹಲಿಯ ಜಂತರ್ ಮಂತರ್ ಗೆ ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಜಿ ಸೈನಿಕರ ಆಕ್ರೋಶ ಎದುರಿಸಬೇಕಾಯಿತು.

2 ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ

2 ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ

ಒನ್ ರಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೆ ಆಗ್ರಹಿಸಿ ನಿವೃತ್ತ ಸೈನಿಕರು ಕಳೆದ 2 ತಿಂಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿದ್ದಾರೆ.

ನಮ್ಮ ಕೂಗು ಕೇಳುವವರು ಯಾರು?

ನಮ್ಮ ಕೂಗು ಕೇಳುವವರು ಯಾರು?

ದೇಶಕ್ಕಾಗಿ ದುಡಿದು ಇಂದು ನಿವೃತ್ತಿ ತೆಗೆದುಕೊಂಡು ಜೀವನದ ಸಂಧ್ಯಾಕಾಲದಲ್ಲಿದ್ದೇವೆ. ನಮ್ಮ ಕೂಗಿಗೆ ಸರ್ಕಾರ ಯಾವಾಗ ಸ್ಪಂದಿಸುತ್ತದೆ? ಎಂದು ಪ್ರಶ್ನೆ ಮಾಡುತ್ತಿರುವ ಮಾಜಿ ಯೋಧ.

ನಿಮ್ಮ ಸಹಕಾರ ಬೇಕಾಗಿಲ್ಲ

ನಿಮ್ಮ ಸಹಕಾರ ಬೇಕಾಗಿಲ್ಲ

ಮಾಜಿ ಸೈನಿಕರ ಪ್ರತಿಭಟನೆಗೆ ತೆರಳಿ ಬೆಂಬಲ ನೀಡಲು ಮುಂದಾದ ರಾಹುಲ್ ಗಾಂಧಿ ಘೋಷಣೆಗಳನ್ನು ಎದುರಿಸಬೇಕಾಯಿತು. ನಿಮ್ಮ ಸಹಕಾರ ಬೇಕಾಗಿಲ್ಲ ದಯವಿಟ್ಟು ಹಿಂದಕ್ಕೆ ತೆರಳಿರಿ ಎಂದು ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು.

ಯೋಜನೆ ಜಾರಿಗೆ ಆಗ್ರಹ

ಯೋಜನೆ ಜಾರಿಗೆ ಆಗ್ರಹ

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಒನ್ ರಾಂಕ್, ಒನ್ ಪೆನ್ಶನ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.

English summary
New Delhi: Rahul Gandhi visited Jantar Mantar where ex-servicemen are staging a protest demanding implementation of OROP. But protesters raising slogans of "go back Rahul". Gandhi, who had come to express his solidarity with the servicemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X