'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ

ರೋಹ್ಟಕ್(ಹರ್ಯಾಣ), ಮೇ 10: "ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಸಿಖ್ ದಂಗೆಯ ಬಗ್ಗೆ ನೀಡಿದ 'ಹುವಾ ತೋ ಹುವಾ' ಹೇಳಿಕೆ ಕಾಂಗ್ರೆಸ್ಸಿಗರ ದುರಹಂಕಾರದ ಪ್ರವೃತ್ತಿಗೆ ಸಾಕ್ಷಿ" ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಹರ್ಯಾಣದ ರೋಹ್ಟಕ್ ನಲ್ಲಿ ಶುಕ್ರವಾರ ಪ್ರಚಾರ ಸಭೆ ನಡೆಸುತ್ತಿದ್ದ ಮೋದಿ, ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ, ಕಾಂಗ್ರೆಸ್ ನ ನಡವಳಿಕೆ ಮತ್ತು ಮಾನಸಿಕತೆಯನ್ನು ತೋರಿಸಿಕೊಡುತ್ತದೆ ಎಂದರು.

1984 ರಲ್ಲಿ ನಡೆದ ಸಿಖ್ ದಾಳಿಯಲ್ಲಿ ಸಿಖ್ಕರನ್ನು ಕೊಲ್ಲಲು ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಸೂಚನೆ ನೀದಿದ್ದರು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಯಾಮ್ ಪಿತ್ರೋಡಾ, "ಆಗಿದ್ದು ಆಯ್ತು,(ಹುವಾ ತೋ ಹುವಾ) ಭೂತಕಾಲದ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ" ಎಂದಿದ್ದರು. ಈ ಹೇಳಿಕೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಬಿಜೆಪಿ ನಾಯಕರು ಪಿತ್ರೋಡಾ ಅವರನ್ನು ಟೀಕಿಸಿದ್ದರು. 'ನನ್ನ ಹೇಳಿಕೆಯನ್ನು ತಿರುಚಲಾಗಿದೆ' ಎಂದು ನಂತರ ಪಿತ್ರೋಡಾ ಹೇಳಿದ್ದರು.

Congresss arrogance were uttered by its senior leader: Narendra Modi

ಈ ಕುರಿತು ಇಂದಿನ ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ, 'ಹುವಾ ತೋ ಹುವಾ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡರು, ಗಾಂಧಿ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ. ಈ ಮೂರು ಪದಗಳ ಮೂಲಕ ಅವರು ಕಾಂಗ್ರೆಸ್ಸಿಗರ ನಡವಳಿಕೆ ಮತ್ತು ಮಾನಸಿಕತೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ದುರಹಂಕಾರಕ್ಕೆ ಇದು ನಿದರ್ಶನ' ಎಂದಿದ್ದಾರೆ.

ಸಾವಿರಾರು ಸಿಖ್ಕರನ್ನು ಅವರ ಮನೆಯಿಂದ ಎಳೆದುತಂದು ಕೊಲ್ಲಲಾಯ್ತು. ಅದಕ್ಕೆ ಕಾಂಗ್ರೆಸ್ 'ಆಗಿದ್ದೆಲ್ಲ ಆಯ್ತು' ಎನ್ನುತ್ತದೆಂದರೆ ಇದು ದುರಹಂಕಾರದ ಪರಮಾವಧಿಯಲ್ಲವೇ? ಎಂದು ಮೋದಿ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+