ಕಾಂಗ್ರೆಸ್ ಸೋತ್ರು ನಿರಾಸೆಯಾಗದೇ ಕಲಾಪಕ್ಕೆ ಹಾಜರಾದ ರಾಹುಲ್
ನವದೆಹಲಿ, ಡಿಸೆಂಬರ್ 18: ಇಂದು (ಸೋಮವಾರ) ದೇಶದೆಲ್ಲೆಡೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ ಫಲಿತಾಂಶದ ಆಗು-ಹೋಗು ಬಗ್ಗೆ ಚರ್ಚೆಗಳು ನಡೆದಿವೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಇವಿಎಂ, ಹಣದ ಆಮೀಷ, ಅಧಿಕಾರ ದುರುಪಯೋಗ ಅಂತ ಏನೇನೋ ಕಾರಣಗಳನ್ನು ಕೊಟ್ಟು ನುಣುಚಿಕೊಳ್ಳುತ್ತಿದ್ದಾರೆ. ಇನ್ನು ಸೋಲಿನಿಂದ ಹತಾಶೆಗೊಂಡಿರುವ ನೂತನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದರು.
ಬಳಿಕ ಹೊರ ಬಂದ ರಾಹುಲ್ ಗಾಂಧಿ, "ಪ್ರತಿಷ್ಠಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಸೋಲಿನತ್ತ ಮುಖ ಮಾಡಿದೆ. ಹೀಗಿದ್ದೂ, 'ತಮಗೆ ಈ ಸೋಲಿನಿಂದ ನಿರಾಸೆಯಾಗಿಲ್ಲ' ಎಂದ್ಹೇಳಿ ಹೆಚ್ಚಿಗೆ ಮಾಧ್ಯಮಗಳ ಮುಂದೆ ತುಟಿ ಬಿಚ್ಚದೆ ನೇರವಾಗಿ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಪಾರ್ಲಿಮೆಂಟ್ ಗೆ ತೆರಳಿದರು.

ವಿಜಯದ ಸಂಕೇತದೊಂದಿಗೆ ಕಲಾಪಕ್ಕೆ ತರಳಿದ ಮೋದಿ
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಮಲ ಅರಳುವುದು ಪಕ್ಕಾ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ ಸಂಕೇತ ತೋರಿಸಿತ್ತಾ ಮುಗುಳ್ನಗೆಯೊಂದಿಗೆ ಕಲಾಪಕ್ಕೆ ತರಳಿದರು. ಇತ್ತ ರಾಹುಲ್ ಗಾಂಧಿ ಸಹ ಮಾಧ್ಯಮಗಳಿಗೆ ಹೆಚ್ಚೇನೂ ಪ್ರತಿಕ್ರಿಯಿಸಿದೆ ನಿರಾಸೆಯೊಂದಿಗೆ ಕಲಾಪದಲ್ಲಿ ಪಾಲ್ಗೊಳ್ಳಲು ತೆರಳಿದರು.

ರಾಹುಲ್ ಗಾಂಧಿಗೆ ಗೆ ಆರಂಭಿಕ ಆಘಾತ
ಎಐಸಿಸಿ ಅಧ್ಯಕ್ಷ ಹೊಣೆ ಹೊತ್ತುಕೊಂಡ ಬಳಿಕ ರಾಹುಲ್ ಗಾಂಧಿಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶ ಆರಂಭಿಕ ಆಘಾತ ನೀಡಿದ್ದು, ಮುಂದೆ ರಾಹುಲ್ ಗೆ ಹಲವು ಸವಾಲುಗಳು ಎದುರಾಗಲಿವೆ. ಏಪ್ರಿಲ್ ಅಥವಾ ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಾದ ಬಳಿಕ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಮಧ್ಯಪ್ರದೇಶ, ಛತ್ತೀಸಘಡ ರಾಜಸ್ಥಾನದಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿವೆ. ಇದು ರಾಹುಲ್ ಗೆ ಮುಂದಿರುವ ಸವಾಲುಗಳಾಗಿವೆ.

ಹಂತ-ಹಂತವಾಗಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್
ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ದೇಶದಲ್ಲಿ ಕಾಂಗ್ರೆಸ್ ಮುಕ್ತಕ್ಕೆ ಪಣತೊಟ್ಟಿದ್ದು, ಅದರಂತೆ ಹಲವು ಮಾಸ್ಟರ್ ಪ್ಲ್ಯಾನ್ ಗಳ ಮೂಲಕ ಒಂದೊಂದೆ ರಾಜ್ಯವನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಂತ-ಹಂತವಾಗಿ ದೇಶದಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಕರ್ನಾಟಕ ಮತ್ತು ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಇರುವುದು ಬಿಟ್ಟರೇ ಇನ್ನುಳಿದ 28 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ವಿದೆ. ಮೊನ್ನಷ್ಟೇ ಎಐಸಿಸಿ ಸಾರಥಿಯಾಗಿರುವ ರಾಹುಲ್ ಗಾಂಧಿ ಮುಂಬರು ವಿವಿಧ ರಾಜ್ಯಗಳ ಚುನಾವಣೆಯನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತಾರೆ ಎನ್ನುವುದು ಮುಂದೆ ಕಾದುನೋಡಬೇಕಿದೆ.

ಮೋದಿ-ಅಮಿತ್ ಶಾ ಜುಗಲ್ ಬಂದಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜಕೀಯ ಚಾಣಕ್ಯ ಎಂದೇ ಬಿಂಬಿಸಲಾಗುತ್ತಿದ್ದು, ಶಾಗೆ ನರೇಂದ್ರ ಮೋದಿ ತಕ್ಕ ಸಾಥ್ ನೀಡುತ್ತಿದ್ದಾರೆ. ಇದರಿಂದ ಅಮಿತ್ ಶಾ ಮತ್ತು ಮೋದಿ ಜೋಡಿ ಹಲವು ಮಾಸ್ಟರ್ ಪ್ಲ್ಯಾನ್ ಗಳೊಂದಿಗೆ ಚುನಾವಣೆ ಅಖಾಡಕ್ಕಿಳಿದು ಯಶಸ್ಸು ಸಾಧಿಸುತ್ತಾ ಮುನ್ನಡೆದಿದ್ದಾರೆ. ಉತ್ತರ ಪ್ರದೇಶದ ಯಶಸ್ಸಿನ ಜಾಡನ್ನೇ ಹಿಡಿದುಕೊಂಡು ಹೊರಟ ಅಮಿತ್ ಶಾ ಅವರು ಆಯಕಟ್ಟಿನ ಜಾಗದಲ್ಲಿ ಇಂಥವರೇ ಇರಬೇಕೆಂದು ನಿರ್ಧರಿಸಿ, ತಳಮಟ್ಟದಲ್ಲಿ ತಂಡವನ್ನು ಸಂಘಟಿಸುತ್ತಿದ್ದಾರೆ.












Click it and Unblock the Notifications