ಮಾಜಿ ಪ್ರಧಾನಿ ನೆಹರು ಎದುರು ಸಣ್ಣವರಾದ್ರಾ ಪ್ರಧಾನಿ ಮೋದಿ?
ನವದೆಹಲಿ: ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನ ಸಂಸತ್ ಭವನ ಇಂದು ಉದ್ಘಾಟನೆ ಆಗಿದೆ. ಆದ್ರೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶದ ಮಳೆ ಸುರಿಸುತ್ತಿದ್ದು ಕಾಂಗ್ರೆಸ್ ಇದೀಗ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ನೆಹರು ನಡುವೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಸುನಾಮಿ ಎದ್ದಿದೆ.
ರಾಷ್ಟ್ರೀಯ ಕಾಂಗ್ರೆಸ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಟ್ವೀಟ್ ಒಂದು ಪೋಸ್ಟ್ ಆಗಿದ್ದು, ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲೂ ನೂತನ ಸಂಸತ್ ಭವನ ವಿಚಾರದ ಘರ್ಷಣೆಗೆ ವೇದಿಕೆ ಒದಗಿಸಿದೆ. ಪಿಎಂ ಮೋದಿಯವರ ಜೊತೆ ನೆಹರು ಅವರನ್ನ ಹೋಲಿಕೆ ಮಾಡಿರುವ ಫೋಟೋ ಒಂದನ್ನ ಕಾಂಗ್ರೆಸ್ ಪೋಸ್ಟ್ ಮಾಡಿದೆ. ಆದ್ರೆ ಈ ಫೋಟೋ ಬಗ್ಗೆ ಪರ & ವಿರೋಧದ ಕಮೆಂಟ್‌ಗಳು ಜೋರಾಗಿದ್ದು, ಕಿತ್ತಾಟ ಕೂಡ ಆರಂಭವಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ನೆಹರು ಎದುರು ಪಿಎಂ ಮೋದಿ ಸಣ್ಣವರಾದ್ರಾ?
ಹೌದು, ಈಗ ಕಾಂಗ್ರೆಸ್ ಪೋಸ್ಟ್ ಮಾಡಿದ ಫೋಟೋ ವಿವಾದಕ್ಕೆ ನೀರೆರೆದಿದೆ. 'ನೀವು ಎಷ್ಟೇ ಪ್ರಯತ್ನಿಸಿದ್ರೂ ಪರವಾಗಿಲ್ಲ' ಎಂದು ಬರೆದುಕೊಂಡಿರುವ ಪೋಸ್ಟ್ ಕೆಳಗೆ ಫೋಟೋ ಕೂಡ ಟ್ವಿಟ್ ಆಗಿದೆ. ಫೋಟೋದಲ್ಲಿ ಪ್ರಧಾನಿ ಮೋದಿ ಎದುರು ಭಾರತದ ಮೊದಲ ಪ್ರಧಾನಿ ನೆಹರು ಅವರ ಬೃಹತ್ ಪ್ರತಿಮೆ ನಿಲ್ಲಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದ್ದು, ಫೈಟಿಂಗ್ ಕೂಡ ಬಲು ಜೋರಾಗಿ ನಡೆಯುತ್ತಿದೆ. ಅದರ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಕಾಂಗ್ರೆಸ್ ಟ್ವೀಟ್ ವಿರುದ್ಧ ಸಮರ!
ನೆಹರು ಹಾಗೂ ಪ್ರಧಾನಿ ಮೋದಿ ನಡುವೆ ಹೋಲಿಕೆ ಮಾಡಿ ಕಾಂಗ್ರೆಸ್ ಮಾಡಿರುವ ಟ್ವೀಟ್ ವಿರುದ್ಧ ಇದೀಗ ಪ್ರಧಾನಿ ಮೋದಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ನೆಹರು ಅವರ ಹಳೆಯ ವಿಚಾರದ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಇದು ಸೊಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದೆ. ಈ ನಡುವೆ ನೆಹರು ಅಭಿಮಾನಿಗಳು ಕೂಡ ಈ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡುತ್ತಿದ್ದು, ಫೈಟಿಂಗ್ ಜೋರಾಗಿದೆ.
कितनी भी कोशिश कर लो pic.twitter.com/SHjCWZUP9z
— Congress (@INCIndia) May 28, 2023
ಸಂಸತ್ ಭವನದ ಜೊತೆ ಶವ ಪೆಟ್ಟಿಗೆ!
ಲಾಲು ಯಾದವ್‌ರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿವಾದಾತ್ಮಕ ಟ್ವೀಟ್ ಮಾಡಿದ್ದು, ಇದೀಗ ಉದ್ಘಾಟನೆ ಆಗುತ್ತಿರುವ ಹೊಸ ಸಂಸತ್ ಭವನದ ರಚನೆಯನ್ನು ಶವ ಪೆಟ್ಟಿಗೆಗೆ ಜೊತೆ ಹೋಲಿಸಿದೆ. ಟ್ವೀಟ್‌ನಲ್ಲಿ ಒಂದ್ಕಡೆ ಶವಪೆಟ್ಟಿಗೆ ಹಾಕಿ ಇನ್ನೊಂದು ಕಡೆ ಸಂಸತ್ ಭವನದ ಕಟ್ಟಡದ ಫೋಟೋ ಹಾಕಿ 'ಇದು ಏನು?' ಎಂಬಂತೆ ಪ್ರಶ್ನಾರ್ಥಕ ಚಿಹ್ನೆ ಮೂಲಕ ವಿವಾದ ಹುಟ್ಟುಹಾಕಿದೆ. ಈ ಮೂಲಕ ವಿವಾದದ ಬಿರುಗಾಳಿ ಎಬ್ಬಿಸಿದೆ ಲಾಲು ಯಾದವ್‌ರ ಆರ್‌ಜೆಡಿ ಪಕ್ಷದ ವಿವಾದಾತ್ಮಕ ಟ್ವೀಟ್.
ಬಿಹಾರ ಸಿಎಂ ನಿತೀಶ್ ಹೇಳಿಕೆ ಸಂಚಲನ!
ಒಂದು ಕಡೆ ಆರ್‌ಜೆಡಿ ಟ್ವೀಟ್ ಮೂಲಕ ವಿವಾದ ಸೃಷ್ಟಿಸಿದೆ, ಇನ್ನೊಂದ್ಕಡೆ ಬಿಹಾರ ಸಿಎಂ ನಿತೀಶ್ ಕೂಡ ನೂತನ ಸಂಸತ್ ಭವನ ಸ್ಥಾಪನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಹೊಸ ಸಂಸತ್ ಭವನ ಅಗತ್ಯವೇ ಇಲ್ಲ' ಎಂದಿದ್ದಾರೆ ನಿತೀಶ್ ಕುಮಾರ್. ಈ ಮೂಲಕ ನಿತೀಶ್ ಕುಮಾರ್ ಮಾತುಗಳು ಕೂಡ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗೆ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಪಕ್ಷ ಮತ್ತು ಲಾಲು ಪಕ್ಷ ಆರ್‌ಜೆಡಿ ಒಟ್ಟಾಗಿ ನೂತನ ಸಂಸತ್ ಭವನದ ವಿರುದ್ಧ ರೊಚ್ಚಿಗೆದ್ದಿವೆ.
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲೇ ನೂತನ ಸಂಸತ್ ಭವನ ಉದ್ಘಾಟನೆ ವಿಚಾರ ದೇಶದ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಪ್ರಧಾನಿ ಮೋದಿ ವಿರುದ್ಧ & ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ವಿಪಕ್ಷಗಳ ನಡೆಗೆ ಕೇರ್ ಮಾಡದೆ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನ ಅದ್ಧೂರಿಯಾಗಿ ನೆರವೇರಿಸಿದೆ.











Click it and Unblock the Notifications