RRTS ರೈಲುಗಳಿಗೆ 'ನಮೋ ಭಾರತ್' ಹೆಸರಿಗೆ ಕಾಂಗ್ರೆಸ್ ನಾಯಕರ ವಿರೋಧ
ನವದೆಹಲಿ, ಅಕ್ಟೊಬರ್ 20: ನವದೆಹಲಿಯ ವ್ಯಾಪ್ತಿಯ ಸಾರಿಗೆಯಾಗಿರುವ 'ರೀಜನಲ್ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್' ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೆಸರು ಈ ರೈಲುಗಳಿಗೆ ಇಟ್ಟಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿದೆ. ಈ ವಿಚಾರ ಸಂಬಂಧ ಕಾಂಗ್ರೆಸ್ ಇದೀಗ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಜೈರಾಮ್ ರಮೇಶ್ ಹಾಗೂ ಮುಖಂಡ ಪವನ್ ಖೇರಾ ಅವರು ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಮೊದಲು ಕ್ರೀಡಾಂಗಣವೊಂದಕ್ಕೆ 'ನಮೋ ಸ್ಟೇಡಿಯಂ' ಎನ್ನಲಾಯಿತು.ಇದೀಗ 'ನಮೋ ರೈಲುಗಳು' ಹೆಸರಿಡಲಾಗಿದೆ. ಅವರ ಸ್ವಯಂ ಗೀಳಿಗೆ ಮೀತಿಯೇ ಇಲ್ಲದಾಗಿದೆ ಎಂದು ಜೈರಾಮ್ ರಮೇಶ್ ಅವರು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೂ ಪವನ್ ಖೇರಾ ಅವರು ಸಹಿತಿ ವಾಗ್ದಾಳಿ ನಡೆಸಿದ್ದು, ದೇಶಕ್ಕೆ ಭಾರತ ಎಂದು ಕರೆಯುವ ಬದಲು ಅನ್ನು ಬದಲಾಯಿಸಿಬಿಡಿ. ದೇಶದ ಹೆಸರು ನಮೋ ಎಂದು ಬದಲಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆ.21ರಿಂದ ವಾಣಿಜ್ಯ ಕಾರ್ಯಾಚರಣೆ
ಭಾರತದಲ್ಲಿ ಇದೇ ಮೊದಲ ಬಾರಿಗೆ RRTS ರೈಲು ಮಾರ್ಗಗಳಲ್ಲಿ ಸಂಚಾರ ಆರಂಭವಾಗಿದೆ. ದೆಹಲಿಯ ಆರ್‌ಆರ್‌ಟಿಎಸ್ ಭಾಗವಾದ ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ಮಧ್ಯೆ ಈ ರೈಲುಗಳು ಇದೇ ಸೆಪ್ಟಂಬರ್ 21ರಿಂದ ಸಾರ್ವಜನಿಕರಿಗೆ ಸಂಚಾರ ಸೇವೆ ನೀಡಲಿವೆ. ಈ ಸಂಬಂಧ ರೈಲು ಮಾರ್ಗಕ್ಕೆ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು.

ಇವೆರಡು ಪ್ರದೇಶಗಳ ಮಧ್ಯೆ 17 ಕಿಲೋ ಮೀಟರ್ ಮಾರ್ಗವು ಉದ್ಘಾಟನೆಗೊಂಡಿದೆ. ಈ ಮಾರ್ಗದ ಮಧ್ಯೆ ಮಧ್ಯೆ ಶಹೀಬಾಬಾದ್, ಗಾಜಿಯಾಬಾದ್, ಗುಲ್ದಾರ್, ದುಹೈ ಮತ್ತು ದುಹೈ ಡಿಪೋ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇಲ್ಲಿ ರೈಲುಗಳು ಪ್ರತಿಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ.
ಮಹಾನಗರಗಳ ಮಧ್ಯೆದ ಸಂಪರ್ಕ ಸಾರಿಗೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಈ ಹೊಸ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ರೈಲುಗಳನ್ನು 'ನಮೋ ಭಾರತ್' ಎಂದು ಕರೆಯಲಾಗುತ್ತದೆ. ಇದು ರೈಲು ಆಧಾರಿತ ಹೈಸ್ಪೀಡ್, ಹೈ-ಫ್ರೀಕ್ವೆನ್ಸಿ, ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಮೆಟ್ರೋಪಾಲಿಟನ್ ಮತ್ತು ದೊಡ್ಡ ನಗರಗಳು, ಪಟ್ಟಣಗಳು ಮತ್ತು ನಗರ ನೋಡ್‌ಗಳನ್ನು ಸಂಪರ್ಕಿಸುವ ಪ್ರಾದೇಶಿಕ ಪ್ರಯಾಣ ಸಾರಿಗೆ ವ್ಯವಸ್ಥೆ ಆಗಿದೆ.












Click it and Unblock the Notifications