Lok Sabha Election: 'ನಿಮಗೆ ನಮ್ಮ ಸಮುದಾಯ ಮತ ಮಾತ್ರ ಬೇಕು: ಅಭ್ಯರ್ಥಿ ಅಲ್ಲ'

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಆರಿಫ್ ನಸೀಮ್ ಖಾನ್ ಕಾಂಗ್ರೆಸ್ ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ. ಅಲ್ಲದೆ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರವನ್ನು ಬರೆದಿದ್ದಾರೆ. ಖಾನ್ ಅವರು ಮುಸ್ಲಿಮರಿಗೆ ಅಭ್ಯರ್ಥಿಯನ್ನು ನೀಡದಿರುವುದು ತಮ್ಮ ಅಸಮಾಧಾನಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳ ಪೈಕಿ ಮಹಾವಿಕಾಸ್ ಅಘಾಡಿ ಒಬ್ಬ ಮುಸಲ್ಮಾನನನ್ನೂ ಅಭ್ಯರ್ಥಿಯನ್ನಾಗಿ ಮಾಡಿಲ್ಲ ಎಂದು ಬರೆದಿದ್ದಾರೆ.

ಮುಂಬೈ ಉತ್ತರ ಸೆಂಟ್ರಲ್ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಮುಂಬೈ ಕಾಂಗ್ರೆಸ್ ಮುಖ್ಯಸ್ಥೆ ವರ್ಷಾ ಗಾಯಕ್ವಾಡ್ ಹೆಸರನ್ನು ಘೋಷಿಸಿದ ಬೆನ್ನಲ್ಲೆ ಕಾಂಗ್ರೆಸ್‌ ನಾಯಕ ಮೊಹಮ್ಮದ್ ಆರಿಫ್ ನಸೀಮ್ ಖಾನ್ ಈ ನಿರ್ಧಾರವನ್ನು ಕೈ ಗೊಂಡಿದ್ದಾರೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಎಂವಿಎಗೆ ಅನ್ಯಾಯವಾಗಿದೆ ಎಂದು ಖಾನ್ ತಿಳಿಸಿದ್ದಾರೆ. ಆದ್ದರಿಂದ, ಪ್ರತಿಭಟನೆಯಲ್ಲಿ ಅವರು ಪಕ್ಷದ ಸ್ಟಾರ್ ಪ್ರಚಾರಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Congress Leader Questions Party Chief Seeking Muslim Votes Without Fielding Candidates

ಸಮುದಾಯದ ನಿರ್ಲಕ್ಷ

ಕಾಂಗ್ರೆಸ್‌ ಚುನವಣೆಯಲ್ಲಿ ಟಿಕೆಟ್‌ ನೀಡುವಾಗ ತಮ್ಮ ಸಮುದಾಯವನ್ನು ನಿರ್ಲಕ್ಷಿಸಿದೆ. ಅಲ್ಪ ಸಂಖ್ಯಾತರಿಗೆ ಏಕೆ ಅನ್ಯಾಯ ಅನ್ಯಾಯವಾಗುತ್ತಿದೆ ಎಂದು ಅವರು ನಸೀಮ್‌ ಖಾನ್‌ ಕಿಡಿಕಾರಿದ್ದಾರೆ. ಪಕ್ಷ ತನ್ನ ಸಿದ್ಧಾಂತರದಿಂದ ದೂರ ಸರಿಯುತ್ತಿದೆ ಎಂದು ಅವರು ದೂರಿದ್ದಾರೆ.

ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ 17ರಲ್ಲಿ ಕಾಂಗ್ರೆಸ್ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಮೈತ್ರಿಯೊಂದಿಗೆ ಸ್ಪರ್ಧಿಸುತ್ತಿದೆ. ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಮೊಹಮ್ಮದ್ ಆರಿಫ್ ಖಾನ್ ಟಿಕೆಟ್ ರೇಸ್‌ನಲ್ಲಿದ್ದರು. ಆರಿಫ್ ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಚಂಡಿವಾಲಿಯಿಂದ ಸ್ಪರ್ಧಿಸಿದ್ದರು, ಅಲ್ಲಿ ಅವರು 409 ಮತಗಳಿಂದ ಸೋತಿದ್ದರು.

Congress Leader Questions Party Chief Seeking Muslim Votes Without Fielding Candidates

ಟಿಕೆಟ್‌ ಬೇರೆಯವರಿಗೆ ನೀಡಿದಕ್ಕೆ ಬೇಸರ

ಎರಡು ತಿಂಗಳ ಹಿಂದೆ ನನಗೆ ಪಕ್ಷದ ಅಭ್ಯರ್ಥಿಯಾಗಲು ನಿರ್ಧರಿಸಲಾಗಿತ್ತು ಎಂದು ಖಾನ್ ಹೇಳಿದರು. ಇದು ಮುಂಬೈನ ಅಲ್ಪಸಂಖ್ಯಾತ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಆದರೆ, ಪಕ್ಷವು ಈ ಸ್ಥಾನದಿಂದ ಬೇರೆ ಹೆಸರನ್ನು ಘೋಷಿಸಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡಿದೆ.

ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ, ಎಂವಿಎ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಸಹ ನಾಮನಿರ್ದೇಶನ ಮಾಡಿಲ್ಲ." ಮಹಾರಾಷ್ಟ್ರದಾದ್ಯಂತ ಅನೇಕ ಮುಸ್ಲಿಂ ಸಂಘಟನೆಗಳು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ನಾಮ ನಿರ್ದೇಶನ ಮಾಡುವ ಆಸೆ ಇತ್ತು. ಆದರೆ ಇಟ್ಟುಕೊಂಡ ಆಸೆ ಎಲ್ಲವೂ ನುಚ್ಚೂ ನೂರಾಗಿದೆ ಎಂದು ಮೊಹಮ್ಮದ್ ಆರಿಫ್ ನಸೀಮ್ ಖಾನ್ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಬೇಕು, ಅಭ್ಯರ್ಥಿಗಳೇಕೆ ಬೇಡ ಎಂದು ಸಮುದಾಯದ ಮುಖಂಡರು ತಮ್ಮಲ್ಲಿ ಕೇಳುತ್ತಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಮುಖಂಡರನ್ನು ಎದುರಿಸುವಲ್ಲಿ ವಿಫಲವಾಗುತ್ತಿದ್ದೇನೆ. ಹೀಗಾಗಿ ಮನನೊಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+