ಕಾಂಗ್ರೆಸ್ಸಿಗರ ಸುಳ್ಳು ಆಣೆಯನ್ನು ನಂಬಬೇಡಿ: ಮೋದಿ ಮನವಿ
ಲುನಾವಾಡಾ(ಗುಜರಾತ್), ಡಿಸೆಂಬರ್ 09: ಸುಳ್ಳು ಭಾಷೆ ನೀಡುವ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಮರಳು ಮಾಡಿದಂತೇ, ಪಾಟೀದಾರ್ ಸಮುದಾಯದವರನ್ನೂ ಮರುಳುಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುಜರಾತಿನ ಲುನಾವಾಡಾ ಎಂಬಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವ ಸಮಯದಲ್ಲಿ ಪಾಟೀದಾರ್ ಕೋಟಾಕ್ಕೆ ಸಂಬಂಧಿಸಿದಂತೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದರು.

"ನಾನು ಕಾಂಗ್ರೆಸ್ಸಿಗರಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ, ನೀವು ಮುಸ್ಲಿಮರಿಗೆ ಲಾಲಿಪಾಪ್ ಕೊಟ್ಟು, ಮೀಸಲಾತಿ ನೀಡುತ್ತೇವೆ ಎಂದಿದ್ದಿರಿ. ಆದರೆ ನಾನು ನನ್ನ ಮುಸ್ಲಿಂ ಬಾಂಧವರನ್ನು ಕೇಳಲು ಇಷ್ಟಪಡುತ್ತೇನೆ, ಈ ದೇಶದಲ್ಲಿ ಎಲ್ಲಿಯಾದರೂ ನಿಮಗೆ ಮೀಸಲಾತಿ ನೀಡಲಾಗಿದೆಯೇ?" ಎಂದು ಪ್ರಶ್ನಿಸಿದರು.
ಗುಜರಾತ್ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಡಿ.14 ರಂಮದು ನಡೆಯಲಿರುವ ಎರಡನೇ ಹಂತದ ಮತದಾನದ ಸಲುವಾಗಿ ಘಟಾನುಘಟಿ ಮುಖಂಡರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೋದಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.












Click it and Unblock the Notifications